More

    ಕಾರು-ಟ್ರಕ್ ನಡುವೆ ಭೀಕರ ಅಪಘಾತ! ಇಬ್ಬರು ಪೊಲೀಸ್ ಅಧಿಕಾರಿಗಳು ಸಾವು

    ಹರಿಯಾಣ: ಕ್ಯಾಂಟರ್ ಟ್ರಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಹರಿಯಾಣದ ಸೋನೆಪತ್ ಜಿಲ್ಲೆಯಲ್ಲಿ ವರದಿಯಾಗಿದ್ದು, ಭೀಕರ ಅಪಘಾತದ ದೃಶ್ಯಗಳು ಮಾಧ್ಯಮ ಮತ್ತು ಜಾಲತಾಣಗಳಲ್ಲಿ ಹರಿದಾಡಿದೆ. ಘಟನೆಯಲ್ಲಿ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ.

    ಇದನ್ನೂ ಓದಿ: ವಿದೇಶಿ ಉದ್ಯೋಗ ಫೇಕ್​ ಏಜೆನ್ಸಿ, ಆ್ಯಪ್​​ ಬಗ್ಗೆ ತಿಳಿಯೋದು ಹೇಗೆ?

    ಭೀಕರ ಅಪಘಾತದಲ್ಲಿ ರಸ್ತೆಯ ಬದಿಯಲ್ಲಿ ಟೈರ್ ಹಾರಿ ಬಿದ್ದಿದ್ದು, ಕಿಟಕಿಗಳೆಲ್ಲ ಒಡೆದು ಬಾನೆಟ್ ಸಂಪೂರ್ಣ ಜಖಂಗೊಂಡಿರುವುದು ದೃಶ್ಯದಲ್ಲಿ ಕಂಡುಬಂದಿದೆ. ಹರಿಯಾಣದ ಸೋನಿಪತ್ ಜಿಲ್ಲೆಯ ಕುಂಡಲಿ ಬಾರ್ಡರ್ ಬಳಿ ಸೋಮವಾರ ರಾತ್ರಿ 11:30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.

    ಈ ಅಕ್ಸಿಡೆಂಟ್ ಬೆನ್ನಲ್ಲೇ ಹರಿಯಾಣದ ಸಿರ್ಸಾದಲ್ಲಿ ಮತ್ತೊಂದು ರಸ್ತೆ ಅಪಘಾತ ವರದಿಯಾಗಿದ್ದು, ಮೂವರು ಪುರುಷರು ಮತ್ತು ಮೂವರು ಮಹಿಳೆಯರು ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ. ಇವರೆಲ್ಲರೂ ಪರಿಚಿತರೊಬ್ಬರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ರಾಜಸ್ಥಾನದ ಗಂಗಾನಗರ ನಗರದಿಂದ ಹರಿಯಾಣದ ಹಿಸಾರ್ ನಗರಕ್ಕೆ ಕಾರಿನಲ್ಲಿ ತೆರಳುತ್ತಿದ್ದರು ಎನ್ನಲಾಗಿದ್ದು, ಸಿರ್ಸಾದ ಶೇರ್‌ಗಢ್ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತಕ್ಕೆ ತುತ್ತಾಗಿದೆ.

    ಇದನ್ನೂ ಓದಿ: ‘ಕಲ್ಕಿ 2898 AD’ ರಿಲೀಸ್​ ಡೇಟ್​ ಗೊಂದಲಕ್ಕೆ ಬಿತ್ತು ತೆರೆ! ಈ ತಿಂಗಳಲ್ಲಿ ಬರಲಿದೆ ಪ್ರಭಾಸ್ ಸೈ-ಫೈ​ ಚಿತ್ರ

    ಅಪಘಾತದ ಮಾಹಿತಿ ಬಂದ ತಕ್ಷಣ ದಬವಾಲಿ ಆಂಬ್ಯುಲೆನ್ಸ್ ಚಾಲಕ ಕುಲವಂತ್ ಸಿಂಗ್ ಮತ್ತು ನಗರ ಪೊಲೀಸ್ ಠಾಣೆ ಪ್ರಭಾರಿ ದಬವಾಲಿ ಶೈಲೇಂದ್ರ ಕುಮಾರ್ ತಮ್ಮ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಕಾರಿನಿಂದ ಹೊರತೆಗೆದಿದ್ದಾರೆ. ಆದರೆ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ವೇಳೆ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).

    BBKS10: ಫಿನಾಲೆ ಹೊಸ್ತಿಲಲ್ಲಿ ಚೂರಿ! ವಿನಯ್​ ಹೃದಯಕ್ಕೆ ಇರಿದ ಪ್ರತಾಪ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts