More

    ನಿಜಕ್ಕೂ ಪವಾಡವೇ… 20 ಅಡಿ ಆಳದ ಹೊಂಡಕ್ಕೆ ಎಸೆದರೂ 2 ದಿನದ ಹಸುಗೂಸು ಬದುಕುಳಿದಿದ್ದೇ ರೋಚಕ!

    ಲಖನೌ: ಸುಮಾರು 20 ಅಡಿ ಆಳದ ಹೊಂಡಕ್ಕೆ ಎಸೆದರು ನವಜಾತ ಶಿಶುವೊಂದು ಪವಾಡಸದೃಶ ರೀತಿಯಲ್ಲಿ ಬದುಕುಳಿದಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ನವಾಬ್​ಗಂಜ್​ನಲ್ಲಿ ನಡೆದಿದೆ.

    ಹೊಂಡದಲ್ಲಿ ಬೆಳೆದಿದ್ದ ಗಿಡಗಂಟಿಗಳಿಂದಾಗಿ ಮಗು ಬದುಕುಳಿದಿದೆ. ಯಾರೋ ಪಾಪಿಗಳು ಮಗುವನ್ನು ಎಸೆದು ತಕ್ಷಣ ಅಲ್ಲಿಂದ ಪರಾರಿಯಾಗಿದ್ದಾರೆ. ಆದರೆ, ವಿಧಿ ನಿಯಮ ಬೇರೆಯಾಗಿತ್ತು. ಏಕೆಂದರೆ, ಮಗು ನೀರಿನಲ್ಲಿ ಮುಳುಗಲೇ ಇಲ್ಲ. ಹೊಂಡದಲ್ಲಿ ಬೆಳೆದಿದ್ದ ಗಿಡಗಂಟಿಗಳ ಮೇಲೆ ಮಗು ಬಿದ್ದಿದೆ. ಇದರಿಂದ ಮಗು ನೀರಿನಲ್ಲಿ ಮುಳುಗದೇ ತೇಲಾಡುತ್ತಿತ್ತು.

    ಇದನ್ನೂ ಓದಿ: ನಿರಂತರ ನಿರ್ವಿಷ ತರಕಾರಿ: ತರಕಾರಿ ಕೃಷಿಗೆ ವರ್ಮುಡಿ ಕಾಲ್ಯೆಂಡರ್

    ಬಿಳಿ ಬಣ್ಣದ ಬಟ್ಟೆಯನ್ನು ಸುತ್ತಿ ಮಗುವನ್ನು ನೀರಿನಲ್ಲಿ ಎಸೆಯಲಾಗಿತ್ತು. ಗ್ರಾಮದ ಮುಖ್ಯಸ್ಥ ಹೊಂಡದ ಪಕ್ಕದಲ್ಲಿ ನಡೆದು ಹೋಗುವಾಗ ಮಗು ಅಳುವ ಶಬ್ದ ಕೇಳಿ ಆ ಕಡೆ ತಿರುಗಿ ನೋಡಿದ್ದಾರೆ. ಈ ವೇಳೆ ಮಗು ಗಿಡಗಂಟಿಗಳ ನಡುವೆ ಸಿಲುಕಿ ತೇಲಾಡುತ್ತಿರುವುದನ್ನು ಕಂಡ ತಕ್ಷಣ ಸ್ಥಳೀಯರ ಜೊತೆ ಸೇರಿ ರಕ್ಷಣೆ ಮಾಡಿದ್ದಾರೆ.

    ರಕ್ಷಣೆಯ ಬಳಿಕ ಮಗುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಇದಾದ ಬಳಿಕ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಗೆ ಸ್ಥಳಾಂತರಿಸಲಾಯಿತು. ಮಗುವಿಗೆ ಗಂಗಾ ಎಂದು ಹೆಸರಿಡಲಾಗಿದೆ. ಈ ಕೃತ್ಯ ಎಸಗಿದ ಪಾಪಿಗಳು ಯಾರು ಎಂಬುದನ್ನು ಇನ್ನು ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. (ಏಜೆನ್ಸೀಸ್​)

    13 ವರ್ಷದ ಬಾಲಕನ ಜತೆ ದೇಹ ಹಂಚಿಕೊಂಡು ಗರ್ಭಿಣಿಯಾದ ಮಹಿಳೆಗೆ ಜೈಲು ಶಿಕ್ಷೆಯಿಂದ ಮುಕ್ತಿ!

    ಭೂತಾನ್ ಪ್ರವಾಸ; ಚಿನ್ನದಂಥ ಅವಕಾಶ

    ಕಿಚ್ಚನ ಮುಂದಿನ ಸಿನಿಮಾ ಬಿಲ್ಲ ರಂಗ ಬಾಷ! ಅನೂಪ್​ ಭಂಡಾರಿ ಕೊಟ್ಟ ಸುಳಿವಿಗೆ ಸುದೀಪ್​ ಫ್ಯಾನ್ಸ್​ ದಿಲ್​ ಖುಷ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts