More

    ಕ್ಷಯ ಮುಕ್ತ ರಾಷ್ಟ್ರವಾಗಿಸಲು ಸಹಕರಿಸಿ: ಅಲಯನ್ಸ್ ಕ್ಲಬ್‌ನ ಗವರ್ನರ್ ಕೆ.ಟಿ.ಹನುಮಂತು ಮನವಿ

    ಮಂಡ್ಯ: ಕ್ಷಯ ರೋಗ ಮುಕ್ತ ರಾಷ್ಟ್ರವನ್ನಾಗಿ ಮಾಡಲು ಎಲ್ಲರ ಸಹಕಾರ ಅವಶ್ಯಕವಾಗಿದೆ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಕ್ಲಬ್‌ನ ಜಿಲ್ಲಾ ಗರ್ವನರ್ ಕೆ.ಟಿ.ಹನುಮಂತು ಹೇಳಿದರು.
    ತಾಲೂಕಿನ ಕೀಲಾರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಅಲಯನ್ಸ್ ಕ್ಲಬ್ ಮತ್ತು ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ವಿಶ್ವ ಕ್ಷಯ ರೋಗದ ದಿನದ ಅಂಗವಾಗಿ ಗುರುವಾರ ಆಯೋಜಿಸಿದ್ದ ಕ್ಷಯ ರೋಗದ ಬಗ್ಗೆ ಜಾಗೃತಿ, ಪೌಷ್ಟಿಕಾಂಶದ ಆಹಾರ ಕಿಟ್ ವಿತರಣೆ ಹಾಗೂ ಕ್ಷಯ ರೋಗ ಪೂರ್ಣ ಗುಣಮುಖರಾದವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
    ಕ್ಷಯ ರೋಗದ ಬಗ್ಗೆ ನಿರಂತರ ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ. ಸರ್ಕಾರದ ಜತೆಗೆ ಸಾರ್ವಜನಿಕರು, ಸಂಘ ಸಂಸ್ಥೆಗಳು ಸಹಕಾರ ಅತಿ ಮುಖ್ಯವಾಗಿದೆ, ಇದರಿಂದ ಕ್ಷಯ ಮುಕ್ತ ದೇಶವನ್ನಾಗಿ ಮಾಡಬಹುದು. ಈ ರೋಗ ಮನುಕುಲಕ್ಕೆ ಮಾರಕವಾಗಿದೆ. ಇದರಿಂದ ಬಡವರು ಮತ್ತು ಮಧ್ಯಮ ವರ್ಗದವರು ಹೆಚ್ಚು ಬಲಿಯಾಗುತ್ತಿದ್ದಾರೆ. ಭಾರತದಲ್ಲಿ ವರ್ಷಕ್ಕೆ 5 ಲಕ್ಷ ಜನ ಮೃತಪಡುತ್ತಿದ್ದಾರೆ. ಆದ್ದರಿಂದ ಹೆಚ್ಚೆಚ್ಚು ಜಾಗೃತಿಯನ್ನು ಮೂಡಿಸಿ ಕ್ಷಯ ಮುಕ್ತ ದೇಶವನ್ನಾಗಿ ಮಾಡೋಣ ಎಂದು ಕರೆ ನೀಡಿದರು,
    ಜಿಲ್ಲಾ ಕ್ಷಯ ರೋಗ ನಿಯಂತ್ರಣದ ಮೇಲ್ವಿಚಾರಕ ಎಚ್.ಎಂ.ರವಿ ಮಾತನಾಡಿ, ಕ್ಷಯ ರೋಗ ದೇಹದ ಯಾವ ಭಾಗದಲ್ಲಾದರೂ ಕಂಡು ಬರಬಹುದು. ಕೇಂದ್ರ ಸರ್ಕಾರದ ಯೋಜನೆಯಂತೆ 2025ಕ್ಕೆ ಕ್ಷಯ ಮುಕ್ತ ಭಾರತವನ್ನಾಗಿಸುವ ಗುರಿ ಹೊಂದಿದೆ. ಈ ರೋಗದ ಲಕ್ಷಣಗಳು ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಜ್ವರ, ಹಸಿವು, ತೂಕ ಇಳಿಕೆ ಆಗಿದೆ. ಹತ್ತಿರದ ತಾಲೂಕು ಆಸ್ಪತ್ರೆಗೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಿರಿ ಎಂದು ಸಲಹೆ ನೀಡಿದರು.
    ಮಕ್ಕಳ ತಜ್ಞ ಡಾ.ಶಿವಪ್ರಸಾದ್, ಸ್ತ್ರೀರೋಗ ತಜ್ಞ ಡಾ.ಪ್ರಕೃತಿ, ಡಾ.ಚಂದ್ರಶೇಖರ್, ಎಚ್.ಎಂ.ರವಿ, ಈಶ್ವರ್, ಶೋಭಾ, ಆನಂದ್, ಲಯನ್ಸ್ ಸಿದ್ದರಾಜು ಇದ್ದರು. ಇದೇ ಸಂದರ್ಭದಲ್ಲಿ ಕ್ಷಯ ರೋಗದಿಂದ ಗುಣಮುಖರಾದ ಸರ್ವ ಮಂಗಳಾ ಮಾತನಾಡಿದರು. ನಂತರ ಆರೋಗ್ಯ ಕಿಟ್ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts