More

    ಮಮ್ಮಿಗೆ ಹಾಡಿನ ಮೂಲಕ ಲವ್​ ಕನ್ವಿನ್ಸ್ ಮಾಡಿದ ತ್ರಿವಿಕ್ರಮ!

    ಬೆಂಗಳೂರು: ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್ ನಾಯಕರಾಗಿ ನಟಿಸುತ್ತಿರುವ‌ ಚಿತ್ರ ತ್ರಿವಿಕ್ರಮ. ಪ್ರಸ್ತುತ ಈ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಎರಡು ಹಾಡುಗಳ ಚಿತ್ರೀಕರಣ ಬಾಕಿಯಿದೆ. ದೀಪಾವಳಿ ಹಬ್ಬಕ್ಕೆ ತ್ರಿವಿಕ್ರಮ ಚಿತ್ರದ ಮಮ್ಮಿ ಪ್ಲೀಸ್ ಮಮ್ಮಿ ಹಾಡು A2 music ಮೂಲಕ ಬಿಡುಗಡೆಯಾಗಿತ್ತು. ಬಿಡುಗಡೆಯಾದ ಮೂರು ದಿನಗಳಲ್ಲಿ 7 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಈ ಹಾಡು ವೀಕ್ಷಣೆಯಾಗಿದೆ.

    ಇದನ್ನೂ ಓದಿ: ನಟ ಸೋನು ಸೂದ್​ಗೆ ಚುನಾವಣಾ ಆಯೋಗ ನೀಡಿತೊಂದು ವಿಶೇಷ ಜವಾಬ್ದಾರಿ

    ಸಾಮಾನ್ಯವಾಗಿ ಅಮ್ಮ- ಮಗನಿಗೆ ಸಂಬಂಧಿಸಿದಂತೆ ಸೆಂಟಿಮೆಂಟ್ ಹಾಡುಗಳನ್ನು ಈಗಾಗಲೇ ಕೇಳಿದ್ದೇವೆ. ಇದೀಗ ಅದಕ್ಕೆ ವಿಭಿನ್ನ ಶೈಲಿಯ ಟ್ಯೂನ್​ ಟಚ್​ ಕೊಟ್ಟು, ಮಗ‌ ತನ್ನ ಪ್ರೀತಿಯ ಬಗ್ಗೆ ತಾಯಿಯ ಬಳಿ ವಿನೂತನ ಶೈಲಿಯಲ್ಲಿ ಹೇಳಿಕೊಳ್ಳುವ ಈ ಹಾಡಿಗೆ ಅಪಾರ ಮೆಚ್ಚುಗೆ ದೊರಕಿದೆ. ಡಾ. ವಿ.ನಾಗೇಂದ್ರ ಪ್ರಸಾದ್ ಬರೆದಿರುವ ಈ ಹಾಡನ್ನು ವಿಜಯ್ ಪ್ರಕಾಶ್ ಹಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

    ಗೌರಿ ಎಂಟರ್ ಟೈನರ್‌ ಲಾಂಛನದಲ್ಲಿ ಸೋಮಣ್ಣ ಅವರು‌ ನಿರ್ಮಿಸುತ್ತಿರುವ ಈ ಚಿತ್ರವನ್ನು ಸಹನಾ‌ ಮೂರ್ತಿ‌‌ ನಿರ್ದೇಶನ ಮಾಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ಸಹನಾ ಮೂರ್ತಿ ಅವರದ್ದೇ. ಸಂತೋಷ್ ರೈ ಪಾತಾಜೆ, ಗುರು ಪ್ರಶಾಂತ್ ರೈ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ತ್ರಿವಿಕ್ರಮ ಚಿತ್ರಕ್ಕಿದೆ.

    ಇದನ್ನೂ ಓದಿ: ನನ್ನ ಮಗ ಗಾಯಕನಾಗುವುದು ಬೇಡ, ಆದರೂ ಭಾರತದಲ್ಲಿ ಬೇಡವೇ ಬೇಡ’; ಸೋನು ನಿಗಮ್

    ವಿಕ್ರಮ್ ರವಿಚಂದ್ರನ್ ಅವರಿಗೆ ಅಕಾಂಕ್ಷ ಶರ್ಮ ನಾಯಕಿಯಾಗಿದ್ದಾರೆ. ತುಳಸಿ ಶಿವಮಣಿ, ಸುಚೇಂದ್ರ ಪ್ರಸಾದ್, ಸಾಧುಕೋಕಿಲ, ಚಿಕ್ಕಣ್ಣ, ರೋಹಿತ್ ರಾಯ್, ಆದಿಲೋಕೇಶ್, ಶಿವಮಣಿ, ಅಕ್ಷರ ಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಹಾಡು ಹಾಗೂ ಟ್ರೇಲರ್ ಮೂಲಕ ‌ಸಾಕಷ್ಟು ಟ್ರೆಂಡ್ ಹುಟ್ಟಹಾಕಿರುವ ಈ ಚಿತ್ರ ಮುಂದಿನ ವರ್ಷದ ವೇಳೆಗೆ ಬಿಡುಗಡೆ ಆಗಲಿದೆ.

    ಈ ನಟಿ ಯಾರು ಹೇಳಿ ನೋಡೋಣ? …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts