More

    ಭಾರತದ ಇನ್ನೆರಡು ಬೀಚ್​​ಗಳಿಗೆ ಅಂತಾರಾಷ್ಟ್ರೀಯ ಬ್ಲೂ ಫ್ಲ್ಯಾಗ್​ ಮಾನ್ಯತೆ

    ನವದೆಹಲಿ: ಭಾರತದ ಇನ್ನೆರಡು ಸಮುದ್ರ ತೀರಗಳಿಗೆ ಪ್ರತಿಷ್ಠಿತ ಅಂತರರಾಷ್ಟ್ರೀಯ ‘ಬ್ಲೂ ಫ್ಲ್ಯಾಗ್’​ ಸರ್ಟಿಫಿಕೇಶನ್​ ಲಭಿಸಿದೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್​ ಯಾದವ್​ ಹೇಳಿದ್ದಾರೆ. ಸಮುದ್ರ ತೀರಗಳ ಉತ್ತಮ ನಿರ್ವಹಣೆ, ಆರೋಗ್ಯಕರ ವಾತಾವರಣ ಮತ್ತು ಸಮೃದ್ಧ ಜೀವಸಂಪತ್ತಿನ ಆಧಾರದ ಮೇಲೆ ಡೆನ್ಮಾರ್ಕಿನ ಫೌಂಡೇಶನ್ ಫಾರ್​ ಎನ್ವಿರಾನ್​ಮೆಂಟ್ ಎಜುಕೇಷನ್(ಎಫ್​ಇಇ)​ ನೀಡುವ ಮಾನ್ಯತೆ ಇದಾಗಿದೆ.

    ತಮಿಳುನಾಡಿನ ಕೋವಲಮ್​ ಬೀಚ್​ ಮತ್ತು ಪುದುಚೆರಿಯ ಈಡೆನ್​ ಬೀಚ್​ಗಳಿಗೆ ಇದೀಗ ಎಫ್​ಇಇಯ ಬ್ಲೂ ಫ್ಲ್ಯಾಗ್​ ಸರ್ಟಿಫಿಕೇಶನ್​ ಸಿಕ್ಕಿದೆ. 2020ರಲ್ಲಿ ಈ ಮಾನ್ಯತೆ ಗಳಿಸಿದ ಇತರ 8 ಬೀಚ್​ಗಳೂ ಸೇರಿದಂತೆ ಭಾರತದ 10 ಸಮುದ್ರ ತೀರಗಳು ಈ ಅಂತರರಾಷ್ಟ್ರೀಯ ಸಮ್ಮಾನ ಪಡೆದುಕೊಂಡಿವೆ. ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸ್ವಚ್ಛ ಮತ್ತು ಹಸಿರು ಭಾರತದ ಕಡೆಗಿನ ನಮ್ಮ ಪ್ರಯಾಣದಲ್ಲಿ ಮತ್ತೊಂದು ಮೈಲಿಗಲ್ಲಾಗಿದೆ ಎಂದು ಸಚಿವ ಯಾದವ್​ ಟ್ವೀಟ್​ ಮಾಡಿದ್ದಾರೆ.

    ಈ ಪ್ರತಿಷ್ಠಿತ ಎಕೋ-ಲೇಬಲ್​ ಪಡೆದಿರುವ ಭಾರತದ ಇತರ ಸಮುದ್ರ ತೀರಗಳೆಂದರೆ – ಶಿವರಾಜಪುರ-ಗುಜರಾತ್, ಘೋಘ್ಲಾ-ಡೈಯು, ಕಾಸರಕೋಡ್ ಮತ್ತು ಪಡುಬಿದ್ರಿ-ಕರ್ನಾಟಕ, ಕಪ್ಪದ್-ಕೇರಳ, ಋಷಿಕೊಂಡ- ಆಂಧ್ರ ಪ್ರದೇಶ, ಗೋಲ್ಡನ್ ಬೀಚ್​-ಒಡಿಶಾ ಮತ್ತು ರಾಧಾನಗರ-ಅಂಡಮಾನ್ ಮತ್ತು ನಿಕೋಬಾರ್. ಇವುಗಳಿಗೆ ಕಳೆದ ವರ್ಷ ಬ್ಲೂ ಫ್ಲ್ಯಾಗ್​ ನೀಡಲಾಗಿದ್ದು, ಇದೀಗ ಆ ಪ್ರಮಾಣಪತ್ರಗಳನ್ನೂ ನವೀಕರಿಸಲಾಗಿದೆ ಎಂದು ಪ್ರೆಸ್​ ಇನ್​ಫರ್ಮೇಷನ್ ಬ್ಯೂರೋ ತಿಳಿಸಿದೆ. (ಏಜೆನ್ಸೀಸ್)

    ತಡರಾತ್ರಿ ಮನೆಗೆ ಹಿಂತಿರುಗುತ್ತಿದ್ದ ಯುವತಿಯನ್ನು ರೇಪ್​ ಮಾಡಿದ ಕ್ಯಾಬ್​ ಡ್ರೈವರ್; ಮದ್ಯಪಾನವೇ ಮುಳುವಾಯ್ತಾ?

    ‘ಗಂಡಸಿನಂಥ ದೇಹದವಳು ತಾಪ್ಸೀನೇ’ ಎಂದ ಟ್ವೀಟ್​ಗೆ ನಟಿ ನೀಡಿದ ಉತ್ತರ ನೋಡಿ!

    ಗೃಹ ಸಚಿವ ಆರಗ ಜ್ಞಾನೇಂದ್ರಗೆ ಕ್ಲಾಸ್​ ತೊಗೊಂಡ ಸಿದ್ದು; ಸುಧಾಕರ್​ ಮೇಲೂ ಗರಂ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts