More

    ಬೋನಿಗೆ ಬೀಳುತ್ತಲೇ ಇವೆ ಚಿರತೆಗಳು.. ಇನ್ನೂ ಅದೆಷ್ಟು ಇದ್ದಾವೋ..?

    ಮಾಗಡಿ: ತಾಲೂಕಿನಲ್ಲಿ ಮತ್ತೆರಡು ಚಿರತೆ ಬೋನಿಗೆ ಬಿದ್ದಿವೆ. ಒಟ್ಟಾರೆ ಮೂರು ದಿನದಲ್ಲಿ ನಾಲ್ಕು ಚಿರತೆ ಸೆರೆ ಸಿಕ್ಕಂತಾಗಿದೆ. ಇತ್ತೀಚಿಗೆ ಮೂರು ವರ್ಷದ ಮಗು ಮತ್ತು ವೃದ್ಧೆಯನ್ನು ಬಲಿ ಪಡೆದ ಚಿರತೆಗಳು ಇಡೀ ತಾಲೂಕನ್ನೇ ಬೆಚ್ಚಿ ಬೀಳಿಸಿದ್ದವು. ಸದ್ಯ ಚಿರತೆ ಸೆರೆ ಹಿಡಿಯುವ ಕಾಯಾರ್ಚರಣೆ ಯಶಸ್ವಿಯಾಗುತ್ತಿದ್ದು, ಸ್ಥಳೀಯ ನಿವಾಸಿಗಳು ತುಸು ನಿಟ್ಟುಸಿರು ಬಿಡುವಂತಾಗಿದೆ.

    ಇದನ್ನೂ ಓದಿರಿ ವೃದ್ಧೆಯ ಕೊಂದ ಚಿರತೆ ಸೆರೆ ಹಿಡಿಯಲು ಡ್ರೋನ್‌ ಬಳಕೆ!

    ಬೋನಿಗೆ ಬೀಳುತ್ತಲೇ ಇವೆ ಚಿರತೆಗಳು.. ಇನ್ನೂ ಅದೆಷ್ಟು ಇದ್ದಾವೋ..?
    ಮಾಗಡಿ ತಾಲೂಕು ತೊರೆಚೇನಹಳ್ಳಿಯಲ್ಲಿ ಬುಧವಾರ ಬೋನಿಗೆ ಬಿದ್ದ ಚಿರತೆ.

    ಬುಧವಾರ ತೊರೆಚೇನಹಳ್ಳಿ ಬಳಿ 4 ವರ್ಷದ ಚಿರತೆ ಹಾಗೂ ಹೊಸಪಾಳ್ಯದಲ್ಲಿ 3 ವರ್ಷದ ಚಿರತೆ ಬೋನಿಗೆ ಬಿದ್ದಿವೆ. ತೊರೆಚೇನಹಳ್ಳಿಯಲ್ಲಿ ಮಂಗಳವಾರ ಬೈಲನರಸಯ್ಯ ಮತ್ತು ಸುಮಲತಾ ಎಂಬುವವರು ಹೊಲದಲ್ಲಿ ಜಾನುವಾರು ಮೇಯಿಸುತ್ತಿದ್ದ ವೇಳೆ ಚಿರತೆ ದಾಳಿ ಮಾಡಿ ಗಾಯಗೊಳಿಸಿತ್ತು. ಆ ಸ್ಥಳದ ಸಮೀಪವೇ ಅರಣ್ಯ ಸಿಬ್ಬಂದಿ ಇಟ್ಟಿದ್ದ ಬೋನಿನಲ್ಲಿ ಬುಧವಾರ ಚಿರತೆ ಸೆರೆಯಾಗಿದೆ. ಕೊತ್ತಗಾನಹಳ್ಳಿಯ ವೃದ್ಧೆಯನ್ನು ಚಿರತೆ ಬಲಿ ಪಡೆದಿದ್ದ ಸ್ಥಳದಿಂದ ಈ ಗ್ರಾಮ ಅರ್ಧ ಕಿಲೋ ಮೀಟರ್​ ದೂರದಲ್ಲಿದೆ. ಹೊಸಪಾಳ್ಯ ಬಳಿ ಇಟ್ಟಿದ್ದ ಬೋನಿನಲ್ಲಿ ಬುಧವಾರ ಮುಂಜಾನೆ 3 ವರ್ಷದ ಗಂಡು ಚಿರತೆ ಸೆರೆಯಾಗಿದೆ.

    ಈ ನಡುವೆ ಸೋಮವಾರ ಸಂಜೆ ಬೋಡಗನಪಾಳ್ಯದ ಯುವತಿ ಮೇಲೆ ದಾಳಿ ನಡೆಸಲು ಬಂದ ಚಿರತೆಯನ್ನು ಬೆನ್ನಟ್ಟಿ ಹೊರಟ ಗ್ರಾಮಸ್ಥರೇ ಅದನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಮಂಗಳವಾರ ಬೆಳಗಿನ ಜಾವ ತಗ್ಗಿಕುಪ್ಪೆ ಬಳಿಯೂ ಮತ್ತೊಂದು ಚಿರತೆ ಬೋನಿಗೆ ಬಿದ್ದಿತ್ತು.

    ಇದನ್ನೂ ಓದಿರಿ ಮಗು, ವೃದ್ಧೆ ಬಲಿಯಾಗಿದ್ದ ಊರಲ್ಲಿ 2 ಚಿರತೆ ಸೆರೆಯಾಗಿದ್ದೇ ರೋಚಕ!

    ಕೊತ್ತಗಾನಹಳ್ಳಿ ಮತ್ತು ಹೊಸಪಾಳ್ಯ ಗ್ರಾಮಕ್ಕೆ ಸುಮಾರು 2 ಕಿ.ಮೀ. ಅಂತರವಿದ್ದು, ಈ ವ್ಯಾಪ್ತಿಯಲ್ಲಿ ಮೇ 9ರಿಂದ ಇದುವರೆಗೂ 10 ಚಿರತೆ ಹಾಗೂ ಎರಡು ಮರಿಚಿರತೆಗಳನ್ನು ಸೆರೆ ಹಿಡಿಯಲಾಗಿದೆ. ಇನ್ನೊಂದು ಹೆಣ್ಣು ಚಿರತೆ ಬೋಡಗನಪಾಳ್ಯದ ವೀರಲಿಂಗಯ್ಯ ಎಂಬುವರ ತೋಟದ ಬಳಿ ಬೆಳಗಿನ ವೇಳೆ ಮತ್ತು ಸಂಜೆ ನಂತರ ಗ್ರಾಮಗಳ ಬಳಿ ಕಾಣಿಸಿಕೊಳ್ಳುತ್ತಿದೆ. ಇದರಿಂದ ಗ್ರಾಮಸ್ಥರು ಜಮೀನು ಬಳಿ ಹೋಗಲೂ ಭಯ ಪಡುತ್ತಿದ್ದಾರೆ.

    ಅರಣ್ಯ ಇಲಾಖೆಯ 20 ಸಿಬ್ಬಂದಿ ಚಿರತೆಗಳ ಚಲನವಲನ ಮೇಲೆ ನಿಗಾ ಇಟ್ಟಿದ್ದು, ಬೋನುಗಳನ್ನಿಟ್ಟು ಹಗಲಿರುಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇನ್ನೂ 5 ಚಿರತೆ ಇರುವ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿರಿ ಮತ್ತೊಮ್ಮೆ ರಾಷ್ಟ್ರ ರಾಜಕೀಯಕ್ಕೆ ದೇವೇಗೌಡ ಎಂಟ್ರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts