More

    ಮಗು, ವೃದ್ಧೆ ಬಲಿಯಾಗಿದ್ದ ಊರಲ್ಲಿ 2 ಚಿರತೆ ಸೆರೆಯಾಗಿದ್ದೇ ರೋಚಕ!

    ಮಾಗಡಿ: ಇತ್ತೀಚೆಗೆ ಚಿರತೆ ದಾಳಿಗೆ ಮಗು ಮತ್ತು ವೃದ್ಧೆ ಬಲಿಯಾದ ಪ್ರಕರಣಗಳು ಇಡೀ ತಾಲೂಕನ್ನೇ ಬೆಚ್ಚಿಬೀಳಿಸಿತ್ತು. ಸಾರ್ವಜನಿಕರು ಜೀವಭಯದಲ್ಲೇ ಓಡಾಡುತ್ತಿದ್ದರು. ಈ ನಡುವೆ ಸೋಮವಾರ ಸಂಜೆ ಬೋಡಗನಪಾಳ್ಯದ ಯುವತಿ ಮೇಲೆ ದಾಳಿ ನಡೆಸಲು ಬಂದ ಚಿರತೆಯನ್ನು ಬೆನ್ನಟ್ಟಿ ಹೊರಟ ಗ್ರಾಮಸ್ಥರೇ ಅದನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮರುದಿನ ಬೆಳಗ್ಗೆ ತಗ್ಗಿಕುಪ್ಪೆ ಬಳಿಯೂ ಮತ್ತೊಂದು ಚಿರತೆ ಬೋನಿಗೆ ಬಿದ್ದಿದ್ದು, ಸುತ್ತಮುತ್ತಲ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

    ಇದನ್ನೂ ಓದಿರಿ ಫೋನ್​ ಪೇ ಮೂಲಕ ಪತ್ನಿಯ ಹಣ ಕದ್ದವ ಬೆಂಕಿ ಹಚ್ಚಿಕೊಂಡು ಬಾವಿಗೆ ಹಾರಿದ!

    ಮಗು, ವೃದ್ಧೆ ಬಲಿಯಾಗಿದ್ದ ಊರಲ್ಲಿ 2 ಚಿರತೆ ಸೆರೆಯಾಗಿದ್ದೇ ರೋಚಕ!ಇತ್ತೀಚೆಗೆ ಕೊತ್ತಗಾನಹಳ್ಳಿಯ ವೃದ್ಧೆ ಗಂಗಮ್ಮ ಹಾಗೂ ಕದರಯ್ಯನಪಾಳ್ಯದಲ್ಲಿ ಮೂರು ವರ್ಷದ ಬಾಲಕ ಹೇಮಂತ್​ ಚಿರತೆ ದಾಳಿಗೆ ಬಲಿಯಾಗಿದ್ದರು. ಈ ಎರಡೂ ಗ್ರಾಮಗಳ ಮಧ್ಯದಲ್ಲಿರುವ ಬೋಡಗನಪಾಳ್ಯದಲ್ಲಿ ಅರಣ್ಯ ಇಲಾಖೆ ಬೋನು ಇಟ್ಟಿತ್ತು. ಸೋಮವಾರ ಸಂಜೆ ಬೋಡಗನಪಾಳ್ಯದಲ್ಲಿ ಮೆದೆಯಲ್ಲಿ ಹುಲ್ಲು ತೆಗೆದುಕೊಳ್ಳುತ್ತಿದ್ದ ಯುವತಿ ಜ್ಯೋತಿ ಮೇಲೆ ಚಿರತೆ ದಾಳಿ ನಡೆಸಲು ಮುಂದಾಗಿದೆ. ಅಷ್ಟರಲ್ಲಿ ಯುವತಿ ಚೀರಾಡಿದ್ದು, ಚಿರತೆ ಪರಾರಿಯಾಗಿದೆ.

    ಎಚ್ಚೆತ್ತ ಗ್ರಾಮಸ್ಥರು ಅರಣ್ಯ ಇಲಾಖೆ ಮುತ್ತುರಾಯನಗುಡಿ ಪಾಳ್ಯ ಕಾಲನಿ ಬಳಿ ಇಟ್ಟಿದ್ದ ಬೋನನ್ನು ರಾತ್ರಿ 8ರ ಸುಮಾರಿನಲ್ಲಿ ಬೋಡಗನಪಾಳ್ಯದ ಬಳಿ ಇಟ್ಟು ಒಳಗೆ ಮೇಕೆ ಮರಿ ಕಟ್ಟಿದ್ದರು. ರಾತ್ರಿ 11ರ ಸುಮಾರಿನಲ್ಲಿ ಗಂಡು ಮತ್ತು ಹೆಣ್ಣು ಚಿರತೆ ಒಟ್ಟಾಗಿ ಬಂದಿದ್ದು, ಆ ಪೈಕಿ ಗಂಡು ಚಿರತೆ(11 ವರ್ಷ) ಬೋನಿಗೆ ಬಿದ್ದಿದೆ. ಸುಮಾರು ಒಂದು ಗಂಟೆ ಕಾಲ ಗ್ರಾಮದ ಸುತ್ತಮುತ್ತ ಹೆಣ್ಣು ಚಿರತೆ ಓಡಾಡುತ್ತಿತ್ತು. ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಬಂದ ಸಿಬ್ಬಂದಿ ಚಿರತೆಯನ್ನು ಓಡಿಸಿದ್ದಾರೆ.

    ಇದನ್ನೂ ಓದಿರಿ ಮನೆಯಲ್ಲಿ ಮಲಗಿದ್ದ 3 ವರ್ಷದ ಮಗುವನ್ನು ಹೊತ್ತೊಯ್ದು ಕೊಂದು ತಿಂದ ಚಿರತೆ

    ಮುತ್ತುರಾಯನಗುಡಿ ಪಾಳ್ಯ ಕಾಲನಿಯಲ್ಲಿ ತಪ್ಪಿಸಿಕೊಂಡ 2 ವರ್ಷದ ಹೆಣ್ಣು ಚಿರತೆ ತಗ್ಗಿಕುಪ್ಪೆ ಕೆರೆ ಬಳಿ ಮಂಗಳವಾರ ಬೆಳಗ್ಗೆ ಬೋನಿಗೆ ಬಿದ್ದಿದೆ. ತಗ್ಗಿಕುಪ್ಪೆ, ಕರಗದಹಳ್ಳಿ, ಜೋಗಿಪಾಳ್ಯ, ಕೆಬ್ಬೆಪಾಳ್ಯ, ಬೆಟ್ಟದಾಸಿಪಾಳ್ಯ ಸೇರಿ ಸುತ್ತಮುತ್ತಲ ಗ್ರಾಮಸ್ಥರ ನೆಮ್ಮದಿಗೆ ಚಿರತೆ ಭಂಗ ತಂದಿತ್ತು. ತಗ್ಗಿಕುಪ್ಪೆ ಗ್ರಾಪಂ ವ್ಯಾಪ್ತಿಯಲ್ಲಿ 6 ತಿಂಗಳಿಂದ ಸುತ್ತಮುತ್ತಲ ಗ್ರಾಮಗಳ ಬಳಿ ಹಗಲಲ್ಲೇ ಪ್ರತ್ಯಕ್ಷವಾಗುತ್ತಿತ್ತು. ರೈತರು ಜಾನುವಾರು ಮೇಯಿಸಲು ಜಮೀನಿನ ಬಳಿ ಹೋಗಲೂ ಹೆದರುತ್ತಿದ್ದರು. ನಂತರ ಗ್ರಾಮದ ಬಳಿ ಇಟ್ಟಿದ್ದ ಬೋನಿನಲ್ಲಿ ಚಿರತೆ ಸರೆಯಾಗಿದೆ.

    ಅರಣ್ಯ ಇಲಾಖೆಯವರು ಬೋನು ಇಟ್ಟು ಹೋದರೆ ಮತ್ತೆ ಬರೋದು ಚಿರತೆ ಸೆರೆ ಸಿಕ್ಕ ನಂತರವಷ್ಟೆ. ಚಿರತೆ ಸೆರೆ ಹಿಡಿಯಲು ಚಂದಾ ಎತ್ತಿ ಮೇಕೆ ಖರೀದಿಸಿ ಬೋನಿನಲ್ಲಿ ಹಾಕುವಂತಾಗಿದೆ ಎಂದು ಮುತ್ತುರಾಯನಪಾಳ್ಯ ಕಾಲನಿಯ ಲಕ್ಷ್ಮೀಕಾಂತ್​ ಅಧಿಕಾರಿಗಳ ನಡೆಗೆ ಅಸಮಾಧಾನ ಹೊರಹಾಕಿದ್ದಾರೆ.

    ಇದನ್ನೂ ಓದಿರಿ ಸೆಕೆ ಅಂತ ಮನೆಯ ಪಡಸಾಲೆಯಲ್ಲಿ ಮಲಗಿದ್ದ ವೃದ್ಧೆಯನ್ನು ಎಳೆದೊಯ್ದು ತಿಂದ ಚಿರತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts