More

  ಹೆಣ್ಣಾಗಿ ಹುಟ್ಟಿದ್ದೇ ತಪ್ಪಾ? ಟೀ ಮಾರುವ ಅರ್ಥಶಾಸ್ತ್ರ ಪದವೀಧರೆ, ಖ್ಯಾತ ಚಾಯ್​ವಾಲಿ ಪ್ರಿಯಾಂಕಾ ಕಣ್ಣೀರು!

  ಪಟನಾ: ಬಿಹಾರದ ಖ್ಯಾತ ಚಾಯ್​ವಾಲಿ (Chaiwali) ಪ್ರಿಯಾಂಕಾ ಗುಪ್ತಾ (Priyanka Gupta) ಕಣ್ಣೀರಿಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಬಿಹಾರ ಸರ್ಕಾರ ತನ್ನ ಟೀ ಮಳಿಗೆಯನ್ನು ಯಾವ ರೀತಿ ಮುಟ್ಟುಗೋಲು ಹಾಕಿಕೊಂಡಿತು ಎಂಬುದನ್ನು ವಿವರಿಸುತ್ತಾ ವಿಡಿಯೋದಲ್ಲಿ ಕಣ್ಣೀರಿಟ್ಟಿದ್ದಾಳೆ.

  ಅಂದಹಾಗೆ ಪ್ರಿಯಾಂಕಾ ಗುಪ್ತಾ ಎರಡು ವರ್ಷಗಳ ಕಾಲ ಉದ್ಯೋಗಕ್ಕಾಗಿ ಅಲೆದಾಡಿ ಕೊನೆಗೆ ಕೆಲಸ ಸಿಗದಿದ್ದಾಗ ಬಿಹಾರ ರಾಜಧಾನಿ ಪಟನಾದಲ್ಲಿರುವ ಮಹಿಳಾ
  ಕಾಲೇಜಿನ ಬಳಿ ಟೀ ಸ್ಟಾಲ್ (Tea Stall)​ ಅಳವಡಿಸಿಕೊಂಡಿರುವ ಸ್ವಂತ ದುಡಿಮೆ ಮಾಡುತ್ತಿದ್ದಾರೆ. ಮಳಿಗೆ ಅಳವಡಿಸಲು ಅನುಮತಿ ಪಡೆದಿದ್ದರೂ ಪಟನಾದ ಮಹಾನಗರ ಪಾಲಿಕೆ​ (Patna Municipal Corporation) ಅಧಿಕಾರಿಗಳು ಪದೇಪದೆ ಮುಟ್ಟುಗೋಲು (confiscation) ಹಾಕುತ್ತಿರುವುದರಿಂದ ಪ್ರಿಯಾಂಕಾ ಕಣ್ಣೀರಾಕಿದ್ದಾರೆ.

  ಬಿಹಾರ (Bihar)ದಲ್ಲಿ ನಾನು ವಿಭಿನ್ನವಾಗಿ ಏನಾದರೂ ಮಾಡಬಹುದು ಎಂದು ಭಾವಿಸಿದೆ. ಆದರೆ, ಇದು ಬಿಹಾರ. ಇಲ್ಲಿ ಹುಡುಗಿಯರ ಸ್ಥಾನಮಾನವು ಅಡುಗೆಮನೆಗೆ ಸೀಮಿತವಾಗಿದೆ ಎಂದು ವಿಡಿಯೋದಲ್ಲಿ ಪ್ರಿಯಾಂಕಾ ಹೇಳಿದ್ದಾರೆ. ಪಟನಾ ಮಹಾನಗರ ಪಾಲಿಕೆ ಆಯುಕ್ತರಿಂದ ಅನುಮತಿ ಪಡೆದ ನಂತರ ಕೆಲವು ದಿನಗಳವರೆಗೆ ಸ್ಥಳದಲ್ಲಿ ತನ್ನ ಸ್ಟಾಲ್ ಅನ್ನು ಸ್ಥಾಪಿಸಿದ್ದೇನೆ. ಆದರೂ ಅಧಿಕಾರಿಗಳು ಅವರ ಗಾಡಿಯನ್ನು ಸ್ಥಳದಿಂದ ತೆಗೆದಿದ್ದಾರೆ ಎಂದು ಪ್ರಿಯಾಂಕಾ ದೂರಿದ್ದಾರೆ.

  ನಮ್ಮ ಕಂಪನಿಯನ್ನು ಮುಚ್ಚಿದ ನಂತರ ನಾವು ಮನೆಗೆ ಹಿಂತಿರುಗುತ್ತೇವೆ. ಹೆಣ್ಣೊಬ್ಬಳು ಮನೆಯಲ್ಲಿಯೇ ಇರಬೇಕು ಎಂಬ ನನ್ನ ಸ್ಥಿತಿಯನ್ನು ತೋರಿಸಿದ ಪಟನಾ ಪಾಲಿಕೆ ಮತ್ತು ಬಿಹಾರದ ವ್ಯವಸ್ಥೆಗೆ ಧನ್ಯವಾದಗಳು ಎಂದು ಪ್ರಿಯಾಂಕಾ ಟೀಕಿಸಿದ್ದಾರೆ. ಒಂದು ಬಾರಿಯಲ್ಲಿ ಹಲವಾರು ಬಾರಿ ನನ್ನ ಮೇಲೆ ಟಾರ್ಗೆಟ್​ ಮಾಡಿದ್ದಾರೆ ಎಂದು ಪ್ರಿಯಾಂಕಾ ನೋವು ತೋಡಿಕೊಂಡಿದ್ದಾಳೆ. ಈ ವಿಡಿಯೋ ವೈರಲ್ (Viral Video)​ ಆದ ಬಳಿಕ ಪಾಲಿಕೆ ಅಧಿಕಾರಿಗಳು ಆಕೆಯ ಟೀ ಶಾಪ್​ ಅನ್ನು ಮರು ಸ್ಥಾಪಿಸಲು ಅವಕಾಶ ನೀಡಿದ್ದಾರೆಂದು ತಿಳಿದುಬಂದಿದೆ. (ಏಜೆನ್ಸೀಸ್​)

  ಎರಡು ವರ್ಷ ಅಲೆದ್ರೂ ಸಿಗದ ಕೆಲಸ: ಟೀ ಮಾರಾಟಕ್ಕಿಳಿದ ಅರ್ಥಶಾಸ್ತ್ರ ಪದವೀಧರೆಯ ಮನಕಲಕುವ ಕತೆಯಿದು

  ವಿದ್ಯಾಭ್ಯಾಸದ ಜತೆಜತೆಗೆ ಟೀ ಸ್ಟಾರ್ಟ್​ಅಪ್​ ಆರಂಭಿಸಿದ ಬಿ.ಟೆಕ್​ ವಿದ್ಯಾರ್ಥಿನಿ: ಚಾಯ್​ವಾಲಿಯ ಸ್ಫೂರ್ತಿಯ ಕತೆಯಿದು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts