More

    ರಣಜಿ ಆಟಗಾರ ರೋಹಿತ್ ಶರ್ಮಾ ನಿಧನ! ಕ್ರಿಕೆಟಿಗನ ಸಾವಿಗೆ ಸಂತಾಪ ಸೂಚಿಸಿದ ಬಾಬರ್ ಅಜಂ!

    ಜೈಪುರ: ರಾಜಸ್ಥಾನ ಪರ ಆಡಿದ್ದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ನಿಧನರಾಗಿದ್ದಾರೆ. ರಣಜಿ ಕ್ರಿಕೆಟ್​ನಲ್ಲಿ ರಾಜಸ್ಥಾನ ಪರ ಹಲವು ಪಂದ್ಯಗಳಲ್ಲಿ ಆರಂಭಿಕರಾಗಿ ಆಡಿದ್ದ 40 ವರ್ಷದ ರೋಹಿತ್ ಶರ್ಮಾ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

    ಇದನ್ನೂ ಓದಿ: ಬಾಂಬ್ ಸ್ಫೋಟ ಸಂಭವಿಸಿದ ರಾಮೇಶ್ವರಂ ಕೆಫೆಯ ವಾರ್ಷಿಕ ಆದಾಯ ಎಷ್ಟಿದೆ ಗೊತ್ತಾ? ಕೇಳಿದ್ರೆ ದಂಗಾಗ್ತೀರಾ!

    ಯಕೃತ್ತು ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದ ರೋಹಿತ್ ಶರ್ಮಾ ಅವರನ್ನು ನಾಲ್ಕೈದು ದಿನಗಳ ಹಿಂದೆ ನಗರದ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ರೋಹಿತ್ ಸಾವನ್ನಪ್ಪಿದ್ದಾರೆ.

    ಪಾಕ್​ ಕ್ರಿಕೆಟಿಗನಿಂದ ಸಂತಾಪ: ರಾಜಸ್ಥಾನ ಪರ ಆಡಿದ್ದ ಮಾಜಿ ರಣಜಿ ಕ್ರಿಕೆಟಿಗ ರೋಹಿತ್ ಶರ್ಮಾ ನಿಧನಕ್ಕೆ ಪಾಕಿಸ್ತಾನ ಕ್ರಿಕೆಟ್​ ತಂಡದ ನಾಯಕ ಬಾಬರ್ ಅಜಂ ಸಂತಾಪ ಸೂಚಿಸಿದ್ದಾರೆ. ತಮ್ಮ ಎಕ್ಸ್​ ಖಾತೆಯಲ್ಲಿ ನಿಜವಾಗಿಯೂ ಶ್ರೇಷ್ಠ ಆಟಗಾರರಾಗಿದ್ದರು. ಅವರು ರಣಜಿ ಆಟಗಾರರಾಗಿ ರಾಜಸ್ಥಾನಕ್ಕೆ ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

    ರೋಹಿತ್ ಶರ್ಮಾ ವೃತ್ತಿಜೀವನ: ಕ್ರಿಕೆಟ್‌ಗೆ ರೋಹಿತ್ ಶರ್ಮಾ ಅವರ ಕೊಡುಗೆಗೆ ಸಂಬಂಧಿಸಿದಂತೆ, ಅವರು ರಾಜಸ್ಥಾನದ ರಣಜಿ ಕ್ರಿಕೆಟ್ ತಂಡಕ್ಕಾಗಿ ಏಳು ರಣಜಿ ಪಂದ್ಯಗಳನ್ನು ಒಳಗೊಂಡಂತೆ ತಮ್ಮ ವೃತ್ತಿಜೀವನದುದ್ದಕ್ಕೂ 28 ಏಕದಿನ ರಣಜಿ ಪಂದ್ಯಗಳನ್ನು ಆಡಿದ್ದಾರೆ. ಈ 28 ಪಂದ್ಯಗಳಲ್ಲಿ ಅವರು ಎರಡು ಶತಕ ಮತ್ತು ಮೂರು ಅರ್ಧಶತಕಗಳೊಂದಿಗೆ 35 ಕ್ಕಿಂತ ಹೆಚ್ಚು ಸರಾಸರಿಯಲ್ಲಿ ಒಟ್ಟು 850 ರನ್ ಕಲೆಹಾಕಿದ್ದರು.

    ಇದರ ಜೊತೆಗೆ, ಶರ್ಮಾ ನಾಲ್ಕು ಟಿ20 ಪಂದ್ಯಗಳನ್ನು ಆಡಿದ್ದಾರೆ. ಆಲ್‌ರೌಂಡರ್ ಆಗಿದ್ದ ರೋಹಿತ್ ಬೌಲಿಂಗ್​ನಲ್ಲೂ ಆರು ವಿಕೆಟ್‌ಗಳನ್ನು ಕಬಳಿಸಿದ್ದು, 2004 ರಿಂದ 2014 ರವರೆಗಿನ ಅವರ 10 ವರ್ಷಗಳ ವೃತ್ತಿಜೀವನದಲ್ಲಿ ಆಗಾಗ್ಗೆ ತಮ್ಮ ಆಲ್​ರೌಂಡರ್ ಪ್ರದರ್ಶನದಿಂದ ಎಲ್ಲರ ಗಮನ ಸೆಳೆದಿದ್ದರು.

    ಸನಾ ಜಾವೆದ್ ಕೈಹಿಡಿಯುತ್ತಿದ್ದಂತೆ ಕೈಕೊಟ್ಟ ಶೋಯೆಬ್ ಮಲಿಕ್ ಅದೃಷ್ಟ..! ಸಾನಿಯಾ ಶಾಪ ಇಷ್ಟು ಬೇಗ ತಟ್ಟಿತಾ ಎಂದ ನೆಟ್ಟಿಗರು 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts