More

    ಫ್ರೆಂಚ್ ಓಪನ್ ಫೈನಲ್​ ಪ್ರವೇಶಿಸಿ ಇತಿಹಾಸ ಬರೆದ ಸಿಸಿಪಾಸ್

    ಪ್ಯಾರಿಸ್: ಗ್ರೀಕ್‌ನ ಸ್ಟೆಫಾನೋಸ್ ಸಿಸಿಪಾಸ್ ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಸುತ್ತಿಗೇರಿ ಹೊಸ ಇತಿಹಾಸ ಬರೆದಿದ್ದಾರೆ. 22 ವರ್ಷದ ಸಿಸಿಪಾಸ್ ಚೊಚ್ಚಲ ಗ್ರಾಂಡ್ ಸ್ಲಾಂ ಫೈನಲ್ ಪ್ರವೇಶಿಸಿದ್ದಾರೆ.

    5ನೇ ಶ್ರೇಯಾಂಕಿತ ಸಿಸಿಪಾಸ್ ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ ವಿರುದ್ಧ 6-3, 6-3, 4-6, 4-6, 6-3 ಸೆಟ್‌ಗಳಿಂದ ಹೋರಾಟಯುತ ಗೆಲುವು ದಾಖಲಿಸಿದರು. 3 ಗಂಟೆ 37 ನಿಮಿಷಗಳ ಕಾಲ ಸಾಗಿದ ಪಂದ್ಯದ ಮೊದಲೆರಡು ಸೆಟ್ ಗೆದ್ದು ಸಿಸಿಪಾಸ್ ಆರಂಭಿಕ ಮುನ್ನಡೆ ಸಾಧಿಸಿದರೂ, ಮುಂದಿನೆರಡು ಸೆಟ್‌ಗಳಲ್ಲಿ 24 ವರ್ಷದ ಜ್ವೆರೇವ್‌ರಿಂದ ತಿರುಗೇಟು ಎದುರಿಸಿದರು.

    ಇದನ್ನೂ ಓದಿ: ಕೆಎಲ್​ ರಾಹುಲ್​ ಜತೆಗೆ ಗೆಳತಿ ಅಥಿಯಾ ಶೆಟ್ಟಿ ಕೂಡ ಸೌಥಾಂಪ್ಟನ್​ನಲ್ಲಿ ಕ್ವಾರಂಟೈನ್​?

    ರೊಲ್ಯಾಂಡ್ ಗ್ಯಾರಸ್‌ನಲ್ಲಿ ಸತತ 2ನೇ ಮತ್ತು ಗ್ರಾಂಡ್ ಸ್ಲಾಂನಲ್ಲಿ ಸತತ 3ನೇ ಬಾರಿ ಉಪಾಂತ್ಯಕ್ಕೇರಿದ್ದ ಸಿಸಿಪಾಸ್, ಭಾನುವಾರ ನಡೆಯಲಿರುವ ಪ್ರಶಸ್ತಿ ಕಾದಾಟದಲ್ಲಿ ವಿಶ್ವ ನಂ. 1 ನೊವಾಕ್ ಜೋಕೊವಿಕ್ ಅಥವಾ 13 ಬಾರಿಯ ಚಾಂಪಿಯನ್ ರಾಫೆಲ್ ನಡಾಲ್ ಅವರನ್ನು ಎದುರಿಸಲಿದ್ದಾರೆ.

    ಸಿಸಿಪಾಸ್ ಗ್ರಾಂಡ್ ಸ್ಲಾಂ ಫೈನಲ್‌ಗೇರಿದ ಮೊದಲ ಗ್ರೀಕ್ ಆಟಗಾರ ರೆನಿಸಿದ್ದಾರೆ. ಜತೆಗೆ 2010ರ ಬಳಿಕ (ಆಂಡಿ ಮರ‌್ರೆ) ಗ್ರಾಂಡ್ ಸ್ಲಾಂ ಪ್ರಶಸ್ತಿ ಸುತ್ತಿಗೇರಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಕಾನ್‌ವೇ ಮತ್ತೊಂದು ದಾಖಲೆ, ಇಂಗ್ಲೆಂಡ್‌ಗೆ ನ್ಯೂಜಿಲೆಂಡ್ ದಿಟ್ಟ ಉತ್ತರ

    ಕ್ರಿಕೆಟ್​ ಆಡುವ ಎಲ್ಲರಿಗೂ ಸಿಕ್ಸ್​ ಪ್ಯಾಕ್​ ಇರಬೇಕಾಗಿಲ್ಲ, ಪಾಕ್​ ಕ್ರಿಕೆಟಿಗನಿಗೆ ಪ್ಲೆಸಿಸ್​ ಬೆಂಬಲ

    ಒಲಿಂಪಿಕ್ಸ್​ ವೇಳೆ ಕ್ರೀಡಾಪಟುಗಳಿಗೆ 1.60 ಲಕ್ಷ ಕಾಂಡೋಮ್​ ವಿತರಣೆ, ಆದರೆ ಬಳಸುವಂತಿಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts