More

    ಟರ್ಕಿಯಲ್ಲೀಗ ಇದು ಹಿಂದೆಂದಿಗಿಂತಲೂ ಭಯಂಕರ ಭೂಕಂಪ; ಸತ್ತವರ ಸಂಖ್ಯೆ 33 ಸಾವಿರಕ್ಕೂ ಅಧಿಕ

    ಟರ್ಕಿ: ಕಳೆದ ಸೋಮವಾರ ಜಗತ್ತಿನ ಗಮನವೆಲ್ಲ ಟರ್ಕಿಯತ್ತ ಇತ್ತು. ಕಾರಣ ಒಂದರ ಹಿಂದೊಂದರಂತೆ ಮೂರು ಭಾರಿ ಭೂಕಂಪವಾಗಿತ್ತು. ಹೀಗೆ ಒಟ್ಟು ನಾಲ್ಕು ದೊಡ್ಡ ಭೂಕಂಪನಗಳಿಂದ ತತ್ತರಿಸಿಹೋಗಿರುವ ಟರ್ಕಿಯಲ್ಲಿ ಅದರಿಂದ ಸಾವಿಗೀಡಾದವರ ಸಂಖ್ಯೆ ಈ ಸೋಮವಾರ ಅಂದರೆ ಒಂದು ವಾರದಲ್ಲಿ 33 ಸಾವಿರಕ್ಕೂ ಅಧಿಕ.

    ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿರುವ ಭಾರಿ ಭೂಕಂಪಗಳಿಂದ ಸತ್ತವರ ಸಂಖ್ಯೆ ನಿನ್ನೆಗೆ 33,179ಕ್ಕೆ ತಲುಪಿದೆ. ಮತ್ತೊಂದೆಡೆ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಅವಶೇಷಗಳಡಿ ಕಳೇಬರಗಳು ಸಿಗುವ ಪ್ರಕರಣಗಳೂ ಹೆಚ್ಚಾಗುತ್ತಿದ್ದು, ಸತ್ತವರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈ ಮೂಲಕ ಕಳೆದ ವಾರದ ಭೂಕಂಪ ಟರ್ಕಿ-ಸಿರಿಯಾದ ಇತಿಹಾಸದಲ್ಲೇ ಅತ್ಯಂತ ಭಯಂಕರ ಭೂಕಂಪ ಎಂದೆನಿಸಿಕೊಂಡಿದೆ.

    ಇದನ್ನೂ ಓದಿ: ಒಂದೇ ದಿನದಲ್ಲಿ 2,300ಕ್ಕೂ ಅಧಿಕ ಮಂದಿ ಸಾವು; ಒಂದರ ಹಿಂದೊಂದರಂತೆ ಸಂಭವಿಸಿದ ಮೂರು ಭೀಕರ ಭೂಕಂಪ

    ಏಕೆಂದರೆ, ಟರ್ಕಿಯ ಡಜ್ಸ್ ಪ್ರದೇಶದಲ್ಲಿ 1999ರಲ್ಲಿ 7.4 ತೀವ್ರತೆಯ ಭೂಕಂಪ ಸಂಭವಿಸಿದ್ದು, 17 ಸಾವಿರಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದರು. 1939ರಲ್ಲಿ ಟರ್ಕಿಯಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದ್ದು, 33 ಸಾವಿರ ಮಂದಿ ಸಾವಿಗೀಡಾಗಿದ್ದರು. ಕಳೆದ ಸೋಮವಾರ ಬೆಳಗಿನ ಜಾವ ಸಂಭವಿಸಿದ್ದ ಭೀಕರ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.8 ಇತ್ತಾದರೂ ಸಾವಿನ ಪ್ರಮಾಣ 1939ರಲ್ಲಿ ಸಂಭವಿಸಿದ್ದ ಅಷ್ಟೇ ತೀವ್ರತೆಯ ಭೂಕಂಪಕ್ಕಿಂತ ಕಡಿಮೆಯೇ ಇತ್ತು. ಆದರೆ ನಿನ್ನೆಗೆ ಆ ಪ್ರಮಾಣ 33,179ಕ್ಕೆ ತಲುಪಿದ್ದಷ್ಟೇ ಅಲ್ಲದೆ, ಇನ್ನೂ ಹೆಚ್ಚಾಗುವ ಲಕ್ಷಣಗಳೂ ಇರುವುದರಿಂದ ಕಳೆದ ವಾರದ ಭೂಕಂಪ ಟರ್ಕಿಯ ಇತಿಹಾಸದಲ್ಲೇ ಅತ್ಯಂತ ಘೋರ ಭೂಕಂಪ ಎನಿಸಿಕೊಂಡಿದೆ. –ಏಜೆನ್ಸೀಸ್

    ಈ ಐ ಡ್ರಾಪ್ಸ್​ ಬಳಸಿದರೆ ದೃಷ್ಟಿ ಕಳೆದುಕೊಳ್ಳಬಹುದು, ಪ್ರಾಣವೂ ಹೋಗಬಹುದು!

    ಮದುವೆ ದಿನವೇ ಫಿಸಿಯೋಥೆರಪಿ ಎಕ್ಸಾಂ; ವಿವಾಹದ ದಿರಿಸಿನಲ್ಲೇ ಪರೀಕ್ಷೆಗೆ ಬಂದ ವಧು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts