More

    ಸೀಲ್‌ಡೌನ್ ತೆರವಿಗಾಗಿ ಸಾಮಾಜಿಕ ಅಂತರ ಮರೆತ ಪ್ರತಿಭಟನಕಾರರು!

    ಸವಣೂರು: ಕರೊನಾ ಸೋಂಕಿತರು ಸಂಪೂರ್ಣ ಗುಣವಾಗಿದ್ದರೂ ಪಟ್ಟಣದ ಎಸ್.ಎಂ. ಕೃಷ್ಣ ನಗರದಲ್ಲಿನ ಸೀಲ್‌ಡೌನ್ ತೆರವುಗೊಳಿಸದಿರುವುದನ್ನು ಖಂಡಿಸಿ ಸ್ಥಳೀಯರು ಮಂಗಳವಾರ ಪ್ರತಿಭಟನೆ ನಡೆಸಿದರು.

    ಪರಸ್ಪರ ಅಂತರ ಮರೆತ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸ್ ಸಿಬ್ಬಂದಿ ಹರಸಾಹಸ ಪಟ್ಟರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಕರೊನಾ ಆತಂಕ ಮರೆತು ನೂರಾರು ಜನರು ಮೂರ‌್ನಾಲ್ಕು ಗಂಟೆಗಳ ಕಾಲ ಒಂದೆಡೆ ಸೇರಿ ಪ್ರತಿಭಟನೆ ನಡೆಸಿದ್ದು ಮತ್ತಷ್ಟು ಆತಂಕ ಹೆಚ್ಚುವಂತೆ ಮಾಡಿದೆ.

    ಇದನ್ನೂ ಓದಿ   ಬಾಂಗ್ಲಾ ಕ್ರಿಕೆಟಿಗರಿಗೆ ಭಾರತೀಯರೇ ಸ್ಫೂರ್ತಿ..!

    ಬೆಳಗ್ಗೆ ಅನವಶ್ಯಕವಾಗಿ ಓಡಾಡುತ್ತಿದ್ದ ಯುವಕನೊಬ್ಬನಿಗೆ ಪೊಲೀಸ್ ಕಾನ್‌ಸ್ಟೇಬಲ್ ಲಾಠಿ ರುಚಿ ತೋರಿಸಿದ್ದು, ‘ಮೇ 31ರ ನಂತರ ಸೀಲ್‌ಡೌನ್ ತೆರವುಗೊಳಿಸಬಹುದು’ ಎಂಬ ಗಾಳಿ ಸುದ್ದಿ ನಂಬಿ ಕಾಯುತ್ತ ಕುಳಿತಿದ್ದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು. ಹೀಗಾಗಿ ಸ್ಥಳೀಯರೆಲ್ಲರೂ ಸೇರಿ ಸೀಲ್‌ಡೌನ್ ಸಂಪೂರ್ಣ ತೆರವುಗೊಳಿಸಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆಗೆ ಕ್ಷಿುಳಿತರು.

    ಅಂಜುಮನ್ ಸಂಸ್ಥೆಯ ಅಧ್ಯಕ್ಷ ಜೀಶಾನಖಾನ್ ಪಠಾಣ, ಪುರಸಭೆ ಮಾಜಿ ಅಧ್ಯಕ್ಷ ಖಲಂದರ್‌ಅಹ್ಮದ್ ಅಕ್ಕೂರ ಹಾಗೂ ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.

    ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ, ಜಿಲ್ಲೆಯಲ್ಲಿ ಇದೇ ಸ್ಥಳದಿಂದ ಪ್ರಥಮ ಹಂತದ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರು ಗುಣವಾಗುವ ಮೊದಲೇ ಮತ್ತೊಂದು ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಸೀಲ್‌ಡೌನ್ ಮುಂದುವರಿಸಲಾಗಿದೆ. ಜಿಲ್ಲಾ ಆಡಳಿತದ ಆದೇಶ ಬಂದ ನಂತರ ಸೀಲ್‌ಡೌನ್ ತೆರವುಗೊಳಿಸಲಾಗುವುದು. ಅಲ್ಲಿಯವರೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

    ಬೆಳಗಾವಿಯಲ್ಲಿ ಧಾರ್ಮಿಕ ಪ್ರಚಾರ ನಡೆಸಿದ 12 ತಬ್ಲಿಗಿಗಳು ಜೈಲಿಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts