More

  ನಿಯೋಜಿತ ಅಧ್ಯಕ್ಷ ಜೋ ಬೈಡೆನ್​ಗೆ ಸೆನೆಟ್ ಸವಾಲು; ಹೊಸದಾಗಿ ಆಯ್ಕೆಯಾದ ಸೆನೆಟರ್​ಗಳ ಪ್ರಮಾಣ ಇಂದು

  ವಾಷಿಂಗ್ಟನ್: ಅಮೆರಿಕದಲ್ಲಿ ಕಳೆದ ನವೆಂಬರ್​ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆ ರಾಜಕೀಯ ಇತಿಹಾಸದಲ್ಲೇ ಗೊಂದಲಮಯವಾದುದಾಗಿ ಗೋಚರಿಸಿದೆ. ಮತ ವಂಚನೆ ಆರೋಪ ಮಾಡಿ ಕೋರ್ಟ್ ಮೆಟ್ಟಿಲೇರಿದ್ದ ರಿಪಬ್ಲಿಕನ್ನರಿಗೆ ಅಲ್ಲಿ ಸೋಲಾಗಿತ್ತು. ಅದನ್ನು ಗೆಲುವಾಗಿ ಪರಿವರ್ತಿಸಲು ನಿಯೋಜಿತ ಅಧ್ಯಕ್ಷ ಜೋ ಬೈಡೆನ್​ಗೆ ಸೆನೆಟ್​ನಲ್ಲಿ (ಸಂಸತ್​ನ ಮೇಲ್ಮನೆ) ಸವಾಲು ಒಡ್ಡಲು ತೀರ್ವನಿಸಿದ್ದಾರೆ. ರಿಪಬ್ಲಿಕನ್ನರ ಈ ನಡೆ ಈಗ ಕುತೂಹಲ ಕೆರಳಿಸಿದೆ.

  ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ಗೆ ಸೋಲಾದ ಬೆನ್ನಲ್ಲೇ ಸ್ವಿಂಗ್ ರಾಜ್ಯಗಳಲ್ಲಿ ಮತ ವಂಚನೆಯ ಆರೋಪ ಮಾಡಿ ರಿಪಬ್ಲಿಕನ್ನರು ಕೋರ್ಟ್ ಮೊರೆ ಹೋಗಿದ್ದರು. ಆದರೆ ಎಲ್ಲೆಡೆ ಅಧಿಕಾರಿಗಳು ರಿಪಬ್ಲಿಕನ್ನರ ಆರೋಪವನ್ನು ಅಲ್ಲಗಳೆದ ಕಾರಣ ಅವರಿಗೆ ಹಿನ್ನಡೆಯಾಗಿತ್ತು. ಇದೀಗ ಈ ವಿಚಾರವನ್ನು ಸೆನೆಟ್​ನಲ್ಲಿ ಪ್ರಸ್ತಾಪಿಸಿ, ಅಲ್ಲಿ ಬೈಡನ್ ಗೆಲುವನ್ನು ಮಾನ್ಯ ಮಾಡದಿರಲು ರಿಪಬ್ಲಿಕನ್ಸ್ ಪಣತೊಟ್ಟಿದ್ದಾರೆ.

  ಹಿರಿಯ ಸಂಸದ ಟೆಡ್ ಕ್ರೂಝ್ ನೇತೃತ್ವದಲ್ಲಿ ಹನ್ನೆರಡು ಸೆನೆಟರ್​ಗಳು ಜೋ ಬೈಡೆನ್ ಗೆಲುವನ್ನು ಪ್ರಮಾಣೀಕರಿಸದಿರಲು ಮುಂದಾಗಿದ್ದಾರೆ. ಈ ಸೆನೆಟರ್​ಗಳ ಪೈಕಿ ಆರು ಹಾಲಿ ಸೆನೆಟರ್​ಗಳಿದ್ದರೆ, ಇನ್ನೂ ನಾಲ್ವರು ಹೊಸದಾಗಿ ಚುನಾಯಿತ ಸೆನೆಟರ್​ಗಳಾಗಿದ್ದು, ಜ.4ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸೆನೆಟ್​ನ ಸಭಾಪತಿಯೂ ಆಗಿರುವ ಉಪಾಧ್ಯಕ್ಷ ಮೈಕ್ ಪೆನ್ಸ್ ಈ ಹನ್ನೆರಡು ಸೆನೆಟರ್​ಗಳ ಪ್ರಸ್ತಾವನೆಯನ್ನು ಬೆಂಬಲಿಸುವುದಾಗಿ ಘೋಷಿಸಿದ್ದಾರೆ.

  12 ಸೆನೆಟರ್​ಗಳಾರು?

  • ಟೆಡ್ ಕ್ರೂಝ್ – ಟೆಕ್ಸಾಸ್
  • ರೋನ್ ಜಾನ್ಸನ್ – ವಿಸ್ಕನ್​ಸಿನ್
  • ಜೇಮ್ಸ್​ ಲ್ಯಾಂಕ್​ಫೋರ್ಡ್- ಒಕ್ಲಹಾಮಾ
  • ಸ್ಟೀವ್ ಡೈನೆಸ್ – ಮೊಂಟಾನಾ
  • ಜಾನ್ ಕೆನಡಿ – ಲ್ಯೂಸಿಯಾನಾ
  • ಮಾರ್ಷಾ ಬ್ಲಾ್ಯಕ್​ಬರ್ನ್ – ಟೆನ್ನೆಸ್ಸೀ
  • ಮೈಕ್ ಬ್ರೌನ್ – ಇಂಡಿಯಾನಾ
  • ಸಿಂಥಿಯಾ ಲೂಮ್ಮಿಸ್ – ವ್ಯೋಮಿಂಗ್
  • ಟಾಮಿ ಟುಬರ್​ವಿಲ್ಲೆ – ಅಲಬಾಮಾ
  • ಬಿಲ್ ಹಗೆರ್ಟಿ – ಟೆನ್ನೆಸ್ಸೀ
  • ರೋಜರ್ ಮಾರ್ಷಲ್ – ಕನಾಸ್
  • ಜೋಶ್ ಹ್ಯಾಲೇ – ಮಿಸ್ಸೂರಿ

  ಹೌಸ್ ಆಫ್ ರೆಪ್ರೆಸೆಂಟಟೀವ್ಸ್ ಅನುಮೋದನೆ

  ಹೌಸ್ ಆಫ್ ರೆಪ್ರೆಸೆಂಟಟೀವ್ಸ್​ನಲ್ಲೂ (ಸಂಸತ್​ನ ಕೆಳಮನೆ) ಬುಧವಾರ ಬೈಡೆನ್ ಗೆಲುವನ್ನು ಪ್ರಮಾಣೀಕ ರಿಸುವುದಕ್ಕೆ ವಿರೋಧ ವ್ಯಕ್ತಪಡಿಸುವ ಪ್ರಸ್ತಾವನೆಯನ್ನು ಮಂಡಿಸುವುದಾಗಿ ರಿಪಬ್ಲಿಕನ್ ಸದಸ್ಯ ಲೂಯಿ ಗೋಹ್ಮೆರ್ಟ್ ಘೋಷಿಸಿದ್ದು, ಇದಕ್ಕೆ 100ಕ್ಕೂ ಹೆಚ್ಚು ರಿಪಬ್ಲಿಕನ್ ಸದಸ್ಯರು ಬೆಂಬಲ ಸೂಚಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  ಅಭೂತಪೂರ್ವ ಬಹುಮತದ ಗೆಲುವನ್ನು ಕಸಿದುಕೊಳ್ಳುವ ಪ್ರಯತ್ನ. ಅಂತಹ ಗೆಲುವನ್ನು ಎಂದಿಗೂ ಸಾಧಿಸಲು ಬಿಡುವುದಿಲ್ಲ. ವಾಸ್ತವ ಗೊತ್ತಾದಾಗ ಇನ್ನೂ ಅನೇಕರು ಕೈ ಜೋಡಿಸಲಿದ್ದಾರೆ. ನಮ್ಮ ದೇಶ ಅದಕ್ಕಾಗಿ ಅವರನ್ನು ಪ್ರೀತಿಸಲಿದೆ.

  | ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ

  10 ದಿನದೊಳಗೆ ಆಡಿಟ್ ನಡೆಯಲಿ

  ಟೆಡ್ ಕ್ರೂಝ್ ನೇತೃತ್ವದ 12 ಸೆನೆಟರ್​ಗಳ ಜಂಟಿ ಹೇಳಿಕೆ ನೀಡಿದ್ದು, ನಮ್ಮ ಜೀವಿತಾವಧಿಯಲ್ಲಿ 2020ರ ಚುನಾವಣೆಯಲ್ಲಿ ಕಂಡಷ್ಟು ಅಕ್ರಮಗಳು ಮತ್ತು ವಂಚನೆ ಎಂದಿಗೂ ಆಗಿಲ್ಲ. ಬುಧವಾರ ಕಾಂಗ್ರೆಸ್ (ಅಮೆರಿಕದ ಸಂಸತ್) ಜಂಟಿ ಅಧಿವೇಶನ ಶುರುವಾದಾಗ ವಾಡಿಕೆಯಂತೆ ಚುನಾಯಿತ ಎಲೆಕ್ಟೋರಲ್ ಕಾಲೇಜ್ ಮತ್ತು ಬೈಡೆನ್ ಗೆಲುವಿನ ಪ್ರೊ-ಫೋರ್ವ ಸರ್ಟಿಫಿಕೇಶನ್ ನಡೆಯಲಿದೆ. ಆ ಸಂದರ್ಭದಲ್ಲಿ ಚುನಾವಣಾ ಫಲಿತಾಂಶದ ತುರ್ತಾಗಿ 10 ದಿನಗಳೊಳಗೆ ಆಡಿಟ್ ಮಾಡುವಂತೆ ಬೇಡಿಕೆ ಇರಿಸುತ್ತೇವೆ. ಹೀಗೆ ಮಾಡುವುದರಿಂದ ಪ್ರತಿಯೊಂದು ರಾಜ್ಯವೂ ತಮ್ಮ ವಿಶೇಷ ಶಾಸನ ಸಭೆಯ ಅಧಿವೇಶನ ನಡೆಸಬೇಕು ಮತ್ತು ಸಂಭಾವ್ಯ ರೀತಿಯಲ್ಲಿ ತಮ್ಮ ಒಟ್ಟು ಮತಗಳ ಪರಿಷ್ಕರಣೆ ಮಾಡಬೇಕಾಗುತ್ತದೆ.

  ನದಿ ದಡದಲ್ಲಿ ಸಿಕ್ಕ ಬೈಕ್​, ರಕ್ತದ ಕಲೆಯನ್ನ ಬೆನ್ನಟ್ಟಿದ್ದವರಿಗೆ ಕಾದಿತ್ತು ಶಾಕ್​!

  ಅಪರಾಧವೇ ಮಾಡದೆ 28 ವರ್ಷ ಜೈಲುವಾಸ ಅನುಭವಿಸಿದ; ಜೈಲಿನಿಂದ ಹೊರಬಂದವನಿಗೆ ಸಿಕ್ಕಿದ್ದು 71 ಕೋಟಿ ರೂಪಾಯಿ!

  ಕರೊನಾ ಎಂಬುದೇ ಸುಳ್ಳು, ವಂಚನೆ!; ಆಸ್ಪತ್ರೆ ಮುಂದೆಯೇ ಪ್ರತಿಭಟನೆ…

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts