More

    ಬೆಳಗಾವಿಯಲ್ಲಿ ಧಾರ್ಮಿಕ ಪ್ರಚಾರ ನಡೆಸಿದ 12 ತಬ್ಲಿಗಿಗಳು ಜೈಲಿಗೆ

    ಬೆಳಗಾವಿ: ವೀಸಾ ನಿಯಮ ಉಲ್ಲಂಘಿಸಿ ಧಾರ್ಮಿಕ ಪ್ರಚಾರ ನಡೆಸಿದ ಆರೋಪದಡಿ ಬಂಧಿತರಾಗಿದ್ದ ಇಂಡೋನೇಷ್ಯಾದ 10 ಹಾಗೂ ದೆಹಲಿಯ ಇಬ್ಬರು ಸೇರಿ 12 ಜನರಿಗೆ ಮಂಗಳವಾರ ವಿಚಾರಣಾ ನ್ಯಾಯಾಲಯವು ಜೂ. 16ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.

    ಇಂಡೋನೇಷ್ಯಾದಿಂದ ಭಾರತ ಪ್ರವಾಸದ ಹೆಸರಿನಲ್ಲಿ ವೀಸಾ ಪಡೆದು ಆಗಮಿಸಿದ್ದ 12 ಜನರು ತಬ್ಲಿಗಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹಾಗಾಗಿ ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಈಗ ಕ್ವಾರಂಟೈನ್ ಅವಧಿ ಮುಗಿದಿದ್ದರಿಂದ ಮಂಗಳವಾರ ಅವರನ್ನು ಬಂಧಿಸಲಾಗಿದೆ.

    ಇದನ್ನೂ ಓದಿ   ಕಳ್ಳೇರಿ ಗ್ರಾಪಂ ಕಚೇರಿ ಮುಂದೆ ಸಾರ್ವಜನಿಕರ ಪ್ರತಿಭಟನೆ

    ಬಂಧಿತರು ಧಾರ್ಮಿಕ ಪ್ರಚಾರಕ್ಕಾಗಿ ಮಾರ್ಚ್ 11ರಂದು ದೆಹಲಿಯಿಂದ ಬೆಳಗಾವಿಗೆ ಬಂದಿದ್ದರು. ಬಳಿಕ ನಗರದ ವಿವಿಧ ಮಸೀದಿಗಳಲ್ಲಿ ಧಾರ್ಮಿಕ ಪ್ರಚಾರ ಕೈಗೊಂಡಿದ್ದರು. ಬಳಿಕ ಇವರು ವೀಸಾ ನಿಯಮ ಉಲ್ಲಂಘನೆ ಮಾಡಿರುವ ಆರೋಪದಡಿ ಏಪ್ರಿಲ್ 10ರಂದು ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಬಂಧಿತರ ಆರೋಗ್ಯ ತಪಾಸಣೆ ನಡೆಸಿದ ಪೊಲೀಸರು ಮಾರ್ಚ್ 16ರಿಂದ ಜೂನ್ 1ರ ವರೆಗೆ ಮಸೀದಿಯೊಂದರಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಿದ್ದರು. ಇವರಲ್ಲಿ ಇಂಡೋನೇಷ್ಯಾದ ಐವರು ಮಹಿಳೆಯರು, ಐವರು ಪುರುಷರು ಹಾಗೂ ದೆಹಲಿಯ ಓರ್ವ ಪುರುಷ, ಓರ್ವ ಮಹಿಳೆ ಇದ್ದಾರೆ. ಇವರೆಲ್ಲರನ್ನೂ ಪೊಲೀಸರು ಈಗ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

    ವೀಸಾ ಮತ್ತು ಪಾಸ್‌ಪೋರ್ಟ್ ನಿಯಮ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯವು ಇವರೆಲ್ಲರನ್ನೂ ಜೈಲಿಗೆ ಕಳುಹಿಸಲು ಆದೇಶಿಸಿದೆ ಎಂದು ಮಾಳಮಾರುತಿ ಠಾಣೆ ಪೊಲೀಸರು ತಿಳಿಸಿದ್ದಾರೆ.

    ಈ ಬೈಸಿಕಲ್‌ನ ಬೆಲೆ ಎಷ್ಟು ಗೊತ್ತಾ? ಕೇಳಿದರೆ ಆಶ್ಚರ್ಯಪಡ್ತೀರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts