More

    ಹಣದ ಆಸೆಗೆ ಬಿದ್ದು ಸಾವಿಗೆ ಶರಣಾದ ಉಪನ್ಯಾಸಕಿ! ಡೆತ್​ನೋಟ್​ನಲ್ಲಿತ್ತು ಆಕೆಯ ಕಣ್ಣೀರಿನ ಕತೆ

    ಬೀದರ್​: ದಿನದಿಂದ ದಿನಕ್ಕೆ ಸೈಬರ್ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಎಷ್ಟೇ ಚುರುಕಾಗಿ ಕೆಲಸ ಮಾಡಿದರೂ, ಎಲ್ಲೋ ಕೂತು ನಡೆಯುವ ಸೈಬರ್​ ವಂಚನೆಯನ್ನು ಭೇಧಿಸುವುದು ಮಾತ್ರ ಪೊಲೀಸ್ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ಸೈಬರ್​ ಖದೀಮರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡು ಪ್ರಾಣ ಬಿಡುತ್ತಿರುವವರ ಸಂಖ್ಯೆಯು ಹೆಚ್ಚಾಗುತ್ತಿದೆ. ಇದೀಗ ಇಂಥದ್ದೇ ಮತ್ತೊಂದು ಪ್ರಕರಣ ಬೀದರ್​ನಲ್ಲಿ ನಡೆದಿದೆ.

    ಆರತಿ (28) ಮೃತ ಉಪನ್ಯಾಸಕಿ. ಬಸವಕಲ್ಯಾಣ ತಾಲೂಕಿನ‌ ಇಸ್ಲಾಂಪೂರ್ ಗ್ರಾಮದ ಆರತಿ ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾಳೆ. ಮಗಳನ್ನು ಕಳೆದುಕೊಂಡು ಕುಟುಂಬ ಇದೀಗ ಶೋಕ ಸಾಗರದಲ್ಲಿ ಮುಳುಗಿದೆ. ಚೆನ್ನಾಗಿ ಓದಿ ಉಪನ್ಯಾಸಕಿ ಕೆಲಸದಲ್ಲಿದ್ದ ಆರತಿಯ ಜೀವನದಲ್ಲೇ ಈ ರೀತಿ ದುರಂತ ನಡೆದಿದ್ದು, ಏನೂ ತಿಳಿಯದ ಅನಕ್ಷರಸ್ಥರು ಸೈಬರ್​ ಖದೀಮರ ಜಾಲಕ್ಕೆ ಸಿಲುಕಿದರೆ, ಅದರಿಂದ ಹೊರಬರುವುದು ಸುಲಭವಲ್ಲ.

    ಆರತಿ ಖಾಸಗಿ ಕಾಲೆಜೊಂದರಲ್ಲಿ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆರತಿಗೆ ಆನಲೈನ್ ಮೂಲಕ ವ್ಯಕ್ತಿಯೊಬ್ಬ ಪರಿಚಯವಾಗಿದ್ದ. ಹಣ ಡಬಲ್​ ಮಾಡಿಕೊಡುವುದಾಗಿ ನಂಬಿಸಿದ್ದ. ಕೈಯಲ್ಲಿದ್ದ ಹಣ ಸೇರಿದಂತೆ ಸಾಲ ಮಾಡಿ ಹಂತ-ಹಂತವಾಗಿ ಸುಮಾರು 3 ಲಕ್ಷಕ್ಕೂ ಅಧಿಕ ಹಣವನ್ನು ಆ ವ್ಯಕ್ತಿಗೆ ಕೊಟ್ಟು ಹಣ ಹೂಡಿಕೆ ಮಾಡಿದ್ದಳು. ಇನ್ನೂ 82 ಸಾವಿರ ಹಣ ಹಾಕಿದರೆ ನಿಮ್ಮ ಎಲ್ಲ ಹಣ ವಾಪಸ್ ಬರುತ್ತದೆ ಎಂದು ನಂಬಿಸಿದ್ದ. ಹೀಗಾಗಿ ಹಣ ಭರಿಸಲಾಗದೇ ಜೀವನದಲ್ಲಿ ಜಿಗುಪ್ಸೆಗೊಂಡ ಆರತಿ ಆತ್ಮಹತ್ಯೆಯ ಹಾದಿ ತುಳಿದಿದ್ದಾರೆ.

    ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್ ಬರೆದಿಟ್ಟಿರುವ ಇವರು, ಗ್ರಾಮದ ವ್ಯಾಪ್ತಿಯ ಇಂಥದ್ದೇ ಬಾವಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವದಾಗಿ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ದಳದ ತಂಡ, ಬಾವಿಯಿಂದ ಶವ ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ. ಆರತಿ ಅವರ ತಂದೆ ಶಿವರಾಜ ಕನಾಟೆ ಅವರು ನೀಡಿದ ದೂರಿನ ಮೇರೆಗೆ ಇಲ್ಲಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ತನಿಖೆ ನಡೆಯುತ್ತಿದೆ.

    ಓದಿನಲ್ಲಿ ಮುಂದಿದ್ದ ಆರಂತಿ ಉಪನ್ಯಾಸದಲ್ಲಿಯೂ ಹೆಸರು ಮಾಡಿದ್ದರು. ಬೀದರ್ ಜಿಲ್ಲೆಯ ಬಸವಕಲ್ಯಾಣ ಪಟ್ಟಣದಲ್ಲಿರುವ ಸಂಕಲ್ಪ ಖಾಸಗಿ ಪಿಯುಸಿ ಕಾಲೇಜಿನಲ್ಲಿ ಮೂರು ವರ್ಷದಿಂದ ಉಪನ್ಯಾಸಕಿಯಾಗಿ ಕೆಲಸ ಮಾಡಿತ್ತಿದ್ದರು. ಇನ್ನೂ ಶಾಲಾ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳಿಗೆ ಅಚ್ಚಿಮೆಚ್ಚಿನ ಶಿಕ್ಷಕಿಯಾಗಿದ್ದರು. ಕನ್ನಡ, ಇಂಗ್ಲಿಷ್, ಹಿಂದಿ, ತೆಲಗು ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದರು. ಆದರೆ ಆನ್​ಲೈನ್ ವಂಚನೆಯಲ್ಲಿ ಮೋಸ ಹೋಗಿ ಸಾಲ ಮಾಡಿಕೊಂಡು ಆತ್ಮಹತ್ಯೆ ದಾರಿ ತುಳಿದಿದ್ದಾರೆ.

    ವ್ಯವಹಾರಿ ಮನಸ್ಥಿತಿ ಹೊಂದಿದ್ದ ಆರತಿ ಉಪನ್ಯಾಸಕಿ ವೃತ್ತಿಯೊಂದಿಗೆ ಏನಾದರೂ ವ್ಯವಹಾರ ಮಾಡಬೇಕು ಅನ್ನೋ ಉದ್ದೇಶದಿಂದ ಆನ್​ಲೈನ್​ನಲ್ಲಿ ಏನಾದರೂ ಕೆಲಸ ಮಾಡಬೇಕು ಅಂತಾ ಯೋಚಿಸಿದ್ದರು. ಈ ವೇಳೆ ಅವರಿಗೆ ಓರ್ವ ವ್ಯಕ್ತಿ ಆನ್​ಲೈನ್​ನಲ್ಲಿ ಪರಿಚಯವಾಗಿದ್ದು ಆನ್​ಲೈನ್ ವ್ಯಾಪಾರ ಮಾಡಲು ಶುರು ಮಾಡಿದ್ದರು. ಆರಂಭದಲ್ಲಿಯೇ 10 ಸಾವಿರ ರೂಪಾಯಿ ಹಣ ಹಾಕಿ ವ್ಯಾಪಾರ ಶುರುಮಾಡಿದ್ದರು. ನಂತರ 10 ರಿಂದ 20 ಸಾವಿರ 30 ಸಾವಿರ ಹೀಗೆ ಎರಡೂವರೆ ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಅಷ್ಟು ಹಣವನ್ನು ಸಾಲದ ರೂಪದಲ್ಲಿ ಆನ್ ಮೂಲಕ ಕಳೆದುಕೊಂಡು ಅದನ್ನು ಹೇಗೆ ಬರಿಸೋದು ಅಂತಾ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಎರಡು ಹೆಣ್ಣುಮಕ್ಕಳ ಬಳಿಕ ಉಟ್ಟಿದ್ದ ಆರತಿ ಓದಿನಲ್ಲಿ ಮುಂದಿದ್ದಳು. ಇಡೀ ಮನೆಯ ಜವ್ದಾರಿಯನ್ನು ನಿರ್ವಹಿಸುತ್ತಿದ್ದಳು. ಆದರೆ ಈಗ ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ನಮಗೆ ಬರಸಿಡಿಲು ಬಡಿದಂತಾಗಿದೆ ಎಂದು ಆತ್ಮಹತ್ಯೆಗೆ ಶರಣಾದ ಆರಂತಿ ತಂದೆ ನೋವು ತೋಡಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ಹೈಸ್ಕೂಲ್​ ಸಹಪಾಠಿಗಳಿಬ್ಬರಿಗೆ 35 ವರ್ಷಗಳ ಬಳಿಕ ಮದುವೆ ಮಾಡಿಸಿದ ಸ್ನೇಹಿತರು!

    ಬೆಂಗ್ಳೂರಿನಾಚೆಗೂ ಐಟಿ ವಿಸ್ತಾರ: 5 ವರ್ಷದಲ್ಲಿ 5 ಲಕ್ಷ ಉದ್ಯೋಗ ಸೃಷ್ಟಿ, 5 ಬಿಲಿಯನ್ ಡಾಲರ್ ರಫ್ತು

    ಸ್ವಾತಿ ಮುತ್ತಿನ ಮಳೆ ಹನಿಯೇ ಪ್ಯಾಕಪ್; ರಮ್ಯಾ ನಿರ್ಮಾಣದ ಮೊದಲ ಚಿತ್ರದ ಶೂಟಿಂಗ್ ಪೂರ್ಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts