More

    ಮೋದಿಗೆ ಕರೆ ಮಾಡಿದ ಟ್ರಂಪ್: ಚರ್ಚೆಯಾದ ವಿಷಯಗಳೇನು?

    ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರಲ್ಲದೆ, ಜಿ-7 ಶೃಂಗಸಭೆಗೂ ಆಮಂತ್ರಣ ನೀಡಿದರು.

    ಏಳು ರಾಷ್ಟ್ರಗಳ ಗುಂಪನ್ನು (ಜಿ-7) ಈಗಿರುವ ಸದಸ್ಯ ರಾಷ್ಟ್ರಗಳಿಗೆ ಸೀಮಿತಗೊಳಿಸದೆ ಅದರಾಚೆಗೂ ವಿಸ್ತರಿಸಿ, ಭಾರತದಂತಹ ಮಹತ್ವದ ರಾಷ್ಟ್ರಗಳನ್ನು ಸೇರಿಸಿಕೊಳ್ಳುವ ಇಂಗಿತವನ್ನು ಟ್ರಂಪ್ ವ್ಯಕ್ತಪಡಿಸಿದರು.

    ಇದನ್ನೂ ಓದಿ  ಸೀಲ್‌ಡೌನ್ ತೆರವಿಗಾಗಿ ಸಾಮಾಜಿಕ ಅಂತರ ಮರೆತ ಪ್ರತಿಭಟನಕಾರರು!

    ‘‘ಕರೊನಾ ನಂತರದ ಜಗತ್ತಿನಲ್ಲಿ ಉದ್ಭವಿಸಬಹುದಾದ ವಾಸ್ತವ ಸಂಗತಿಗಳನ್ನು ಮೊದಲೇ ಅರಿತು ಇಂಥದೊಂದು ಕ್ರಮಕ್ಕೆ ಮುಂದಾಗಿರುವ ನಿಮ್ಮ ದೂರದೃಷ್ಟಿ ಶ್ಲಾಘನಾರ್ಹವಾದುದು’’ ಎಂದು ಇದೇ ಸಂದರ್ಭದಲ್ಲಿ ಮೋದಿ ತಿಳಿಸಿದರು.

    ಜಗತ್ತಿನ ಒಳಿತಿಗಾಗಿ ಮತ್ತು ಶೃಂಗಸಭೆಯ ಉದ್ದೇಶಗಳ ಈಡೇರಿಕೆಗಾಗಿ ಅಮೆರಿಕ ಮತ್ತು ಇತರ ರಾಷ್ಟ್ರಗಳೊಂದಿಗೆ ಸೇರಿ ಕೆಲಸ ಮಾಡಲು ಭಾರತ ಉತ್ಸುಕವಾಗಿದೆ ಎಂದು ಮೋದಿ ಹೇಳಿದರು.

    ಇದೇ ವೇಳೆ, ಅಮೆರಿಕದಲ್ಲಿ ಭುಗಿಲೆದ್ದಿರುವ ಗಲಭೆ ಕುರಿತು ಪ್ರಸ್ತಾಪಿಸಿದ ಮೋದಿ, ಈ ಸಮಸ್ಯೆ ಉದ್ಭವಿಸಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರಲ್ಲದೆ, ಆದಷ್ಟು ಬೇಗ ಪರಿಹಾರವಾಗಲಿ ಎಂದು ಆಶಿಸಿದರು.

    ಎರಡೂ ದೇಶಗಳಲ್ಲಿರುವ ಕರೊನಾ ಹಾವಳಿಯ ಸ್ಥಿತಿಗತಿ, ಭಾರತ-ಚೀನಾ ಗಡಿ ವಿವಾದ, ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಆಗಬೇಕಾಗಿರುವ ಸುಧಾರಣೆ ಮುಂತಾದ ವಿಷಯಗಳ ಬಗ್ಗೆಯೂ ಇಬ್ಬರೂ ನಾಯಕರು ಚರ್ಚಿಸಿದರು.

    ಈ ವರ್ಷದ ಫೆಬ್ರವರಿಯಲ್ಲಿ ತಮ್ಮ ಭಾರತ ಭೇಟಿ ವೇಳೆ ಸಿಕ್ಕ ಆತ್ಮೀಯ ಸ್ವಾಗತವನ್ನು ಟ್ರಂಪ್ ಸ್ಮರಿಸಿದರು. ಈ ಭೇಟಿ ಹಲವಾರು ದೃಷ್ಟಿಯಿಂದ ಸ್ಮರಣೀಯ ಮತ್ತು ಐತಿಹಾಸಿಕ ಎಂದು ಮೋದಿ ಬಣ್ಣಿಸಿದರು.

    ಬೆಳಗಾವಿಯಲ್ಲಿ ಧಾರ್ಮಿಕ ಪ್ರಚಾರ ನಡೆಸಿದ 12 ತಬ್ಲಿಗಿಗಳು ಜೈಲಿಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts