ಈ ಐ ಡ್ರಾಪ್ಸ್​ ಬಳಸಿದರೆ ದೃಷ್ಟಿ ಕಳೆದುಕೊಳ್ಳಬಹುದು, ಪ್ರಾಣವೂ ಹೋಗಬಹುದು!

ನವದೆಹಲಿ: ಕೆಲವು ದಿನಗಳ ಹಿಂದೆ ಭಾರತದ ಕಂಪನಿಯೊಂದರ ಕಾಫ್​ ಸಿರಪ್​ ವಿದೇಶದಲ್ಲಿ ಮಕ್ಕಳ ಸಾವಿಗೆ ಕಾರಣವಾದ ಪ್ರಸಂಗವೊಂದು ನಡೆದಿತ್ತು. ಈಗ ಅದೇ ಜಾಡಿನಲ್ಲಿ ಐ ಡ್ರಾಪ್ಸ್​ ಆತಂಕ ಹುಟ್ಟಿಸಿದ್ದು, ಅದನ್ನು ಬಳಸಿದರೆ ದೃಷ್ಟಿ ಕಳೆದುಕೊಳ್ಳುವ ಅದರಲ್ಲೂ ತೀರಾ ಗ್ರಹಚಾರ ಕೆಟ್ಟಿದ್ದರೆ ಪ್ರಾಣವೂ ಹೋಗಬಹುದಾದ ಸಾಧ್ಯತೆ ಇದೆ ಎನ್ನಲಾಗಿದೆ.

ಭಾರತ ಮೂಲದ ಔಷಧ ಉತ್ಪಾದಕ ಕಂಪನಿ ಗ್ಲೋಬಲ್ ಫಾರ್ಮಾದ ಎಝ್ರಿಕೇರ್​ (EzriCare) ಐ ಡ್ರಾಪ್ಸ್​ ಕುರಿತು ಈ ಅಪವಾದ ಕೇಳಿಬಂದಿದೆ. ಯುಎಸ್​ ಫುಡ್ ಆ್ಯಂಡ್ ಡ್ರಗ್​ ಅಡ್ಮಿನಿಸ್ಟ್ರೇಷನ್​ ಹಾಗೂ ಸೆಂಟರ್ಸ್​​ ಫಾರ್​ ಡಿಸೀಸ್ ಕಂಟ್ರೋಲ್​ ಆ್ಯಂಡ್ ಪ್ರಿವೆನ್ಷನ್​ ಎರಡೂ ಈ ಕುರಿತು ಎಚ್ಚರಿಕೆ ನೀಡಿವೆ. ಇಝ್ರಿಕೇರ್​ ಆರ್ಟಿಫಿಷಿಯಲ್ ಟಿಯರ್ಸ್ (EzriCare Artificial Tears)​ ಅಥವಾ ಡೆಲ್ಸಮ್ ಫಾರ್ಮಾಸ್ ಆರ್ಟಿಫಿಷಿಯಲ್ ಟಿಯರ್ಸ್ (Delsam Pharma’s Artificial Tears)​ ಬಳಸದಂತೆ ಇವು ಎಚ್ಚರಿಕೆ ನೀಡಿವೆ.

ಈ ಐ ಡ್ರಾಪ್ಸ್​ಗಳಿಂದ ತೀವ್ರ ಅನಾರೋಗ್ಯ ಕಂಡುಬಂದಿರುವ ಹಿನ್ನೆಲೆಯಲ್ಲಿ ಅಲ್ಲಿ ಇವುಗಳನ್ನು ಕಂಪನಿ ವಾಪಸ್ ಪಡೆದಿದೆ. ಯುಎಸ್​ನಲ್ಲಿ ಇವುಗಳನ್ನು ಬಳಸಿದ 50ಕ್ಕೂ ಅಧಿಕ ಮಂದಿ ಸೋಂಕಿಗೆ ಒಳಗಾಗಿದ್ದು, ಕೆಲವು ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿದ್ದಾರೆ. ಕೆಲವೊಂದು ಗಂಭೀರ ಸಂದರ್ಭಗಳಲ್ಲಿ ರಕ್ತದಲ್ಲಿ ಸೋಂಕು ಉಂಟಾಗಿ ಸಾವೂ ಸಂಭವಿಸಿದೆ ಎನ್ನಲಾಗಿದೆ.

ಸಿಟ್ಟು ಸಿಕ್ಕಾಪಟ್ಟೆ ಹೆಚ್ಚಾಗಲೆಂದು 2 ತಿಂಗಳು ಔಷಧ ಬಿಟ್ಟಿದ್ದ; ಸಚಿವರನ್ನು ಕೊಂದ ಎಎಸ್​ಐ ಬಾಯ್ಬಿಟ್ಟ ರಹಸ್ಯ

ಮದುವೆ ದಿನವೇ ಫಿಸಿಯೋಥೆರಪಿ ಎಕ್ಸಾಂ; ವಿವಾಹದ ದಿರಿಸಿನಲ್ಲೇ ಪರೀಕ್ಷೆಗೆ ಬಂದ ವಧು

2021ರಲ್ಲಿ ನಾಪತ್ತೆಯಾಗಿದ್ದ 14 ವರ್ಷದ ಹುಡುಗಿ ಗರ್ಭಿಣಿಯಾಗಿ ಪತ್ತೆ!

Share This Article

ಈ ದಿನಾಂಕದಂದು ಜನಿಸಿದವರು ದಾನದಲ್ಲಿ ಕರ್ಣನನ್ನು ಮೀರಿಸುತ್ತಾರೆ! ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು

 ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…

ತೂಕ ಇಳಿಕೆಗೆ ನಂಬರ್​ 1 ಹಣ್ಣು! ಇದನ್ನು ತಿಂದರೆ ಸಾಕು ಬೆಣ್ಣೆಯಂತೆ ಕರಗಿ ಹೋಗುತ್ತದೆ ಬೊಜ್ಜು

ಎಷ್ಟೇ ಪ್ರಯತ್ನಪಟ್ಟರು ತೂಕ ಇಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವೇ? ಬೊಜ್ಜು ಸಮಸ್ಯೆಯಿಂದ ಬೇಸತ್ತಿದ್ದೀರಾ? ಈ ಒಂದು ಹಣ್ಣನ್ನು ತಿಂದರೆ…