More

    ಬಯೋ-ಬಬಲ್ ಬ್ರೇಕ್ ಬೆನ್ನಲ್ಲೇ ಟೀಮ್ ಇಂಡಿಯಾವನ್ನು ಕಾಡುತ್ತಿದೆ ಬೀಫ್​ ವಿವಾದ!

    ನವದೆಹಲಿ: ಕೋವಿಡ್-19 ಮಾರ್ಗಸೂಚಿ ಉಲ್ಲಂಘನೆಯ ಆರೋಪದ ಮೇರೆಗೆ ಈಗಾಗಲೆ ಆಸ್ಟ್ರೇಲಿಯಾದಲ್ಲಿ ಐಸೋಲೇಷನ್‌ಗೆ ಒಳಗಾಗಿರುವ ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮ ಸಹಿತ ಐವರು ಕ್ರಿಕೆಟಿಗರು, ಗೋಮಾಂಸ ಸೇವನೆಯ ಆರೋಪದಿಂದ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿದ್ದಾರೆ.

    ರೆಸ್ಟೋರೆಂಟ್‌ನಲ್ಲಿ ರೋಹಿತ್ ಸಹಿತ ಐವರು ಕ್ರಿಕೆಟಿಗರು ತಿಂದ ಆಹಾರದ ಬಿಲ್ ತಾನು ಪಾವತಿಸಿದ್ದೇನೆ ಎಂದು ಕ್ರಿಕೆಟ್ ಪ್ರೇಮಿ ನವಲ್‌ದೀಪ್ ಸಿಂಗ್ ಟ್ವೀಟಿಸಿದ್ದರು. ಈ ಬಿಲ್‌ನಲ್ಲಿ ಗೋಮಾಂಸದ (ಫ್ರೈಡ್​ ಬೀಫ್​) ಖಾದ್ಯವೂ ಇರುವುದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

    ಇದನ್ನೂ ಓದಿ: 17-18 ವರ್ಷದ ಪಾಕ್ ವೇಗಿಗಳ ನಿಜ ವಯಸ್ಸು ಬಿಚ್ಚಿಟ್ಟ ಮಾಜಿ ಕ್ರಿಕೆಟಿಗ ಮೊಹಮದ್ ಆಸಿಫ್​

    ಹಿಂದು ಧರ್ಮದಲ್ಲಿ ಹುಟ್ಟಿ ಗೋಮಾಂಸ ಸೇವನೆ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ. ನಿಮ್ಮ ಈ ನಡೆಯಿಂದ ಹಿಂದು ಧರ್ಮದ ಗೌರವ ಕುಗ್ಗಿಸಿದ್ದೀರಿ ಎಂದೂ ದೂರಿದ್ದಾರೆ. ದೇಶವನ್ನು ಪ್ರತಿನಿಧಿಸುವ ಕ್ರೀಡಾಪಟುಗಳು ಈ ರೀತಿ ಧರ್ಮ ವಿರೋಧಿಯಾಗಿ ವರ್ತಿಸುವುದು ಸರಿಯಲ್ಲ ಎಂದೂ ಟೀಕಿಸಲಾಗಿದೆ.

    ಇತರ ನಾಲ್ವರು ಕ್ರಿಕೆಟಿಗರಾದ ರಿಷಭ್ ಪಂತ್, ಶುಭಮಾನ್ ಗಿಲ್, ನವದೀಪ್ ಸೈನಿ ಮತ್ತು ಪೃಥ್ವಿ ಷಾ ಕೂಡ ರೋಹಿತ್ ಶರ್ಮ ಜತೆಗೆ ಆಹಾರ ಸೇವಿಸಿದ್ದರು. ಆದರೆ ತಂಡದ ಹಿರಿಯ ಆಟಗಾರರಾಗಿರುವ ಕಾರಣದಿಂದ ರೋಹಿತ್ ಹೆಚ್ಚಿನ ಟೀಕೆಗೆ ಗುರಿಯಾಗಿದ್ದಾರೆ.

    6,600 ರೂಪಾಯಿ (118.69 ಆಸ್ಟ್ರೇಲಿಯನ್ ಡಾಲರ್) ಮೊತ್ತದ ಬಿಲ್‌ನಲ್ಲಿ ಕ್ರಿಕೆಟಿಗರು, ತರಕಾರಿ ಜತೆಗೆ ಫ್ರೈಡ್​ ಬೀಫ್​, ಹಂದಿ ಮಾಂಸ, ಪ್ರಾನ್, ಚಿಕನ್, ಮಶ್ರೂಮ್, ಫ್ರೈಡ್​‌ರೈಸ್ ಮತ್ತು ಡಯೆಟ್ ಕೋಕ್ ಸೇವಿಸಿದ್ದಾರೆ ಎಂದು ಹೇಳಲಾಗಿದೆ.

    ಇದನ್ನೂ ಓದಿ: ಕೊನೇಕ್ಷಣದಲ್ಲಿ ಒಲಿದ ಅದೃಷ್ಟ, ತೆಂಡುಲ್ಕರ್ ಪುತ್ರ ಅರ್ಜುನ್ ಮುಂಬೈ ತಂಡಕ್ಕೆ ಸೇರ್ಪಡೆ

    ಬಿಲ್ ನಿಜವಲ್ಲ ಎಂಬ ವಾದ
    ರೋಹಿತ್ ಗೋಮಾಂಸ ತಿಂದಿದ್ದಾರೆ ಎನ್ನಲಾಗುತ್ತಿರುವ ಬಿಲ್‌ನ ಸತ್ಯಾಸತ್ಯತೆಯನ್ನೇ ಇನ್ನು ಕೆಲ ಕ್ರಿಕೆಟ್ ಪ್ರೇಮಿಗಳು ಪ್ರಶ್ನಿಸುತ್ತಿದ್ದಾರೆ. ಬಿಲ್ ಟ್ವೀಟ್ ಮಾಡಿರುವ ಅಭಿಮಾನಿ ನವಲ್‌ದೀಪ್ ಸಿಂಗ್ ತಾನು ತಿಂದಿರುವ ಬಿಲ್ ಅನ್ನೇ ಟ್ವೀಟಿಸಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ನವಲ್‌ದೀಪ್ ತನಗೆ ಗೋಮಾಂಸ ಇಷ್ಟ ಎಂದು ಈ ಹಿಂದೆ ಟ್ವೀಟಿಸಿರುವುದನ್ನೂ ಇದಕ್ಕೆ ಸಾಕ್ಷ್ಯವಾಗಿ ಬಳಸಿದ್ದಾರೆ.

    ರೋಹಿತ್ ಪ್ರಾಣಿ ಪ್ರೀತಿಗೆ ವ್ಯಂಗ್ಯ
    ರೋಹಿತ್ ಶರ್ಮ ಈ ಹಿಂದೆ ಹೋಳಿ ಹಬ್ಬದ ಸಮಯದಲ್ಲಿ ಪ್ರಾಣಿಗಳಿಗೆ ಬಣ್ಣ ಬಳಿಯಬೇಡಿ. ಪ್ರಾಣಿಗಳನ್ನು ಸ್ನೇಹಿತರಂತೆ ಕಾಣಿರಿ ಎಂದು ಟ್ವೀಟಿಸಿರುವುದು ಮತ್ತು ಪ್ರಾಣಿದಯೆಯ ಬಗ್ಗೆ ವಿವಿಧ ಟ್ವೀಟ್‌ಗಳನ್ನು ಮಾಡಿರುವುದನ್ನು ಅಭಿಮಾನಿಗಳು ವ್ಯಂಗ್ಯ ಮಾಡಿದ್ದಾರೆ. ಅಭಿಮಾನಿಗಳಿಗೆ ಪ್ರಾಣಿ ಪ್ರೀತಿಯ ಬಗ್ಗೆ ಪಾಠ ಮಾಡುವವರು ಗೋಮಾಂಸ, ಹಂದಿ ಮಾಂಸ ಸೇವಿಸುವುದು ಎಷ್ಟರ ಮಟ್ಟಿಗೆ ಸರಿ ಎಂದೂ ಪ್ರಶ್ನಿಸಿದ್ದಾರೆ.

    ಬಯೋ-ಬಬಲ್ ಉಲ್ಲಂಘನೆ ಆರೋಪ, ರೋಹಿತ್ ಸಹಿತ ಐವರು ಕ್ರಿಕೆಟಿಗರ ಐಸೋಲೇಷನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts