More

    2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಡೋನಾಲ್ಡ್​ ಟ್ರಂಪ್​ ಘೋಷಣೆ

    ವಾಷಿಂಗ್ಟನ್​: ಮುಂದಿನ ಅಧ್ಯಕ್ಷೀಯ ಚುನಾವಣೆಗೆ ಸ್ಫರ್ಧೆ ಮಾಡುವುದಾಗಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಘೋಷಣೆ ಮಾಡಿದ್ದಾರೆ. 2024ರಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ

    ಚುನಾವಣೆಯಲ್ಲಿ ಸ್ಪರ್ಧಿಸಲು ಬೇಕಾದ ಪೇಪರ್​ವರ್ಕ್​ ಅನ್ನು ಯುಎಸ್​ ಫೆಡರಲ್​ ಎಲೆಕ್ಷನ್​ ಕಮಿಷನ್​ಗೆ 76 ವರ್ಷದ ಡೊನಾಲ್ಡ್​ ಟ್ರಂಪ್​ ಸಲ್ಲಿಸಿದ್ದಾರೆ.​ ರಿಪಬ್ಲಿಕನ್ ಪಕ್ಷದಿಂದ ತಮ್ಮ ಉಮೇದುವಾರಿಕೆಯನ್ನು ಅಧಿಕೃತವಾಗಿ ಘೋಷಿಸಿದ ಮೊದಲ ಪ್ರಮುಖ ಸ್ಪರ್ಧಿ ಟ್ರಂಪ್ ಆಗಿದ್ದಾರೆ.

    ಅಮೆರಿಕವನ್ನು ಮತ್ತೆ ಶ್ರೇಷ್ಠ ಮತ್ತು ವೈಭವಯುತವಾಗಿಸಲು ನಾನು ಇಂದು ರಾತ್ರಿ ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಸ್ಥಾನಕ್ಕೆ ನನ್ನ ಉಮೇದುವಾರಿಕೆಯನ್ನು ಘೋಷಿಸುತ್ತಿದ್ದೇನೆ ಎಂದಿದ್ದಾರೆ. ಇದಕ್ಕೆ ಸಂಬಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ವ್ಯಾಪಾರ ಉದ್ಯಮಿ ಹಾಗೂ ಟಿವಿ ಸ್ಟಾರ್​ ಆಗಿದ್ದ ಟ್ರಂಪ್​ ಅವರ ಗೆಲುವು ಇಡೀ ಜಗತ್ತನ್ನು ಬೆರಗುಗೊಳಿಸಿತು. ರಿಪಬ್ಲಿಕನ್ ನಾಯಕ ಟ್ರಂಪ್​ ಈಗಲೂ ತುಂಬಾ ಜನಪ್ರಿಯತೆಯನ್ನು ಅನುಭವಿಸುತ್ತಿದ್ದಾರೆ ಮತ್ತು ಮತ್ತೆ ಶ್ವೇತಭವನಕ್ಕೆ ಸ್ಪರ್ಧಿಸುವ ತನ್ನ ಮಹತ್ವಾಕಾಂಕ್ಷೆಗಳ ಬಗ್ಗೆ ಬಹಳ ಆಕಾಂಕ್ಷೆಯನ್ನು ಹೊಂದಿದ್ದಾರೆ. (ಏಜೆನ್ಸೀಸ್​)

    ಹೆಣ್ಣಾಗಿ ಹುಟ್ಟಿದ್ದೇ ತಪ್ಪಾ? ಟೀ ಮಾರುವ ಅರ್ಥಶಾಸ್ತ್ರ ಪದವೀಧರೆ, ಖ್ಯಾತ ಚಾಯ್​ವಾಲಿ ಪ್ರಿಯಾಂಕಾ ಕಣ್ಣೀರು!

    ಹಣದ ಆಸೆಗೆ ಬಿದ್ದು ಸಾವಿಗೆ ಶರಣಾದ ಉಪನ್ಯಾಸಕಿ! ಡೆತ್​ನೋಟ್​ನಲ್ಲಿತ್ತು ಆಕೆಯ ಕಣ್ಣೀರಿನ ಕತೆ

    ಪದವೀಧರ ಪ್ರಾಥಮಿಕ ಶಾಲಾ‌ ಶಿಕ್ಷಕರ ನೇಮಕ ಸಂಬಂಧ 1:1 ‘ತಾತ್ಕಾಲಿಕ ಆಯ್ಕೆ’ ಪಟ್ಟಿ ಈ ವಾರವೇ ಪ್ರಕಟ: ಬಿ.ಸಿ.ನಾಗೇಶ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts