More

    ಯುಎಇ ಅಧ್ಯಕ್ಷ ಶೇಖ್​ ಖಲೀಫಾ ನಿಧನ

    ಅಬುಧಾಬಿ: ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಯುಎಇ ಅಧ್ಯಕ್ಷ ಶೇಖ್​ ಖಲೀಫಾ ಬಿನ್​ ಜಯಾದ್ ಅಲ್​ ನಹ್ಯಾನ್​ ಅವರು ಶುಕ್ರವಾರ ತಮ್ಮ 73ನೇ ವಯಸ್ಸಿಗೆ ನಿಧನ ಹೊಂದಿದರು.

    ಅನಾರೋಗ್ಯ ಕಾರಣದಿಂದ ಹಾಸಿಗೆ ಹಿಡಿದಿದ್ದ ಅವರು ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ. ಅವರ ಪರವಾಗಿ ಅವರ ಪುತ್ರ ಮೊಹಮ್ಮದ್​ ಬಿನ್​ ಜಯಾದ್​ ಅವರು ಆಡಳಿತ ನಡೆಸುತ್ತಿದ್ದಾರೆ.

    ಅವರ ನಿಧನಕ್ಕೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದು, ಯುಎಇಯಾದ್ಯಂತ 40 ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದ್ದು, ಮೂರು ದಿನ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ.

    2004ರಲ್ಲಿ ಅವರ ತಂದೆ ನಿಧನ ಬಳಿಕ 16ನೇ ರಾಜನಾಗಿ ಅಧಿಕಾರಕ್ಕೇರಿದ ಶೇಖ್​ ಖಲಿಫಾ ಅವರು ಅತಿ ಶ್ರೀಮಂತ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು. (ಏಜೆನ್ಸೀಸ್​)

    ಮದುವೆಯಲ್ಲೇ ಬೆಂಕಿ ಹಚ್ಚಿಕೊಂಡು ಓಡಿದ ನವ ವಧು-ವರ! ಆಮೇಲಾಗಿದ್ದೇನು? ಶಾಕಿಂಗ್​ ಇಲ್ಲಿದೆ

    ಕಾಂಗ್ರೆಸ್​ ಮನೆಯೊಂದು ಮೂರು ಬಾಗಿಲಾಗಿತ್ತು, ಈಗ ಒಂದು ಬಾಗಿಲನ್ನು ರಮ್ಯಾ ಅವರೇ ತೆಗೆದಿದ್ದಾರೆ: ಸಚಿವ ಆರ್​.ಅಶೋಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts