More

    ಪದವೀಧರ ಪ್ರಾಥಮಿಕ ಶಾಲಾ‌ ಶಿಕ್ಷಕರ ನೇಮಕ ಸಂಬಂಧ 1:1 ‘ತಾತ್ಕಾಲಿಕ ಆಯ್ಕೆ’ ಪಟ್ಟಿ ಈ ವಾರವೇ ಪ್ರಕಟ: ಬಿ.ಸಿ.ನಾಗೇಶ್

    ಬೆಂಗಳೂರು: ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸದ್ಯ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿದ್ದು, ಇದೀಗ ಮಹತ್ವದ ವಿಷಯವೊಂದು ಹೊರಬಿದ್ದಿದೆ. ಖುದ್ದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

    ಪದವೀಧರ ಪ್ರಾಥಮಿಕ ಶಾಲಾ‌ ಶಿಕ್ಷಕರ ನೇಮಕಕ್ಕೆ ಸಂಬಂಧಿಸಿದಂತೆ 1:1 ‘ತಾತ್ಕಾಲಿಕ ಆಯ್ಕೆ’ ಪಟ್ಟಿಯನ್ನು ಇದೇ ವಾರದಲ್ಲಿ ಪ್ರಕಟಿಸಲಿರುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ‌ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

    ಟ್ವೀಟ್ ಮೂಲಕ ಅವರು ಈ ವಿಷಯ ತಿಳಿಸುತ್ತಿದ್ದಂತೆ ಹಲವರು ಅದಕ್ಕೆ ಪ್ರತಿಕ್ರಿಯಿಸಿದ್ದು, ಮಿಶ್ರ ಅಭಿಪ್ರಾಯ ವ್ಯಕ್ತವಾಗಿದೆ. ಹಲವರು ಈ ವಿಷಯಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಸಂತೋಷ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ದಯವಿಟ್ಟು ಯಾವುದೇ ಕಾರಣಕ್ಕೂ ಮದುವೆಯಾದ ವಿಚಾರ ಇಟ್ಟುಕೊಂಡು ಮಹಿಳೆಯರಿಗೆ ಜಾತಿ-ಆದಾಯ ವಿಚಾರವಾಗಿ ಅನ್ಯಾಯ ಮಾಡಬೇಡಿ ಎಂದು ಕೋರಿಕೊಂಡಿದ್ದಾರೆ.

    ಈಗಾಗಲೇ ಸಾಕಷ್ಟು ಜನ ಎಲಿಜಿಬಲ್ ಆಗಿದ್ದರೂ ರೋಸ್ಟರ್ ಪ್ರಕಾರ ನೇಮಕಾತಿಯಿಂದ ಹೊರ ಉಳಿಯುತ್ತಾರೆ, ಮತ್ತೊಮ್ಮೆ ಯಾಕೆ ಹೊಸ ನೇಮಕಾತಿ ಈಗಲೇ ಪೋಸ್ಟ್ ಹೆಚ್ಚಳ ಮಾಡಿ ಎಲ್ಲರನ್ನೂ ತೆಗೆದುಕೊಳ್ಳಬಹುದು ಎಂಬುದಾಗಿಯೂ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

    ಪದವೀಧರ ಪ್ರಾಥಮಿಕ ಶಾಲಾ‌ ಶಿಕ್ಷಕರ ನೇಮಕ ಸಂಬಂಧ 1:1 'ತಾತ್ಕಾಲಿಕ ಆಯ್ಕೆ' ಪಟ್ಟಿ ಈ ವಾರವೇ ಪ್ರಕಟ: ಬಿ.ಸಿ.ನಾಗೇಶ್

    ಪುರುಷರೇ ‘ಸೋ ಸ್ವೀಟ್​’, ಮಹಿಳೆಯರಲ್ಲ..!; ಇಲ್ಲಿದೆ ಅಂಕಿ-ಅಂಶ..

    ರಾಜ್ಯದಲ್ಲಿ ಮತ್ತೊಂದು ವಿಗ್ರಹ ಧ್ವಂಸ ಪ್ರಕರಣ; ಅದೇ ಸ್ಥಳದಲ್ಲಿ ಶಿಲುಬೆ ಆಕಾರ ರಚನೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts