More

    ಪ್ರಧಾನಿ ಮೋದಿಗೆ ಫ್ರಾನ್ಸ್​ನ ಅತ್ಯುನ್ನತ ಗೌರವ: ಈ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆ

    ಪ್ಯಾರಿಸ್​: ಐತಿಹಾಸಿಕ ಕ್ಷಣವೊಂದರಲ್ಲಿ ಫ್ರೆಂಚ್​ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಪ್ರಧಾನಿ ಮೋದಿ ಅವರಿಗೆ ದೇಶದ ಅತ್ಯುನ್ನತ ಗೌರವ ಗ್ರ್ಯಾಂಡ್​ ಕ್ರಾಸ್​ ಆಫ್​ ದಿ ಲೀಜನ್ ಆಫ್ ಹಾನರ್​ ಪ್ರಶಸ್ತಿ ನೀಡಿ ಸನ್ಮಾನಿಸಿದರು.

    ಪ್ರಧಾನಿ ಮೋದಿ ಧನ್ಯವಾದ

    ಎರಡು ದಿನಗಳ ಭೇಟಿಗಾಗಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್​ಗೆ ಗುರುವಾರ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಈ ವಿಶೇಷ ಪ್ರಶಸ್ತಿಗೆ ಭಾಜನರಾದರು. ಇದು ಫ್ರೆಂಚ್​ನ ಅತ್ಯುನ್ನತ ಗೌರವವಾಗಿದ್ದು, ಈ ಪ್ರಶಸ್ತಿ ಪಡೆದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ. ಗೌರವ ಸ್ವೀಕರಿಸಿದ ಪ್ರಧಾನಿ ಮೋದಿ ಭಾರತೀಯ ಪರವಾಗಿ ಮ್ಯಾಕ್ರನ್​ ಅವರಿಗೆ ಧನ್ಯವಾದ ತಿಳಿಸಿದರು. ಪ್ರಶಸ್ತಿ ಸಮಾರಂಭ, ಪ್ರಧಾನಿ ಮೋದಿಗಾಗಿ ಎಲಿಸೀ ಅರಮನೆಯಲ್ಲಿ ಮ್ಯಾಕ್ರನ್​ ಆಯೋಜಿಸಿದ್ದ ಖಾಸಗಿ ಔತಣಕೂಟದಲ್ಲಿ ನಡೆಯಿತು.

    ಇದನ್ನೂ ಓದಿ: 45 ವರ್ಷಗಳ ಬಳಿಕ ದಿಲ್ಲಿಯಲ್ಲಿ ಯಮುನೆಯ ರುದ್ರನರ್ತನ; ಜನಜೀವನ ಸಂಪೂರ್ಣ ಅಸ್ತವ್ಯಸ್ತ

    ಏಕೈಕ ಗೌರವ

    ಈ ಬಗ್ಗೆ ಭಾರತದ ವಿದೇಶಾಂಗ ಸಚಿವಾಲಯ ಟ್ವೀಟ್​ ಮಾಡಿದ್ದು, ಪ್ರಧಾನಿ ಮೋದಿ, ಫ್ರೆಂಚ್​ನ ಅತ್ಯುನ್ನತ ಗೌರವ ಗ್ರ್ಯಾಂಡ್​ ಕ್ರಾಸ್​ ಆಫ್​ ದಿ ಲೀಜನ್ ಆಫ್ ಹಾನರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜುಲೈ 13ರಂದು ರಿಪಬ್ಲಿಕ್​ ಆಫ್​ ಫ್ರಾನ್ಸ್​ನ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಪ್ರಶಸ್ತಿ ನೀಡಿ ಗೌರವಿಸಿದರು. ಈ ಏಕೈಕ ಗೌರವಕ್ಕಾಗಿ ಅಧ್ಯಕ್ಷ ಮ್ಯಾಕ್ರನ್ ಅವರಿಗೆ ಭಾರತದ ಜನತೆಯ ಪರವಾಗಿ ಪ್ರಧಾನಿ ಮೋದಿ ಅವರು ಧನ್ಯವಾದ ಅರ್ಪಿಸಿದರು ಎಂದು ಟ್ವೀಟ್​ನಲ್ಲಿ ಹೇಳಿದೆ.

    ಉತ್ತಮ ಸೂಚಕ

    ವಿದೇಶಾಂಗ ವ್ಯವಹಾರಗಳ ವಕ್ತಾರ ಅರಿಂದಮ್​ ಬಾಗ್ಚಿ ಟ್ವೀಟ್​ ಮಾಡಿ, ಭಾರತ-ಫ್ರಾನ್ಸ್ ಪಾಲುದಾರಿಕೆಯ ಮನೋಭಾವವನ್ನು ಸಾಕಾರಗೊಳಿಸುವ ಉತ್ತಮ ಸೂಚಕವಾಗಿದೆ. ಪ್ರಧಾನಿ ಮೋದಿ ಅವರು ಫ್ರಾನ್ಸ್​ನ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರಿಂದ ಫ್ರೆಂಚ್​ನ ಅತ್ಯುನ್ನತ ಗೌರವ ಗ್ರ್ಯಾಂಡ್​ ಕ್ರಾಸ್​ ಆಫ್​ ದಿ ಲೀಜನ್ ಆಫ್ ಹಾನರ್ ಪ್ರಶಸ್ತಿ ಸ್ವೀಕರಿಸಿದ್ದಾರೆ ಎಂದು ಹೇಳಿದ್ದಾರೆ.

    ಕೆಲವೇ ಮಂದಿಗೆ ಈ ಗೌರವ

    ವಿಶ್ವದಾದ್ಯಂತ ಕೆಲವೇ ಕೆಲವು ಮಂದಿ ಮಾತ್ರ ಈ ಗ್ರ್ಯಾಂಡ್​ ಕ್ರಾಸ್​ ಆಫ್​ ದಿ ಲೀಜನ್ ಆಫ್ ಹಾನರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರುಗಳಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ, ಕಿಂಗ್ ಚಾರ್ಲ್ಸ್ (ಆಗಿನ ಪ್ರಿನ್ಸ್ ಆಫ್ ವೇಲ್ಸ್), ಮಾಜಿ ಜರ್ಮನ್ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ ಮತ್ತು ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಬೌಟ್ರೋಸ್-ಘಾಲಿ ಸೇರಿದ್ದಾರೆ. ಫ್ರಾನ್ಸ್ ನೀಡಿದ ಈ ಅತ್ಯುನ್ನತ ಗೌರವವು ಪ್ರಧಾನಿ ಮೋದಿಯವರಿಗೆ ವಿವಿಧ ದೇಶಗಳು ನೀಡಿರುವ ಉನ್ನತ ಅಂತರರಾಷ್ಟ್ರೀಯ ಪ್ರಶಸ್ತಿಗಳು ಮತ್ತು ಗೌರವಗಳ ಸರಣಿಯಲ್ಲಿ ಇದು ಕೂಡ ಸೇರಿಕೊಂಡಿದೆ.

    ಇದನ್ನೂ ಓದಿ: ಕೆಲವೇ ಹೊತ್ತಿನಲ್ಲಿ ನಾವುಳಿದ ಕಟ್ಟಡವೇ ಕುಸಿದೋಯ್ತು-ಹಿಮಾಚಲದ ಪ್ರವಾಹ ದಾಟಿ ಬಂದ ಕಾರವಾರದ ಯುವಕರ ರೋಚಕ ಸ್ಟೋರಿ

    ಪ್ರಧಾನಿಗೆ ಸಂದ ಗೌರವಗಳು

    2023ರ ಜೂನ್ ತಿಂಗಳಲ್ಲಿ ಈಜಿಪ್ಟ್‌ನಿಂದ ಆರ್ಡರ್ ಆಫ್ ದಿ ನೈಲ್, 2023ರ ಮೇ ತಿಂಗಳಲ್ಲಿ ಪಾಪುವ ನ್ಯೂ ಗಿನಿಯಾದ ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಲೋಗೊಹು, 2023ರ ಮೇ ತಿಂಗಳಲ್ಲಿ ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಫಿಜಿ, 2023ರ ಮೇ ತಿಂಗಳಲ್ಲಿ ಪಲಾವ್ ರಿಪಬ್ಲಿಕ್‌ನಿಂದ ಎಬಾಕಲ್ ಪ್ರಶಸ್ತಿ, 2021 ರಲ್ಲಿ ಭೂತಾನ್‌ನಿಂದ ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋ, 2020ರಲ್ಲಿ ಯುಎಸ್ ಸರ್ಕಾರದಿಂದ ಲೀಜನ್ ಆಫ್ ಮೆರಿಟ್, 2019 ರಲ್ಲಿ ಬಹ್ರೇನ್‌ನಿಂದ ಕಿಂಗ್ ಹಮದ್ ಆರ್ಡರ್ ಆಫ್ ದಿ ರಿನೈಸಾನ್ಸ್, 2019 ರಲ್ಲಿ ಮಾಲ್ಡೀವ್ಸ್‌ನಿಂದ ಆರ್ಡರ್ ಆಫ್ ದಿ ಡಿಸ್ಟಿಂಗ್ವಿಶ್ಡ್ ರೂಲ್ ಆಫ್ ನಿಶಾನ್ ಇಜುದ್ದೀನ್, 2019ರಲ್ಲಿ ರಷ್ಯಾದಿಂದ ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ಪ್ರಶಸ್ತಿ, 2019 ರಲ್ಲಿ ಯುಎಇಯಿಂದ ಆರ್ಡರ್ ಆಫ್ ಜಾಯೆದ್ ಪ್ರಶಸ್ತಿ, 2018 ರಲ್ಲಿ ಗ್ರ್ಯಾಂಡ್ ಕಾಲರ್ ಆಫ್​ ದಿ ಸ್ಟೇಟ್ ಆಫ್ ಪ್ಯಾಲೆಸ್ಟೈನ್ ಪ್ರಶಸ್ತಿ, 2016 ರಲ್ಲಿ ಅಫ್ಘಾನಿಸ್ತಾನದಿಂದ ಸ್ಟೇಟ್ ಆರ್ಡರ್ ಆಫ್ ಗಾಜಿ ಅಮೀರ್ ಅಮಾನುಲ್ಲಾ ಖಾನ್ ಮತ್ತು 2016ರಲ್ಲಿ ಸೌದಿ ಅರೇಬಿಯಾದಿಂದ ಆರ್ಡರ್ ಆಫ್ ಅಬ್ದುಲಜೀಜ್ ಅಲ್ ಸೌದ್ ಪ್ರಶಸ್ತಿಗಳನ್ನು ಪ್ರಧಾನಿ ಮೋದಿ ಸ್ವೀಕರಿಸಿದ್ದಾರೆ.

    ಎರಡು ದಿನಗಳ ಭೇಟಿಗಾಗಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್​ಗೆ ಗುರುವಾರ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೆಂಪುಹಾಸಿನ ಸ್ವಾಗತ ನೀಡಲಾಯಿತು. ಶುಕ್ರವಾರ ಅವರು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಜತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ರಫೇಲ್ ಯುದ್ಧ ವಿಮಾನ ಖರೀದಿ, ಜಲಾಂತರ್ಗಾಮಿ ನಿರ್ಮಾಣ ಸಹಿತ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆ ಇದೆ. (ಏಜೆನ್ಸೀಸ್​)

    ಫ್ರಾನ್ಸ್​ನಲ್ಲೂ ಭಾರತದ UPI ಬಳಕೆ, ಐಫೆಲ್​ ಟವರ್​ನಿಂದಲೇ ಆರಂಭಿಸಲಾಗುವುದು: ಪ್ರಧಾನಿ ಮೋದಿ ಹೇಳಿಕೆ

    ಪ್ರ​ಧಾನಿ ಮೋದಿಗೆ ಕೆಂಪುಹಾಸಿನ ಸ್ವಾಗತ: ಫ್ರಾನ್ಸ್​ ಅಧ್ಯಕ್ಷ ಮ್ಯಾಕ್ರನ್​ ಜತೆ ದ್ವಿಪಕ್ಷೀಯ ಸಭೆ; ರಫೇಲ್​, ಸಬ್​ಮರೀನ್​ ಒಪ್ಪಂದಕ್ಕೆ ಇಂದು ಅಂಕಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts