More

    ವಾಹನ ಸವಾರರ ಗಮನಕ್ಕೆ | ನಾಳೆ ಬೆಂಗಳೂರಿನಲ್ಲಿ IPL ಮ್ಯಾಚ್; ಬದಲಾದ ಸಂಚಾರ ಮಾರ್ಗದ ಹೀಗಿದೆ…

    ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ಕ್ರಿಕೆಟ್ ಪಂದ್ಯಾವಳಿ ನಡೆಯುವ ಹಿನ್ನೆಲೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕಾಗಿ ನಗರ ಸಂಚಾರ ಪೊಲೀಸರು ವಾಹನಗಳ ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕ ಬದಲಾವಣೆ ಮಾಡಿದ್ದಾರೆ.

    ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆ ವರೆಗೆ ಕ್ರಿಕೆಟ್ ಪಂದ್ಯ ನಡೆಯಲಿದೆ. ಹೀಗಾಗಿ ವಾಹನ ಸವಾರರು ಕ್ವೀನ್ಸ್ ರಸ್ತೆ, ಎಂ.ಜಿ.ರಸ್ತೆ, ಕಬ್ಬನ್ ರಸ್ತೆ, ರಾಜಭವನ ರಸ್ತೆ, ಸೆಂಟ್ರಲ್ ಸ್ಟ್ರೀಟ್ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಮ್ಯೂಸಿಯಂ ರಸ್ತೆ, ಕಸ್ತೂರಿ ಬಾ ರಸ್ತೆ, ಅಂಬೇಡ್ಕರ್ ವೀದಿ ರಸ್ತೆ, ಟ್ರಿನಿಟಿ ವೃತ್ತ, ಲ್ಯಾವೆಲ್ಲೆ ರಸ್ತೆ, ವಿಠಲ್ ಮಲ್ಯ ರಸ್ತೆ ಹಾಗೂ ನೃಪತುಂಗ ರಸ್ತೆಯಲ್ಲಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.

    ಇದನ್ನೂ ಓದಿ: VIDEO| LSG ಆಟಗಾರನಿಗೆ ಕೊಹ್ಲಿ ಕೊಹ್ಲಿ ಎಂದು ಛೇಡಿಸಿದ ಜನಸಮೂಹ!

    ಸಾರ್ವಜನಿಕರು ವಾಹನ ನಿಲುಗಡೆ ಸ್ಥಳ ಲಭ್ಯತೆ ಆಧಾರದ ಮೇಲೆ ಕಿಂಗ್ಸ್ ರಸ್ತೆ, ಕಂಠೀರವ ಕ್ರೀಡಾಂಗಣ, ಯುಬಿ ಸಿಟಿ ಪಾರ್ಕಿಂಗ್ ಸ್ಥಳ, ಬಿಎಂಟಿಸಿ ಬಸ್ ನಿಲ್ದಾಣದ ಮೊದಲನೇ ಮಹಡಿ, ಓಲ್ಡ್ ಕೆಜಿಐಡಿ ಬಿಲ್ಡಿಂಗ್ ಆವರಣದಲ್ಲಿ ವಾಹನಗಳನ್ನು ನಿಲುಗಡೆ ಮಾಡಬಹುದು.

    ಆರ್​ಸಿಬಿ-ಟೈಟಾನ್ಸ್ ಪಂದ್ಯದ ಟಿಕೆಟ್ ಸೋಲ್ಡ್ ಔಟ್

    ಆರ್‌ಸಿಬಿ ತಂಡ, ಭಾನುವಾರ ಹಾಲಿ ಚಾಂಪಿಯನ್ ಗುಜರಾತ್‌ ಟೈಟಾನ್ಸ್ ವಿರುದ್ಧ ಆಡಲಿರುವ ಐಪಿಎಲ್-16ರ ಕೊನೇ ಲೀಗ್ ಪಂದ್ಯದ ಕೌಂಟರ್ ಟಿಕೆಟ್​ಗಳು ಮಾರಾಟಕ್ಕಿಟ್ಟ ಕೆಲವೇ ನಿಮಿಷಗಳಲ್ಲಿ ಸೋಲ್ಡ್‌ಔಟ್ ಆಗಿದೆ. ಈ ಪಂದ್ಯದ ಆನ್‌ಲೈನ್ ಟಿಕೆಟ್​ಗಳು ತಿಂಗಳ ಹಿಂದೆಯೇ ಸೋಲ್ಡ್‌ ಔಟ್ ಆಗಿದ್ದವು. ಪ್ಲೇಆಫ್ ದೃಷ್ಟಿಯಿಂದ ಆರ್‌ಸಿಬಿಗೆ ಇದು ಮಹತ್ವದ ಪಂದ್ಯವಾಗಿರುವುದರಿಂದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಟಿಕೆಟ್ ಖರೀದಿಗೆ ದೊಡ್ಡ ಸಂಖ್ಯೆಯಲ್ಲಿ ಕ್ರಿಕೆಟ್ ಪ್ರೇಮಿಗಳು ಸೇರಿದ್ದರು. ಆದರೆ ಹೆಚ್ಚಿನವರು ಟಿಕೆಟ್ ಸಿಗದೆ ನಿರಾಸೆಯಲ್ಲೇ ನಿರ್ಗಮಿಸಬೇಕಾಗಿ ಬಂತು. ಈ ನಡುವೆ ಕಾಳಸಂತೆಯಲ್ಲಿ ಟಿಕೆಟ್‌ಗಳು ಭಾರಿ ಬೆಲೆಗೆ ಬಿಕರಿಯಾಗುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts