More

    ತುಮಕೂರಿನಲ್ಲಿ ತಮ್ಮನನ್ನು ರಕ್ಷಿಸಲು ಪ್ರಾಣವನ್ನೂ ಲೆಕ್ಕಿಸದೇ ಬಾವಿಗೆ ಹಾರಿದ 8ರ ಬಾಲಕಿ: ಗ್ರಾಮಸ್ಥರಿಂದ ಪ್ರಶಂಸೆ

    ತುಮಕೂರು: ಎಂಟು ವರ್ಷದ ಬಾಲಕಿಯೊಬ್ಬಳು ತನ್ನ ಪ್ರಾಣವನ್ನೂ ಲೆಕ್ಕಿಸದೇ ಬಾವಿಗೆ ಹಾರಿ ಸಹೋದರನ ಜೀವ ಉಳಿಸುವ ಮೂಲಕ ದಿಟ್ಟತನ ಪ್ರದರ್ಶಿಸಿದ ಘಟನೆ ತುಮಕೂರು ತಾಲ್ಲೂಕಿನ ಕುಚ್ಚಂಗಿಯಲ್ಲಿ ನಿನ್ನೆ (ಜು. 13) ಮಧ್ಯಾಹ್ನ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಶಾಲೂ ಎಂಬ ಬಾಲಕಿ ತನ್ನ ಏಳು ವರ್ಷದ ಸಹೋದರ ಹಿಮಾಂಶೂನನ್ನು ರಕ್ಷಣೆ ಮಾಡಿದ್ದಾಳೆ. ಕುಚ್ಚಂಗಿಯ ತೋಟದ ಮನೆಯಲ್ಲಿ ಉತ್ತರ ಪ್ರದೇಶ‌ ಮೂಲದ ಜೀತೇಂದ್ರ-ರಾಜಕುಮಾರಿ ದಂಪತಿ ಕೆಲಸ ಮಾಡುತ್ತಿದೆ. ಈ ದಂಪತಿಗೆ 8 ವರ್ಷದ ಶಾಲೂ, 7 ವರ್ಷದ ಹಿಮಾಂಶೂ, 3 ವರ್ಷದ ರಾಶಿ ಹಾಗೂ 2 ವರ್ಷದ ಕಪಿಲ್ ಎಂಬ ನಾಲ್ವರು ಮಕ್ಕಳಿದ್ದಾರೆ.

    ಇದನ್ನೂ ಓದಿ: ಚಂದ್ರಶಿಕಾರಿಗೆ ಇಸ್ರೋ ಸವಾರಿ; ಚಂದ್ರಯಾನ-3 ಶ್ರೀಹರಿಕೋಟದಿಂದ ಇಂದು ಉಡಾವಣೆ

    ಬಾವಿಗೆ ಬಿದ್ದ ಚೆಂಡು

    ಹಿಮಾಂಶೂ ಹಾಗೂ ರಾಶಿ ತೋಟದಲ್ಲಿ ಚೆಂಡಿನೊಂದಿಗೆ ಆಟವಾಡುತ್ತಿದ್ದಾಗ ಬಾವಿಗೆ ಬಿದ್ದಿದ್ದ ಚೆಂಡನ್ನು ತೆಗೆಯಲು ಹೋಗಿ ಹಿಮಾಂಶೂ ಬಾವಿಗೆ ಬಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದ. ಇದನ್ನು ಕಂಡ ಶಾಲೂ ಮನೆಯಲ್ಲಿದ್ದ ಲೈಫ್ ಜಾಕೆಟ್ ಧರಿಸಿ ಬಾವಿಗೆ ಹಾರಿದ್ದಾಳೆ.‌ ಇದೇ ವೇಳೆ ಅಕ್ಕ-ಪಕ್ಕದ ಜನರು ಸಹ ಶಾಲೂ ಸಹಾಯಕ್ಕೆ ಬಂದಿದ್ದಾರೆ. ಬಳಿಕ ಇಬ್ಬರನ್ನು ಬಾವಿಯಿಂದ ಮೇಲಕ್ಕೆ ಎತ್ತುವ ಮೂಲಕ ರಕ್ಷಣೆ ಮಾಡಿದರು.

    ಈಜು ಕಲಿಯುತ್ತಿದ್ದಳು

    ಕಳೆದ ಮೂರ್ನಾಲ್ಕು ತಿಂಗಳಿಂದ ಶಾಲೂ ಈಜು ಕಲಿಯುತ್ತಿದ್ದಳು. ಲೈಫ್ ಜಾಕೆಟ್​ ಧರಿಸಿ ಬಾಡಿಗೆ ಮನೆ ಮಾಲೀಕ ಧನಂಜಯ್ಯ ಎಂಬುವರ ಬಳಿ ಶಾಲೂ ಈಜು ಕಲಿಯುತ್ತಿದ್ದಳು. ಇದೇ ನೆರವಿನಿಂದ ಬಾವಿಗೆ ಹಾರಿ ತಮ್ಮನ ಪ್ರಾಣವನ್ನು ಶಾಲೂ ರಕ್ಷಣೆ ಮಾಡಿದ್ದಾಳೆ. ಇದೀಗ ಗ್ರಾಮಸ್ಥರು ಶಾಲೂ ಸಾಹಸವನ್ನು ಕೊಂಡಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ಪೊಲೀಸ್​ ಕಾನ್ಸ್​ಟೆಬಲ್​ಗೆ ಟೊಮ್ಯಾಟೋ ಬೆಳೆ ಬಂಪರ್​: 20 ಲಕ್ಷ ರೂ. ಆದಾಯ, ಇನ್ನಷ್ಟು ಲಾಭದ ನಿರೀಕ್ಷೆ

    ಸೀಮಾ ಪಾಕ್​ಗೆ ಮರಳದಿದ್ದರೆ ಮತ್ತೊಂದು ಮುಂಬೈ ಮಾದರಿ ದಾಳಿ: ಬೆದರಿಕೆ ಕರೆ, ಮುಂಬೈ ಪೊಲೀಸರು ಅಲರ್ಟ್​

    ಗಂಡ-ಹೆಂಡತಿ ಜಗಳಕ್ಕೆ ಪಲ್ಟಿಯಾದ ಕಾರು: ಹಲಸೂರು ಗೇಟ್ ಠಾಣೆ ಸಮೀಪವೇ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts