More

    ಬರೀ ರಾಮಾಚಾರಿ ಅಲ್ಲ, ‘ರಾಮಾಚಾರಿ 2.0’; ಇದು ತೇಜ್​ ಹೊಸ ಸಿನಿಮಾ

    ಬೆಂಗಳೂರು: ‘ಮೀಸೆ ಚಿಗುರಿದಾಗ’ ಎಂಬ ಚಿತ್ರದ ಮೂಲಕ ಹೀರೋ ಆದವರು ತೇಜ್​. ಆ ನಂತರ ಸ್ವಲ್ಪ ಸಮಯ ತಮಿಳಿನಲ್ಲಿ ಬಿಜಿಯಾಗಿದ್ದ ಅವರು, ಮೂರು ವರ್ಷಗಳ ಹಿಂದೆ ‘ರಿವೈಂಡ್​’ ಎಂಬ ಸಿನಿಮಾ ಮಾಡಿದ್ದರು. ಈಗ ಸದ್ದಿಲ್ಲದೆ ‘ರಾಮಾಚಾರಿ 2.0’ ಎಂಬ ಹೊಸ ಸಿನಿಮಾ ಮಾಡಿದ್ದಾರೆ. ಏಪ್ರಿಲ್​ 07ಕ್ಕೆ ಈ ಚಿತ್ರ ಬಿಡುಗಡೆಯಾಗಲಿದೆ.

    ಇದನ್ನೂ ಓದಿ: ಬಿಡುಗಡೆಗೂ ಮುನ್ನವೇ 400 ಕೋಟಿ ರೂ. ಬಾಚಿದ ವಿಜಯ್​ ಅಭಿನಯದ ‘ಲಿಯೋ’

    ಅದಕ್ಕೂ ಮೊದಲು ಇತ್ತೀಚೆಗೆ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದೆ. ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಘವೇಂದ್ರ ರಾಜಕುಮಾರ್, ಈ ಟ್ರೇಲರ್​ ಬಿಡುಗಡೆ ಮಾಡಿದ್ದಾರೆ.

    ಈ ಚಿತ್ರದ ಕುರಿತು ಮಾತನಾಡುವ ತೇಜ್​, ”ನಾಗರಹಾವು’ ಕಾಲದಿಂದಲೂ “ರಾಮಾಚಾರಿ’ ಎಂಬ ಹೆಸರಿಗೆ ಅದರದೇ ಆದ ವಿಶೇಷ ಸ್ಥಾನ. ಬಹಳಷ್ಟು ಜನ ಈ ಶೀರ್ಷಿಕೆಗೆ ಅರ್ಜಿ ಹಾಕಿದ್ದರು. ನನಗೆ ಸಿಕ್ಕಿದ್ದು ನನ್ನ ಪುಣ್ಯ. ‘ರಾಮಾಚಾರಿ 2.0′ ಒಂದು ವಿಭಿನ್ನ ಕಥೆ ಇರುವ ಸಿನಿಮಾ. ರಾಘವೇಂದ್ರ ರಾಜಕುಮಾರ್ ನನ್ನ ತಂದೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನನ್ನನ್ನು ಮಗ ಎಂದು ಕರೆಯುವ ರಾಘಣ್ಣ ಅವರು ನಮ್ಮ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದು ಖುಷಿಯಾಗಿದೆ. ಏಪ್ರಿಲ್ 7ರಂದು ಚಿತ್ರ ಬಿಡುಗಡೆಯಾಗಲಿದೆ’ ಎಂದು ಮಾಹಿತಿ ಕೊಟ್ಟರು. ಈ ಚಿತ್ರದಲ್ಲಿ ನಾಯಕನಾಗಿ ನಟಿಸುವುದರ ಜತೆಗೆ, ಅವರೇ ನಿರ್ಮಾಣ ಮತ್ತು ನಿರ್ದೇಶನವನ್ನೂ ಮಾಡಿದ್ದಾರೆ.

    ನಂತರ ಮಾತನಾಡಿದ ರಾಘವೇಂದ್ರ ರಾಜಕುಮಾರ್​, ‘ತೇಜ್ ಅವರು ನನಗೆ ಕಥೆ ಹೇಳಿ, ನೀವು ಪಾತ್ರ ಮಾಡಬೇಕೆಂದರು. ನಾನು ನಿರ್ದೇಶಕರ ನಟ. ನಿರ್ದೇಶಕರು ಹೇಳಿದ ಹಾಗೆ ಕೇಳುತ್ತೇನೆ. ನಾನು ತೇಜ್ ಅವರ ತಂದೆಯಾಗಿ ಈ ಚಿತ್ರದಲ್ಲಿ ನಟಿಸಿದ್ದೇನೆ. ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ’ ಎಂದರು ರಾಘವೇಂದ್ರ ರಾಜಕುಮಾರ್.

    ಇದನ್ನೂ ಓದಿ: ಬದಲಾವಣೆಗೆ ಇದು ಒಳ್ಳೆಯ ಸಮಯ; ಅಕ್ಷಯ್​ ಕುಮಾರ್​ ಹೀಗೆ ಹೇಳಿದ್ದೇಕೆ?

    ‘ರಾಮಾಚಾರಿ 2.0’ ಚಿತ್ರದಲ್ಲಿ ತೇಜ್​ಗೆ ನಾಯಕಿಯರಾಗಿ ಕೌಸ್ತುಭ ಮತ್ತು ಚಂದನ ರಾಘವೇಂದ್ರ ನಟಿಸಿದ್ದಾರೆ. ಮಿಕ್ಕಂತೆ ವಿಜಯ್ ಚೆಂಡೂರ್, ಮುನಿಕೃಷ್ಣ, ‘ಸ್ಪರ್ಶ’ ರೇಖಾ, ಸ್ವಾತಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

    ಆಂಟಿ ಎಂಬುದು ಇಂದು ಅಶ್ಲೀಲ ಪದವಾಗಿದೆ: ಆಂಟಿ ಟ್ರೆಂಡ್​ಗೆ ನಟಿ ಕಸ್ತೂರಿ ಖಡಕ್​ ತಿರುಗೇಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts