More

    ಇದೇ ಮೊದಲ ಸಲ ಭಾರತೀಯ ಅಮೆರಿಕನ್ ಸೈಂಟಿಸ್ಟ್​ಗಳ ಬೆನ್ನುತಟ್ಟಿದ ಅಮೆರಿಕ ಅಧ್ಯಕ್ಷ ​:ಅಧ್ಯಕ್ಷೀಯ ಚುನಾವಣೆಯತ್ತ ದೃಷ್ಟಿ

    ವಾಷಿಂಗ್ಟನ್: ಕರೊನಾ COVID19 ವೈರಸ್​ ಸೋಂಕು ಜಗತ್ತಿನಾದ್ಯಂತ ಹರಡಿ ತಲ್ಲಣಗೊಳಿಸಿದ ನಂತರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಈ ಸೋಂಕಿನಿಂದ ಅತಿ ಹೆಚ್ಚು ನಷ್ಟಕ್ಕೀಡಾಗಿರುವುದು ಅಮೆರಿಕವೇ ಎಂಬುದೂ ಇದಕ್ಕೆ ಕಾರಣ. ಈ ನಡುವೆ, ಅಮೆರಿಕದಲ್ಲಿ ಈ ಸೋಂಕು ತಡೆಯಲು ಲಸಿಕೆ ಅಭಿವೃದ್ಧಿ ಪಡಿಸುವ ಕೆಲಸ ಭರದಿಂದ ಸಾಗಿದೆ.ಇದರಲ್ಲಿ ಭಾರತದ ಸೈಂಟಿಸ್ಟ್​​ಗಳೂ ಕೆಲಸ ಮಾಡುತ್ತಿದ್ದಾರೆ.ಆದರೆ, ಇದೇ ಮೊದಲ ಸಲ ಅಧ್ಯಕ್ಷ ಟ್ರಂಪ್​ ಇಂಡಿಯನ್ ಅಮೆರಿಕನ್ ಸೈಂಟಿಸ್ಟ್​ಗಳು ಸಂಶೋಧಕರನ್ನು ಗ್ರೇಟ್​ ಎಂದು ಕೊಂಡಾಡಿ ಪ್ರಶಂಸಿದ್ದಾರೆ.

    ಇದನ್ನೂ ಓದಿ: ನಮ್ಮ ಫ್ರೆಂಡ್ ಭಾರತಕ್ಕೆ ವೆಂಟಿಲೇಟರ್​ಗಳನ್ನು ಕೊಡುಗೆಯಾಗಿ ಕೊಡ್ತೇವೆ ಎಂದ ಅಮೆರಿಕ ಅಧ್ಯಕ್ಷ

    ವೈಟ್​ಹೌಸ್​ನ ರೋಸ್ ಗಾರ್ಡನ್​ನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಸಂದರ್ಭದಲ್ಲಿ ಅಧ್ಯಕ್ಷ ಟ್ರಂಪ್ ಈ ವಿಷಯ ಪ್ರಸ್ತಾಪಿಸಿದ್ದು, ಅಮೆರಿಕದಲ್ಲಿ ಭಾರತೀಯರು ಭಾರಿ ಸಂಖ್ಯೆಯಲ್ಲಿ ಇದ್ದಾರೆ.ಅವರಲ್ಲೂ ಬಹುತೇಕರು ಗ್ರೇಟ್ ಸೈಂಟಿಸ್ಟ್​ಗಳು, ಸಂಶೋಧಕರು ಇದ್ದು ನಾವೀಗ ತಯಾರಿಸುತ್ತಿರುವ ಕೋವಿಡ್​ 19 ಲಸಿಕೆ ಅಭಿವೃದ್ಧಿ ಪಡಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.ಅವರ ಕೆಲಸವನ್ನು ಕೊಂಡಾಡಲೇ ಬೇಕು ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಇಂದಿನ ಮಹಾಯುದ್ಧಗಳ ವಂಚನೆಯ ತೀವ್ರತೆ, ಸಾಂದ್ರತೆ

    ಬಹುತೇಕ ಇಂಡಿಯನ್ ಅಮೆರಿಕನ್ನರು ಮೆಡಿಕಲ್ ಸೈನ್ಸ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್​ ಹೆಲ್ತ್​, ಯೂನಿವರ್ಸಿಟೀಸ್​, ರೀಸರ್ಚ್​ ಇನ್​ಸ್ಟಿಟ್ಯೂಟ್ಸ್​, ಬಯೋಫಾರ್ಮಾ ಸ್ಟಾರ್ಟಪ್​ಗಳಲ್ಲಿ ಕೆಲಸ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಅಮೆರಿಕದಲ್ಲಿ ಅಂದಾಜು 40 ಲಕ್ಷ ಭಾರತೀಯ ಅಮೆರಿಕನ್ನರಿದ್ದಾರೆ.ಈ ಪೈಕಿ ಈ ಸಲದ ಅಧ್ಯಕ್ಷೀಯ ಚುನಾವಣೆಗೆ ಮತಚಲಾಯಿಸುವ ಮತದಾರರ ಸಂಖ್ಯೆ ಅಂದಾಜು 25 ಲಕ್ಷ. ಈ ಹಿಂದೆಯೂ 2016ರಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಟ್ರಂಪ್​ ಅವರು ನ್ಯೂಜೆರ್ಸಿಯಲ್ಲಿ ಭಾರತೀಯ ಅಮೆರಿಕನ್ನರ ಸಭೆಯಲ್ಲಿ ಪಾಲ್ಗೊಂಡ ಮೊದಲಿಗ ಎನಿಸಿಕೊಂಡಿದ್ದಾರೆ.ಅಲ್ಲಿಂದೀಚೆಗೆ ಟ್ರಂಪ್ ಸಂದರ್ಭ ಸಿಕ್ಕಾಗೆಲ್ಲ ಭಾರತವನ್ನು ಭಾರತೀಯರನ್ನು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಕೊಂಡಾಡುತ್ತಲೇ ಬಂದಿದ್ದಾರೆ.(ಏಜೆನ್ಸೀಸ್​)

    ಹೆಂಡ್ತಿ ಡೈವೋರ್ಸ್ ಕೇಳಿದ್ಳು.. ಗಂಡ ಆಕೆಯ ಮೂಗನ್ನೇ ಕತ್ತರಿಸಿದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts