More

    ಭೂತಾನ್ ಪ್ರವಾಸ; ಚಿನ್ನದಂಥ ಅವಕಾಶ

    ಭೂತಾನ್​ಗೆ ಪ್ರವಾಸೋದ್ಯಮ ಕೈಗೊಳ್ಳುವುದು ಇನ್ನು ಮುಂದೆ ಭಾರತೀಯರಿಗೆ ಚಿನ್ನದ ಮೊಟ್ಟೆ ಇಡುವ ಕೋಳಿ ಎನ್ನಬಹುದು. ಭೂತಾನ್​ಗೆ ಭೇಟಿ ನೀಡುವ ಪ್ರವಾಸಿಗರು ಸುಸ್ಥಿರ ಅಭಿವೃದ್ಧಿ ಶುಲ್ಕ ಪಾವತಿಸಿದರೆ ಆ ದೇಶದಿಂದ ಸುಂಕರಹಿತವಾಗಿ ಚಿನ್ನವನ್ನು ಖರೀದಿಸಿ ತರಲು ಈಗ ಅವಕಾಶ ದೊರೆತಿದೆ. ಭಾರತಕ್ಕಿಂತಲೂ ಅಗ್ಗದ ದರದಲ್ಲಿ ಅಲ್ಲಿ ಚಿನ್ನ ದೊರೆಯುತ್ತದೆ.

    ಭೂತಾನ್ ದೊರೆಯ ಜನ್ಮ ದಿನ ಹಾಗೂ ಭೂತಾನ್ ನೂತನ ವರ್ಷಾಚರಣೆ ಲೋಸರ್ ಸಂದರ್ಭದಲ್ಲಿ ಭೂತಾನ್ ಪ್ರವಾಸೋದ್ಯಮ ಇಲಾಖೆಯು ಹೊರದೇಶದ ಪ್ರವಾಸಿಗರನ್ನು ಆಕರ್ಷಿಸುವಂತಹ ವಿಶಿಷ್ಟ ನಿರ್ಧಾರವನ್ನು ಕೈಗೊಂಡಿದೆ. ಭೂತಾನ್​ಗೆ ಭೇಟಿ ನೀಡುವ ಹೊರದೇಶದ ಪ್ರವಾಸಿಗರು ಸುಸ್ಥಿರ ಅಭಿವೃದ್ಧಿ ಶುಲ್ಕ (ಸಸ್ಟೆನೇಬಲ್ ಡೆವಲಪ್​ವೆುಂಟ್ ಫಿ- ಎಸ್​ಡಿಎಫ್) ಪಾವತಿಸಿದರೆ ಇನ್ನು ಮುಂದೆ ಫುಯೆನ್​ಶೋಲಿಂಗ್ ಮತ್ತು ಥಿಂಪು ನಗರಗಳಲ್ಲಿ ಸುಂಕ ರಹಿತ ಚಿನ್ನವನ್ನು ಖರೀದಿಸಬಹುದು.

    ಭೂತಾನ್​ಗೆ ಪ್ರವಾಸ ಕೈಗೊಳ್ಳುವ ವಿದೇಶಿಯರ ಪೈಕಿ ಭಾರತೀಯರ ಸಂಖ್ಯೆಯೇ ಅಧಿಕವಾಗಿದೆ. ಹೀಗಾಗಿ, ಈ ಯೋಜನೆಯು ಭಾರತೀಯರಿಗೇ ಹೆಚ್ಚು ಪ್ರಯೋಜನಕಾರಿಯಾಗಿ ಪರಿಣಮಿಸಲಿದೆ ಎಂದು ನಿರೀಕ್ಷಿಸಲಾಗಿದೆ.

    ಭೂತಾನ್ ಪ್ರವಾಸೋದ್ಯಮ ಇಲಾಖೆಯಿಂದ ಪ್ರಮಾಣೀಕೃತಗೊಂಡ ಹೋಟೆಲ್​ನಲ್ಲಿ ಕನಿಷ್ಠ ಒಂದು ರಾತ್ರಿ ತಂಗುವವರು ಮಾತ್ರ ಸುಂಕ ಮುಕ್ತ ಚಿನ್ನವನ್ನು ಖರೀದಿಸಲು ಅರ್ಹರಾಗಿರುತ್ತಾರೆ. ಇದೇ ಮಾರ್ಚ್ 1 ರಿಂದ ಭೂತಾನ್​ನ ರಾಜಧಾನಿ ಥಿಂಪೂ ಮತ್ತು ಫುಯೆನ್​ಶೋಲಿಂಗ್ ನಗರಗಳಲ್ಲಿ ಚಿನ್ನ ಖರೀದಿಗೆ ಈ ಯೋಜನೆಯಡಿ ಅವಕಾಶ ಕಲ್ಪಿಸಲಾಗಿದೆ.

    ಇದನ್ನೂ ಓದಿ: ಎನ್​ಐಎ ತಂಡದ ಪೊಲೀಸ್ ವಾಹನಕ್ಕೆ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಬಲಿ

    ಎರಡು ಶುಭ ದಿನಗಳನ್ನು (ಭೂತಾನ್ ದೊರೆಯ ಜನ್ಮ ದಿನ ಮತ್ತು ಭೂತಾನ್​ನ ಹೊಸ ವರ್ಷ ಲೋಸರ್) ಆಚರಿಸಲು ಪ್ರವಾಸೋದ್ಯಮ ಇಲಾಖೆಯು ಭೂತಾನ್ ಡ್ಯೂಟಿ-ಫ್ರಿ (ಬಿಡಿಎಫ್) ಸಹಭಾಗಿತ್ವದಲ್ಲಿ ಸುಂಕ ಮುಕ್ತ ಚಿನ್ನವನ್ನು ಸೀಮಿತ ಪ್ರಮಾಣದಲ್ಲಿ ಮಾರಾಟ ಮಾಡಲು ಮುಂದಾಗಿದೆ ಎಂದು ಭೂತಾನ್​ನ ಮಾಧ್ಯಮಗಳು ವರದಿ ಮಾಡಿವೆ.

    ಐಷಾರಾಮಿ ವಸ್ತುಗಳನ್ನು ಮಾರಾಟ ಮಾಡುವ ಮತ್ತು ಭೂತಾನ್ ಹಣಕಾಸು ಸಚಿವಾಲಯದ ಒಡೆತನದಲ್ಲಿರುವ ಸುಂಕ ಮುಕ್ತ ಮಳಿಗೆಗಳ ಮೂಲಕ ಚಿನ್ನವನ್ನು ಮಾರಾಟ ಮಾಡಲಾಗುತ್ತಿದೆ. ತೆರಿಗೆ ಮುಕ್ತವಾಗಿರುವುದು ಮಾತ್ರವಲ್ಲದೆ, ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಯಾವುದೇ ಲಾಭವನ್ನು ಪಡೆದುಕೊಳ್ಳದೆಯೇ ಈ ಮಳಿಗೆಗಳು ಚಿನ್ನವನ್ನು ಮಾರಾಟ ಮಾಡಲು ಮುಂದಾಗಿವೆ.

    ಲಾಭ ಹೇಗೆ?

    ಭಾರತದಲ್ಲಿ ಪ್ರಸ್ತುತ 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ಅಂದಾಜು 56 ಸಾವಿರ ರೂಪಾಯಿ ಇದೆ. ಭೂತಾನ್​ನಲ್ಲಿ ಇದೇ ಪ್ರಮಾಣದ ಚಿನ್ನಕ್ಕೆ ಅಂದಾಜು 40 ಸಾವಿರ ನಗುಲ್ತರಮ್ (ಘಜ್ಠ್ಝrಞ) ಪಾವತಿಸಬೇಕಾಗುತ್ತದೆ. ಭೂತಾನ್ ಕರೆನ್ಸಿ ನಗುಲ್ತರಮ್ ಹಾಗೂ ಭಾರತದ ರೂಪಾಯಿ ವಿನಿಮಯ ದರವು ಬಹುತೇಕವಾಗಿ ಸರಿಸಮನಾಗಿದೆ. ಹೀಗಾಗಿ, ಭೂತಾನ್​ನಲ್ಲಿ ಭಾರತೀಯರು 10 ಗ್ರಾಂನ 24 ಕ್ಯಾರೆಟ್ ಚಿನ್ನಕ್ಕೆ ಅಂದಾಜು 40 ಸಾವಿರ ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.

    ಎಷ್ಟು ಬಂಗಾರ ತರಬಹುದು?

    ಭಾರತದ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯ ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ, ಒಬ್ಬ ಭಾರತೀಯ ಪುರುಷ ರೂ 50,000 ಮೌಲ್ಯದ ಚಿನ್ನವನ್ನು (ಸುಮಾರು 20 ಗ್ರಾಂ) ಮತ್ತು ಭಾರತೀಯ ಮಹಿಳೆ ರೂ. 1 ಲಕ್ಷ ಮೌಲ್ಯದ ಚಿನ್ನವನ್ನು (ಸುಮಾರು 40 ಗ್ರಾಂ) ಭಾರತಕ್ಕೆ ತೆರಿಗೆ ಮುಕ್ತವಾಗಿ ವಿದೇಶದಿಂದ ತರಬಹುದು.

    ಏನಿದು ಎಸ್​ಡಿಎಫ್?

    ಭೂತಾನ್​ಗೆ ಪ್ರವೇಶಿಸುವ ಹೊರದೇಶದ ಪ್ರವಾಸಿಗರು ಪ್ರವಾಸೋದ್ಯಮ ತೆರಿಗೆ ಪಾವತಿಸುವುದನ್ನು ಕಡ್ಡಾಯವಾಗಿ ಮಾಡುವ ಕಾನೂನನ್ನು ಭೂತಾನ್ ರಾಷ್ಟ್ರೀಯ ಅಸೆಂಬ್ಲಿಯು 2022ರಲ್ಲಿ ಜಾರಿಗೆ ತಂದಿದೆ. ಇದನ್ನು ಸುಸ್ಥಿರ ಅಭಿವೃದ್ಧಿ ಶುಲ್ಕ (ಎಸ್​ಡಿಎಫ್) ಎಂದು ಕರೆಯಲಾಗುತ್ತದೆ. ಭಾರತೀಯರು ಪ್ರತಿ ವ್ಯಕ್ತಿಗೆ ಒಂದು ದಿನಕ್ಕೆ 1,200 ರೂಪಾಯಿಯಷ್ಟು ಎಸ್​ಡಿಎಫ್ ಪಾವತಿಸಬೇಕಾಗಿದ್ದರೆ, ಇತರ ದೇಶಗಳ ಪ್ರವಾಸಿಗರು 65 ರಿಂದ 200 ಡಾಲರ್​ಗಳಷ್ಟು ಪಾವತಿ ಮಾಡಬೇಕಾಗುತ್ತದೆ. ಈ ಹಿಂದೆ ಭಾರತ, ಮಾಲ್ಡೀವ್ಸ್ ಮತ್ತು ಬಾಂಗ್ಲಾದೇಶದ ಪ್ರವಾಸಿಗರಿಗೆ ಯಾವುದೇ ಪ್ರವಾಸೋದ್ಯಮ ಶುಲ್ಕವನ್ನು ವಿಧಿಸುತ್ತಿರಲಿಲ್ಲ. ಕೋವಿಡ್ ಸಾಂಕ್ರಾಮಿಕ ಹರಡುವುದನ್ನು ತಡೆಯಲು 30 ತಿಂಗಳ ಕಾಲ ಭೂತಾನ್​ಗೆ ವಿದೇಶಿಯರ ಪ್ರವೇಶ ನಿರ್ಬಂಧವನ್ನು ತೆರವುಗೊಳಿಸಿದಾಗ 2022 ಸೆಪ್ಟೆಂಬರ್​ನಲ್ಲಿ ಎಸ್​ಡಿಎಫ್ ವಿಧಿಸುವುದನ್ನು ಜಾರಿಗೊಳಿಸಲಾಗಿದೆ.

    ಇದನ್ನೂ ಓದಿ: ಇದೋ ಬಂದಿದೆ ಕಿಸ್ಸಿಂಗ್ ಡಿವೈಸ್; ಚುಂಬಿಸುವ ಇಬ್ಬರು ಎಷ್ಟೇ ದೂರದಲ್ಲಿದ್ದರೂ ಸಿಗುವುದು ನೈಜ ಮುತ್ತಿನ ಗಮ್ಮತ್ತು!

    ಪ್ರಮುಖ ಪ್ರೇಕ್ಷಣಿಯ ಸ್ಥಳಗಳು…

    ಟೈಗರ್ಸ್ ನೆಸ್ಟ್ ಮೊನಾಸ್ಟರಿ ಅಥವಾ ಪರೋ ತಕ್ತ್ಸಂಗ್ ಪ್ರವಾಸಿ ತಾಣವು ಭೂತಾನ್​ನ ಮೇಲಿನ ಪರೋ ಕಣಿವೆ ಬಳಿ ಇದೆ. ಈ ತಾಣವನ್ನು ಪ್ರಪಂಚದ ನೂತನ ಅದ್ಭುತಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಪರೋ ಕಣಿವೆಯಿಂದ 3,000 ಅಡಿ ಎತ್ತರದ ಬಂಡೆಯ ಅಂಚಿನಲ್ಲಿ ನೆಲೆಗೊಂಡಿರುವ ಈ ಸ್ಥಳದಲ್ಲಿ ಸುಂದರವಾದ ನಾಲ್ಕು ಬೌದ್ಧ ದೇವಾಲಯಗಳು ಮತ್ತು ವಸತಿ ಕಟ್ಟಡಗಳಿವೆ. ದೇವಾಲಯಗಳಿಗೆ ಚಿನ್ನದ ಗುಮ್ಮಟದ ಮೇಲ್ಛಾವಣಿಗಳಿವೆ. ಪುನಖಾ ಡಿಜಾಂಗ್, ಜುರಿ ಡಿಜಾಂಗ್ ಪೀಕ್, ಗ್ಯಾಂಗ್​ಟೆ ಕಣಿವೆ, ಕುಯೆನ್ಸಲ್ ಫೊಡ್​ರ್ಯಾಂಗ್ ಮುಂತಾದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿವೆ.

    ಮೇಕಪ್​ನಿಂದಾಗಿ ಬಣ್ಣಗೆಟ್ಟಿತು ವಧುವಿನ ಮುಖ; ಮದುವೆಯೇ ಬೇಡ ಎಂದ ವರ

    ಪ್ರೀತಿಸಿ ಅಂತರ್ಜಾತಿ ವಿವಾಹವಾದ ಜೋಡಿಗೆ ಗ್ರಾಮದಿಂದಲೇ ಬಹಿಷ್ಕಾರ; ತರಕಾರಿ, ಹಾಲು, ನೀರೂ ತೆಗೆದುಕೊಳ್ಳುವಂತಿಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts