More

    ಹಂಪಿ ಮಾತ್ರವಲ್ಲ, ತುಂಗಭದ್ರಾ ಜಲಾಶಯವೂ ಈಗ ವರ್ಣರಂಜಿತ..

    ವಿಜಯನಗರ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದೇಶದ ಎಲ್ಲ ಪಾರಂಪರಿಕ ತಾಣಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸಿ ವರ್ಣರಂಜಿತಗೊಳಿಸಲಾಗಿದೆ. ಅದರಂತೆ ಹಂಪೆ ಕೂಡ ಬಣ್ಣಗಳಿಂದ ಕಂಗೊಳಿಸುತ್ತಿದ್ದು, ಇದೀಗ ತುಂಗಭದ್ರಾ ಜಲಾಶಯ ಕೂಡ ವರ್ಣರಂಜಿತವಾಗಿದೆ.

    ಹಂಪೆಯ ಪಾರಂಪರಿಕ ತಾಣಗಳಿಗೆ, ಪ್ರಾಚೀನ ದೇವಸ್ಥಾನಗಳಿಗೆ ಎರಡು ದಿನಗಳ ಹಿಂದೆಯೇ ವಿದ್ಯುದ್ದೀಪಾಲಂಕಾರ ಮಾಡಲಾಗಿದ್ದು, ಈಗ ಕಲ್ಯಾಣ-ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯಕ್ಕೂ ದೀಪಾಲಂಕಾರ ಮಾಡಲಾಗಿದೆ. ಪರಿಣಾಮವಾಗಿ, ಜಲಾಶಯದಿಂದ ಧುಮುಕುತ್ತಿರುವ ಜಲಧಾರೆ ವರ್ಣರಂಜಿತವಾಗಿ ಹೊರಹೊಮ್ಮುತ್ತಿದೆ.

    ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಿರುವ ಹಿನ್ನೆಲೆಯಲ್ಲಿ 33 ಕ್ರಸ್ಟ್​ ಗೇಟ್​ಗಳಿಂದ ನೀರನ್ನು ಹೊರಬಿಡಲಾಗುತ್ತಿದೆ. ಅಲ್ಲದೆ ಅಷ್ಟೂ ಗೇಟ್​ಗಳಿಗೆ ವಿದ್ಯುದ್ದೀಪಾಲಂಕಾರ ವ್ಯವಸ್ಥೆ ಮಾಡಿರುವುದರಿಂದ ಜಲಾಶಯವ ವರ್ಣರಂಜಿತವಾಗಿ ಕಣ್ಮನ ಸೆಳೆಯುತ್ತಿದೆ.

    Fact Check: ರಾಷ್ಟ್ರಧ್ವಜ ಖರೀದಿಸದಿದ್ದರೆ ರೇಷನ್ ಕೊಡಲ್ವಾ?; ಇಲ್ಲಿದೆ ಸತ್ಯಾಂಶ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts