More

    ಪೊಲೀಸ್​ ಕಾನ್ಸ್​ಟೆಬಲ್​ಗೆ ಟೊಮ್ಯಾಟೋ ಬೆಳೆ ಬಂಪರ್​: 20 ಲಕ್ಷ ರೂ. ಆದಾಯ, ಇನ್ನಷ್ಟು ಲಾಭದ ನಿರೀಕ್ಷೆ

    ಹಾಸನ: ಪ್ರತಿಕೂಲ ವಾತಾವರಣ ಕಾರಣದಿಂದ ಟೊಮ್ಯಾಟೋ ಬೆಲೆ ಗಗನಮುಖಿಯಾಗಿರುವುದು ಎಲ್ಲರಿಗೂ ತಿಳಿದೇ ಇದೆ. ಅದರ ಪರಿಣಾಮ ಎಲ್ಲರು ಎದುರಿಸುತ್ತಿದ್ದಾರೆ. ಆದರೆ, ಟೊಮ್ಯಾಟೋ ಬೆಳೆದವರು ಸಖತ್​ ಖುಷಿಯಲ್ಲಿದ್ದಾರೆ. ಹಾಸನದಲ್ಲಿ ಟೊಮ್ಯಾಟೋ ಬೆಳೆದ ಪೊಲೀಸ್ ಕಾನ್ಸ್‌ಟೆಬಲ್​ ಬಂಪರ್​ ಆದಾಯ ಹರಿದುಬಂದಿದೆ.

    ಸಾವಿರ ಬಾಕ್ಸ್​ ಟೊಮ್ಯಾಟೋ ಮಾರಾಟ

    ಹಾಸನದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿರುವ ಬೇಲೂರು ತಾಲೂಕಿನ ಬಸ್ತಿಹಳ್ಳಿ ಗ್ರಾಮದ ಬೈರೇಶ್, ತಮ್ಮ ಒಂದು ಎಕರೆ ಆರು ಗುಂಟೆ ಜಮೀನಿನಲ್ಲಿ ಟೊಮ್ಯಾಟೋ ಬೆಳೆ ಬೆಳೆದಿದ್ದಾರೆ. ಸಾವಿರ ಬಾಕ್ಸ್​ ಟೊಮ್ಯಾಟೋ ಮಾರಿರುವ ಬೈರೇಶ್​ 20 ಲಕ್ಷ ಆದಾಯ ಗಳಿಸಿದ್ದಾರೆ. ಇನ್ನೂ ಸಾವಿರ ಬಾಕ್ಸ್ ಟೊಮ್ಯಾಟೋ ಮಾರುವ ನಿರೀಕ್ಷೆಯಲ್ಲಿದ್ದಾರೆ.

    ಇದನ್ನೂ ಓದಿ: ಗಂಡ-ಹೆಂಡತಿ ಜಗಳಕ್ಕೆ ಪಲ್ಟಿಯಾದ ಕಾರು: ಹಲಸೂರು ಗೇಟ್ ಠಾಣೆ ಸಮೀಪವೇ ಘಟನೆ

    ಕಳ್ಳರ ಕಾಟ ತಪ್ಪಿಲ್ಲ

    ಸರ್ಕಾರಿ ಕೆಲಸದ ಒತ್ತಡದ ನಡುವೆಯೂ ಒಳ್ಳೆಯ ಕೃಷಿ ಮಾಡಿ ಲಕ್ಷಾಂತರ ರೂಪಾಯಿಯ ಲಾಭವನ್ನು ಬೈರೇಶ್ ಪಡೆದಿದ್ದಾರೆ. ಆದರೆ, ಪೊಲೀಸ್ ಪೇದೆಯ ಹೊಲಕ್ಕೂ ಕಳ್ಳರ ಕಾಟ ತಪ್ಪಿಲ್ಲ. ಈಗಾಗಲೇ ನೂರಕ್ಕೂ ಹೆಚ್ಚು ಬಾಕ್ಸ್ ಟೊಮ್ಯಾಟೋವನ್ನು ಖದೀಮರು ಕಳುವು ಮಾಡಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಬೈರೇಶ್​, ರಾತ್ರಿಯಿಡಿ ಹೊಲದಲ್ಲಿ ಕಾವಲು ಹಾಕಿ ಟೊಮ್ಯಾಟೋ ಬೆಳೆ ಕಾಪಾಡಿಕೊಂಡಿದ್ದಾರೆ.

    ಬೈರೇಶ್​ ಕುಟುಂಬ ಖುಷ್​

    ಮಳೆ ಕೊರತೆ, ರೋಗ ಬಾದೆ ಹಾಗೂ ಕಳ್ಳರ ಕಾಟ ನಡುವೆಯೂ ಬೈರೇಶ್​ ಟೊಮ್ಯಾಟೋ ಬೆಳೆದು ಭರ್ಜರಿ ಆದಾಯ ಗಳಿಸಿದ್ದಾರೆ. ಉಡುಪಿ, ಮಂಗಳೂರಿನಿಂದ ಬಂದು ಬಸ್ತಿಯಲ್ಲಿರುವ ಬೈರೇಶ್ ಹೊಲದಲ್ಲಿ ವರ್ತಕರು ಟೊಮ್ಯಾಟೋ ಖರೀದಿ ಮಾಡುತ್ತಿದ್ದಾರೆ. ಹೆಚ್ಚಿನ ಆದಾಯದಿಂದ ಬೈರೇಶ್​ ಕುಟುಂಬವೂ ಕೂಡ ತುಂಬಾ ಖುಷಿಯಾಗಿದೆ. (ದಿಗ್ವಿಜಯ ನ್ಯೂಸ್​)

    ಪ್ರಧಾನಿ ಮೋದಿಗೆ ಫ್ರಾನ್ಸ್​ನ ಅತ್ಯುನ್ನತ ಗೌರವ: ಈ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆ

    ಪ್ರ​ಧಾನಿ ಮೋದಿಗೆ ಕೆಂಪುಹಾಸಿನ ಸ್ವಾಗತ: ಫ್ರಾನ್ಸ್​ ಅಧ್ಯಕ್ಷ ಮ್ಯಾಕ್ರನ್​ ಜತೆ ದ್ವಿಪಕ್ಷೀಯ ಸಭೆ; ರಫೇಲ್​, ಸಬ್​ಮರೀನ್​ ಒಪ್ಪಂದಕ್ಕೆ ಇಂದು ಅಂಕಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts