More

    ಗಡಗಡ ನಡುಗಿತು ಟ್ರಂಪ್​ ಕೈ, ಶುರುವಾಯ್ತು ಗುಮಾನಿ: ವಿಡಿಯೋ ವೈರಲ್​

    ವಾಷಿಂಗ್ಟನ್: ಕೆಲ ದಿನಗಳ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ಸೇನಾ ಕಾಲೇಜಿನಲ್ಲಿ ಪದವೀಧರರನ್ನು ಉದ್ದೇಶಿಸಿ ಮಾತನಾಡಿದ ನಂತರ ಮೆಟ್ಟಿಲುಗಳ ಮೂಲಕ ಇಳಿದು ಹೋಗಲು ಸಾಧ್ಯವಾಗಲಿಲ್ಲ. ಈ ವಿಷಯ ಭಾರಿ ಸುದ್ದಿಯಾಗಿತ್ತು. 74 ವರ್ಷದ ಟ್ರಂಪ್​ ವಯೋಸಹಜ ಸಮಸ್ಯೆಯಿಂದಾಗಿ ಹೀಗಾಗಿದೆ ಎಂದೇ ವಿಶ್ಲೇಷಿಸಲಾಗಿತ್ತು.

    ಆದರೆ ಇದನ್ನು ಒಪ್ಪದ ಟ್ರಂಪ್​ ಹಾಗೂ ಅವರ ಬೆಂಬಲಿಗರು ಮುಂಬರುವ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ಅವರು ರಾಜ್ಯಗಳ ಪ್ರವಾಸದಿಂದ ದಣಿದಿದ್ದಾರೆ ಎನ್ನುವ ಮೂಲಕ ಮಾತು ಮರೆಸಿದ್ದರು.

    ಆದರೆ ಈಗ ಮತ್ತೊಮ್ಮೆ ಟ್ರಂಪ್​ ಆರೋಗ್ಯದ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ. ಅದೇನೆಂದರೆ, ಅಮೆರಿಕ ಸೇನಾ ಅಕಾಡೆಮಿಯಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಅವರು ನೀರನ್ನು ಕುಡಿಯಲು ಗ್ಲಾಸ್​ ಎತ್ತಿಕೊಂಡರು. ಮೊದಲ ಬಲಗೈ ಬಳಸಿದ್ದರು ಆದರೆ ಕೈ ನಡುಗಿ ನೀರು ಕುಡಿಯಲು ಆಗಲಿಲ್ಲ. ನಂತರ ಕಷ್ಟಪಟ್ಟ ಟ್ರಂಪ್ ನಂತರ ಎಡ ಗೈ ಸಹಾಯ ಪಡೆದುಕೊಂಡಿದ್ದಾರೆ.

    ಇದನ್ನೂ ಓದಿ:  ಮದುವೆ ಮಂಟಪದಲ್ಲೇ ಹೈಡ್ರಾಮಾ: ಪತಿ ಎದುರೇ ಪ್ರೇಮಿಯ ಚುಂಬಿಸಿದಳು!

    ಈ ವಿಡಿಯೋ ಇದೀಗ ಭಾರಿ ವೈರಲ್​ ಆಗಿದ್ದು, ಮತ್ತೆ ಅವರ ಆರೋಗ್ಯದ ಬಗ್ಗೆ ಊಹಾಪೋಹಗಳು ಎದ್ದಿವೆ. ಸೋಷಿಯಲ್ ಮೀಡಿಯಾದಲ್ಲಿ ಇದು ಬಹಳ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

    ಟ್ರಂಪ್​ ಅವರಿಗೆ ಮೆದುಳಿನ ಸ್ವಲ್ಪ ಸಮಸ್ಯೆ ಇದ್ದು ತಪಾಸಣೆ ಅಗತ್ಯವಿದೆ ಎಂದು ಪ್ರಮುಖ ಮನೋವೈದ್ಯ ಡಾ. ಬೆಂಡಿ ಲೀ ಟ್ವೀಟ್ ಮಾಡಿದ್ದಾರೆ. ಪ್ರತಿವರ್ಷವೂ ಟ್ರಂಪ್​ ಅವರ ಆರೋಗ್ಯದ ಬಗ್ಗೆ ಅವರು ವಾರ್ಷಿಕ ವರದಿ ಸಲ್ಲಿಸುವ ವೇಳೆ ಈ ವಿಷಯ ತಿಳಿಸಿದ್ದಾರೆ. ಆದರೆ ಇನ್ನೊಮ್ಮೆ ಅಮೆರಿಕದ ಅಧ್ಯಕ್ಷ ಸ್ಥಾನದ ಗದ್ದುಗೆ ಏರುವ ತಯಾರಿ ನಡೆಸಿರುವ ಟ್ರಂಪ್​, ವಯಸ್ಸಿಗೂ ಮೀರಿದ ದೇಹ ದಾರ್ಢ್ಯತೆಯನ್ನು ಹೊಂದಿರುವುದಾಗಿ ಹೇಳುತ್ತಿದ್ದಾರೆ. (ಏಜೆನ್ಸೀಸ್​)


    ಬಿಎಸ್- ​4 ವಾಹನಗಳ ನೋಂದಣಿ, ಮಾರಾಟಕ್ಕೆ ‘ಸುಪ್ರೀಂ’ ಫುಲ್​ಸ್ಟಾಪ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts