2021ರಲ್ಲಿ ನಾಪತ್ತೆಯಾಗಿದ್ದ 14 ವರ್ಷದ ಹುಡುಗಿ ಗರ್ಭಿಣಿಯಾಗಿ ಪತ್ತೆ!

ಮಿಚಿಗನ್​: ಎರಡು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ 14 ವರ್ಷದ ಹುಡುಗಿಯೊಬ್ಬಳು ಗರ್ಭಿಣಿಯಾಗಿ ಪತ್ತೆಯಾದ ವಿಚಿತ್ರ ಪ್ರಕರಣವೊಂದು ನಡೆದಿದೆ. ಎರಡು ವರ್ಷಗಳ ಬಳಿಕ ಕೊನೆಗೂ ಆಕೆ ತನ್ನ ಕುಟುಂಬವನ್ನು ಸೇರಿಕೊಳ್ಳುವಂತಾಗಿದೆ. ಇಂಥದ್ದೊಂದು ಪ್ರಕರಣ ಅಮೆರಿಕದ ಮಿಚಿಗನ್​ನ ಪೋರ್ಟ್ ಹುರಾನ್​ ಎಂಬಲ್ಲಿ ನಡೆದಿದೆ. ಕಾಣೆಯಾಗಿದ್ದ ಈಕೆಯನ್ನು ಪೊಲೀಸರು ಪತ್ತೆ ಹಚ್ಚಿ ಈಕೆಯ ತಂದೆಗೆ ಒಪ್ಪಿಸಿದ್ದಾರೆ. ನಾಪತ್ತೆಯಾಗಿದ್ದ ಹುಡುಗಿ ಪೋರ್ಟ್ ಹುರಾನ್​ನ ಮನೆಯೊಂದರಲ್ಲಿ ಇರುವ ಕುರಿತು ಸಾರ್ವಜನಿಕರಲ್ಲೊಬ್ಬರು ಪೊಲೀಸರಿಗೆ ಸುಳಿವು ನೀಡಿದ್ದರು. ಆ ಮೇರೆಗೆ ಮಂಗಳವಾರ ಅಲ್ಲಿಗೆ ತೆರಳಿದ್ದ ಪೊಲೀಸರಿಗೆ ಸಹಕರಿಸದೆ … Continue reading 2021ರಲ್ಲಿ ನಾಪತ್ತೆಯಾಗಿದ್ದ 14 ವರ್ಷದ ಹುಡುಗಿ ಗರ್ಭಿಣಿಯಾಗಿ ಪತ್ತೆ!