More

    2021ರಲ್ಲಿ ನಾಪತ್ತೆಯಾಗಿದ್ದ 14 ವರ್ಷದ ಹುಡುಗಿ ಗರ್ಭಿಣಿಯಾಗಿ ಪತ್ತೆ!

    ಮಿಚಿಗನ್​: ಎರಡು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ 14 ವರ್ಷದ ಹುಡುಗಿಯೊಬ್ಬಳು ಗರ್ಭಿಣಿಯಾಗಿ ಪತ್ತೆಯಾದ ವಿಚಿತ್ರ ಪ್ರಕರಣವೊಂದು ನಡೆದಿದೆ. ಎರಡು ವರ್ಷಗಳ ಬಳಿಕ ಕೊನೆಗೂ ಆಕೆ ತನ್ನ ಕುಟುಂಬವನ್ನು ಸೇರಿಕೊಳ್ಳುವಂತಾಗಿದೆ. ಇಂಥದ್ದೊಂದು ಪ್ರಕರಣ ಅಮೆರಿಕದ ಮಿಚಿಗನ್​ನ ಪೋರ್ಟ್ ಹುರಾನ್​ ಎಂಬಲ್ಲಿ ನಡೆದಿದೆ. ಕಾಣೆಯಾಗಿದ್ದ ಈಕೆಯನ್ನು ಪೊಲೀಸರು ಪತ್ತೆ ಹಚ್ಚಿ ಈಕೆಯ ತಂದೆಗೆ ಒಪ್ಪಿಸಿದ್ದಾರೆ.

    ನಾಪತ್ತೆಯಾಗಿದ್ದ ಹುಡುಗಿ ಪೋರ್ಟ್ ಹುರಾನ್​ನ ಮನೆಯೊಂದರಲ್ಲಿ ಇರುವ ಕುರಿತು ಸಾರ್ವಜನಿಕರಲ್ಲೊಬ್ಬರು ಪೊಲೀಸರಿಗೆ ಸುಳಿವು ನೀಡಿದ್ದರು. ಆ ಮೇರೆಗೆ ಮಂಗಳವಾರ ಅಲ್ಲಿಗೆ ತೆರಳಿದ್ದ ಪೊಲೀಸರಿಗೆ ಸಹಕರಿಸದೆ ದಾರಿ ತಪ್ಪಿಸುವ ಪ್ರಯತ್ನವೂ ನಡೆದಿತ್ತು.

    ಅದಾಗ್ಯೂ ಜಗ್ಗದ ಪೊಲೀಸರು ಮನೆಯೊಳಗೆ ಪರಿಶೀಲನೆಗೆ ಮುಂದಾದರು. ಈ ಸಂದರ್ಭದಲ್ಲಿ ವಾರ್ಡ್​ರೋಬ್​ನಲ್ಲಿ ಕೂಡಿಡಲಾಗಿದ್ದ ಹುಡುಗಿಯನ್ನು ಪತ್ತೆ ಮಾಡಿದ್ದು, ವಶಕ್ಕೆ ಪಡೆದರು. ಆದರೆ ನಾಪತ್ತೆ ಹಾಗೂ ಗರ್ಭವತಿಯಾದ ಕುರಿತ ಹೆಚ್ಚಿನ ವಿವರಗಳು ಇನ್ನೂ ಬಹಿರಂಗಗೊಂಡಿದಲ್ಲ. –ಏಜೆನ್ಸೀಸ್

    40 ಸಾವಿರ ರೂ. ವಂಚಿಸಿ 15 ವರ್ಷ ತಲೆಮರೆಸಿಕೊಂಡಿದ್ದವ 2 ಚಿನ್ನದ ಹಲ್ಲುಗಳಿಂದಾಗಿ ಸಿಕ್ಕಿಬಿದ್ದ!

    ನಟಿ ರಾಖಿ ಸಾವಂತ್ ಪತಿ ಆದಿಲ್ ವಿರುದ್ಧ ಅತ್ಯಾಚಾರ ಆರೋಪ; ಇನ್ನೊಬ್ಬಳು ಮಹಿಳೆಯಿಂದ ದೂರು ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts