More

    ಕೆಲವೇ ಹೊತ್ತಿನಲ್ಲಿ ನಾವುಳಿದ ಕಟ್ಟಡವೇ ಕುಸಿದೋಯ್ತು-ಹಿಮಾಚಲದ ಪ್ರವಾಹ ದಾಟಿ ಬಂದ ಕಾರವಾರದ ಯುವಕರ ರೋಚಕ ಸ್ಟೋರಿ

    ಕಾರವಾರ:`ನಮ್ಮ ಅದೃಷ್ಟ ಚೆನ್ನಾಗಿತ್ತು. ಕೆಲವೇ ಗಂಟೆಗಳಲ್ಲಿ ನಾವು ಭಾರಿ ಅನುಹುತಗಳಿಂದ ಬಚಾವಾದೆವು’ ಎಂದು ಕಾರವಾರದ ಸಾಹಸಿ ಯುವಕರಾದ ಕೋಲ್ಡ್ಡ್ರಿಂಕ್ಸ್ ಅಂಗಡಿ ಮಾಲೀಕ ಪ್ರಕಾಶ ನಾಯ್ಕ ಹಾಗೂ ಆರ್ಕಿಟೆಕ್ಟ್ ದರ್ಶನ ಭುಜಲೆ ತಮ್ಮ ಸಾಹಸದ ಕಥೆ ಹೇಳುತ್ತಾರೆ.

    ಹಿಮಾಚಲ ಪ್ರದೇಶದಲ್ಲಿ ಉಂಟಾಗಿರುವ ಭಾರಿ ಪ್ರವಾಹದ ನಡುವೆ ಬೈಕ್ ರೇಡ್ ಮಾಡಿಕೊಂಡು ಸುರಕ್ಷಿತವಾಗಿ ತವರೂರು ತಲುಪಿದ ಅವರು, ತಮ್ಮ ಪ್ರಯಾಣದ ಮೈ ಝುಂ ಎನಿಸುವ ಅನುಭವವನ್ನು `ವಿಜಯವಾಣಿ’ ಜತೆ ಹಂಚಿಕೊಂಡವರು.

    Karwar-Bikers

    ಇವರಿಬ್ಬರ ಜತೆ ಕುಮಟಾದ ಬೈಕ್‌ ಶೋರೂಂ ಮಾಲೀಕ ಅಲ್ಮಾಬ್ರೂಕ್ ಗಣಿ, ಕಾರವಾರದ ವೃಷಭ ಕಾಮತ್, ಅಲಿಸಾಬ್ ಕುಕ್ಕಳ್ಳಿ, ಸೇರಿ ಒಟ್ಟು ಐದು ಜನ ಮೂರು ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಇಡೀ ಉತ್ತರ ಭಾರತವನ್ನು ಸುತ್ತಿ ಬಂದಿದ್ದಾರೆ.

    ಜೂನ್ 7 ರಂದು ಕಾರವಾರದಿಂದ ಹೊರಟ ಈ ತಂಡ 8,900 ಕಿಮೀ ಸುತ್ತಿ ಲದಾಕ್ ನೋಡಿಕೊಂಡು ಬುಧವಾರ ವಾಪಸಾಗಿದೆ. ಕಾರವಾರ ಸೈಕಲ್ ಕ್ಲಬ್ ಸದಸ್ಯರು, ಕುಟುಂಬದವರು ಅವರನ್ನು ಮರಳಿ ತವರಿಗೆ ಸ್ವಾಗತಿಸಿದರು.

    ಕೆಲವೇ ಹೊತ್ತಿನಲ್ಲಿ ನಾವುಳಿದ ಕಟ್ಟಡವೇ ಕುಸಿದೋಯ್ತು-ಹಿಮಾಚಲದ ಪ್ರವಾಹ ದಾಟಿ ಬಂದ ಕಾರವಾರದ ಯುವಕರ ರೋಚಕ ಸ್ಟೋರಿ

    `ಕುಲು ಸಮೀಪ ಕಸೋಲ್ ಎಂಬಲ್ಲಿ ನಾವು ರಾತ್ರಿ ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದೆವು. ಅಂದು ರಾತ್ರಿಯಿಡೀ ಮಳೆಯಾಗುತ್ತಿತ್ತು. ಬೆಳಗ್ಗೆ ಸಣ್ಣ ಮಳೆಯಲ್ಲೇ ನಾವು ಎದ್ದು ಮುಂದಿನ ಪ್ರಯಾಣ ಆರಂಭಿಸಿದ್ದೆವು. ಮರುದಿನ ಜೈಪುರ ತಲುಪಿ ಮೊಬೈಲ್ ತೆಗೆದು ನೋಡಿದಾಗ ಎದೆ ಧಸ್ ಎಂದಿತ್ತು. ಭಾರಿ ಪ್ರವಾಹದಿಂದ ನಾವು ಉಳಿದಿದ್ದ ಹೋಟೆಲ್ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿತ್ತು’

    ಶ್ರೀನಗರ ಸಮೀಪವೂ ನಮಗೆ ಇದೇ ಅನುಭವವಾಯಿತು. ಅಲ್ಲೂ ನಾವು ದಾಟಿ ಹೋದ ಒಂದೇ ದಿನದಲ್ಲಿ ಪ್ರವಾಹದಿಂದ ಸುರಂಗವೊಂದು ಕುಸಿಯಿತು’ ಎನ್ನುತ್ತಾರೆ ದರ್ಶನ್ ಭುಜಲೆ.

    ಇದನ್ನೂ ಓದಿ:ಚಾಲಕನ ನಿಯಂತ್ರಣ ತಪ್ಪಿ ಸರ್ವೀಸ್​ ರಸ್ತೆಗೆ ನುಗ್ಗಿದ ಕಂಟೇನರ್​; ತಪ್ಪಿತು ಬಾರಿ ಅನಾಹುತ


    `ಪ್ರತಿ ದಿನ ನಾವು ಸುಮಾರು 600 ಕಿಮೀ ದೂರ ಕ್ರಮಿಸುವ ಗುರಿ ಇಟ್ಟುಕೊಂಡು ಹೊರಟಿದ್ದೆವು. ರಾತ್ರಿಯಾದ ತಕ್ಷಣ ಕೆಲವೆಡೆ ಹೋಟೆಲ್‌ನಲ್ಲಿ ಉಳಿದರೆ ಇನ್ನೂ ಕೆಲವೆಡೆ ಟೆಂಟ್ ಹಾಕಿಕೊಂಡು ಉಳಿದೆವು. ಅಜ್ಮೇರ್‌ನಿಂದ ಜೈಪುರ ತಲುಪುವಾಗ ತಡವಾಯಿತು.

    ಹೆದ್ದಾರಿ ಪಕ್ಕವೇ ಟೆಂಟ್ ಹಾಕಿಕೊಂಡು ರಾತ್ರಿ ಉಳಿದೆವು. ಬೆಳಗ್ಗೆ 4 ಗಂಟೆಗೆ ಭಾರಿ ಮಳೆಯಾಗಿ ಟೆಂಟ್ ಎಲ್ಲಾ ಒದ್ದೆಯಾಗಿ ಹೋಯಿತು. ಇಂಥ ಹಲವು ಅನುಭವಗಳಾಗಿವೆ ಎನ್ನುತ್ತಾರೆ ಪ್ರಕಾಶ ನಾಯ್ಕ.


    `ಪುಣೆ, ಇಂದೋರ್ ಅಜ್ಮೇರ್, ಜೈಪುರ, ಆಗ್ರಾ, ದೆಹಲಿ, ಪಠಾಣಕೋಟ್, ಅಮೃತಸರ, ಜಮ್ಮು, ಶ್ರೀನಗರ, ಕಾರ್ಗಿಲ್, ಲೇಹ್, ಲದಾಕ್, ಸರ್ಚು, ಮಲಾಲಿ, ಶಿಲ್ಮಾ ಚಂಡೀಘಢ ಹೀಗೆ ದೇಶದ ಪ್ರಮುಖ ಊರುಗಳನ್ನು ತಲುಪಿದ್ದೇವೆ.

    ಅಮೃತಸರದಲ್ಲಿ ವಾಘಾ ಬಾರ್ಡರ್, ಕಾರ್ಗಿಲ್‌ನ ಹುತಾತ್ಮರ ಸ್ಮಾರಕಗಳು ನನ್ನ ಮರೆಯಲಾರದ ಅನುಭವ. ದೇಶದ ಪ್ರತಿಯೊಬ್ಬರೂ ನೋಡಬೇಕಾದ ಸ್ಥಳಗಳವು’ ಎನ್ನುತ್ತಾರೆ ದರ್ಶನ್ ಭುಜಲೆ.


    ಟಯರ್ ಪಂಚರ್:
    `ಲಡಾಕ್-ಲೇಹ್ ನಡುವೆ ರಸ್ತೆ ಸಮರ್ಪಕವಾಗಿಲ್ಲ. ಅಲ್ಲಿ ಮಾತ್ರ ನಮಗೆ ಪ್ರತಿ ದಿನ 200 ಕಿಮೀ ಮಾತ್ರ ಬೈಕ್ ರೈಡ್ ಮಾಡಲು ಸಾಧ್ಯವಾಯಿತು.

    ಭಾರತದ ಕೊನೆಯ ಹಳ್ಳಿ ತುರ್ತುಕ್ ತಲುಪಿದಾಗ ನಮ್ಮೊಬ್ಬರ ಬೈಕ್ ಪಂಚರ್ ಆಯಿತು. ನಂತರ ನಾವು ಅದನ್ನು ಬೇರೆ ಲಾರಿಯಲ್ಲಿ ಹಾಕಿ ಸುಮಾರು 200 ಕಿಮೀ ತಂದು ಪಂಚರ್ ಸರಿ ಮಾಡಿಕೊಳ್ಳಬೇಕಾಯಿತು.

    ಉಳಿದ ಸಣ್ಣಪುಟ್ಟ ಬೈಕ್ ಸಮಸ್ಯೆಗಳನ್ನು ನಮ್ಮ ಸ್ನೇಹಿತ ಬೈಕ್ ಮೆಕ್ಯಾನಿಕ್ ಗಣಿ ಅವರೇ ರಿಪೇರಿ ಮಾಡಿದರು ಎನ್ನುತ್ತಾರೆ ಪ್ರಕಾಶ ನಾಯ್ಕ.

    ವಿಶ್ವದ ಎತ್ತರದ ಸ್ಥಳಕ್ಕೆ

    Karwar-yuth-went-to-Umling-La-by-bike


    ವಾಹನ ತೆರಳುವ ವಿಶ್ವದ ಅತಿ ಎತ್ತರದ ಪ್ರದೇಶ ಉಮ್‌ಲಿಂಗ್ ಲಾ ಸಮುದ್ರ ಮಟ್ಟದಿಂದ 19024 ಅಡಿ ಇರುವ ಈ ಪ್ರದೇಶದಲ್ಲಿ ಶೂನ್ಯಕ್ಕಿಂತ ಕಡಿಮೆ ತಾಪಮಾನ ಇರುತ್ತದೆ. ಅಲ್ಲಿಂದ ಅತೀ ಸಮೀಪದಲ್ಲಿ ಚೀನಾ ಗಡಿಯಿದೆ. ವರ್ಷದ ಎಲ್ಲ ಸಮಯದಲ್ಲಿ ಅಲ್ಲಿಗೆ ತೆರಳಲು ಅವಕಾಶ ಸಿಗುವುದಿಲ್ಲ. ನಮ್ಮ ಅದೃಷ್ಟಕ್ಕೆ ಅಲ್ಲಿಗೆ ತೆರಳಲು ಅವಕಾಶ ಸಿಕ್ಕಿತು. ನಡುವೆ ಕೊಂಚ ಆಮ್ಲಜನಕದ ಸಮಸ್ಯೆಯಾಯಿತು. ಆದರೆ, ಅದನ್ನೆಲ್ಲ ಮೀರಿ ನಾವು ಅಲ್ಲಿಗೆ ಹೋಗಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ ಬಂದೆವು ಎನ್ನುತ್ತಾರೆ ಬೈಕ್ ರೈಡರ್‌ಗಳು.



    ದೇಶದ ಪ್ರತಿಯೊಬ್ಬರೂ ಭಾರತ ದರ್ಶನ ಮಾಡಬೇಕು. ಇಲ್ಲಿನ ವೈವಿಧ್ಯತೆಯನ್ನು ಅರಿಯಬೇಕು. ಈ ಬೈಕ್ ಪ್ರವಾಸ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ಅಭೂತಪೂರ್ವ ಅನುಭವ ನೀಡಿದೆ.
    ಪ್ರಕಾಶ ನಾಯ್ಕ
    ಬೈಕ್ ರೈಡರ್
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts