More

    ಜನ ದೇವರೆಂದು ಪೂಜಿಸುವ ಈ ಟೋಪಿ ಅಮ್ಮ ಯಾರು? ಕಂಡೊಡನೆ ಕಾಲಿಗೆ ಬೀಳುವ ವಿದೇಶಿಗರು!

    ಚೆನ್ನೈ: ಪ್ರತಿ ದಿನವೂ ಬಹು ಬಣ್ಣದ ಟೋಪಿ, ಹರಿದ ಅಂಗಿ ಮತ್ತು ಸ್ಕರ್ಟ್ ಕಾಸ್ಟ್ಯೂಮ್​, ಕೆದರಿದ ಕೂದಲು, ವಿಚಿತ್ರ ನಡವಳಿಕೆ ಮತ್ತು ವರ್ತನೆ… ಇದು ತಮಿಳುನಾಡಿನ ತಿರುವಣ್ಣಾಮಲೈ ಮೂಲದ ಟೋಪಿ ಅಮ್ಮ ಅವರ ನೋಟ. ನೋಡಲು ವಿಕಾರವಾಗಿರುವ ಈ ಮಹಿಳೆ ಹುಚ್ಚಿಯು ಅಲ್ಲ, ಭಿಕ್ಷುಕಿಯು ಅಲ್ಲ ಬದಲಿಗೆ ಈಕೆಯನ್ನು ಅಲ್ಲಿನ ಜನರು ದೇವತೆ ರೀತಿ ಪೂಜೆ ಮಾಡುತ್ತಾರೆ.

    ತಿರುವಣ್ಣಾಮಲೈ ತಮಿಳುನಾಡಿನ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಇದು ಅಣ್ಣಾಮಲೈಯಾರ್ ದೇವಸ್ಥಾನ, ಅಣ್ಣಾಮಲೈ ಬೆಟ್ಟ ಮತ್ತು ಕಾರ್ತಿಕ ದೀಪ ಹಬ್ಬಕ್ಕೂ ಹೆಸರುವಾಸಿಯಾಗಿದೆ. ಇಲ್ಲಿನ ಟೋಪಿ ಅಮ್ಮ ಬಹುಜನರಿಂದ ಪೂಜಿಸಲ್ಪಡುವ ವಯೋವೃದ್ಧೆ. ತಿರುವಣ್ಣಾಮಲೈ ರಸ್ತೆಬದಿಯಲ್ಲಿ ಟೋಪಿ ಅಮ್ಮ ನಡೆದುಕೊಂಡು ಹೋಗುವಾಗ ಸ್ಥಳೀಯರು ಸೇರಿದಂತೆ ವಿದೇಶಿಗರು ಪೂಜೆ ಸಲ್ಲಿಸುತ್ತಿರುವ ಹಲವು ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

    ತಿರುವಣ್ಣಾಮಲೈನಲ್ಲಿ ಟೋಪಿ ಅಮ್ಮನ ಜತೆ ನಡೆಯಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟವೆಂದು ಒರಾಕಲ್​ ಎಸಿಇ ಡೈರೆಕ್ಟರ್​ ಸಾಯಿ ಪೆನುಮುರು ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿರುವುದು ಸಾಕಷ್ಟು ಗಮನವನ್ನು ಸೆಳೆದಿದೆ.

    ಅಂದಹಾಗೆ ಟೋಪಿ ಅಮ್ಮನನ್ನು ದೈವಿಕ ಮಹಿಳೆ ಎಂದು ಅನೇಕರು ಪರಿಗಣಿಸುತ್ತಾರೆ. ನೀರು ಕುಡಿದು ಅಮ್ಮ ಬಿಟ್ಟು ಹೋದ ಬಟ್ಟಲುಗಳನ್ನು ತೆಗೆದುಕೊಂಡು ಉಳಿದ ನೀರನ್ನೇ ಪ್ರಸಾದವೆಂದು ಪರಿಗಣಿಸುವವರೇ ಹೆಚ್ಚು. ಟೋಪಿ ಅಮ್ಮ ಮಾತನಾಡುವ ಭಾಷೆ ಸ್ಪಷ್ಟವಾಗಿಲ್ಲವಾದರೂ, ಕೆಲವರು ಅವರು ಪ್ರಾಚೀನ ತಮಿಳು ಮಾತನಾಡುತ್ತಾರೆ ಎಂದು ಹೇಳುತ್ತಾರೆ. ಆದರೆ ಈಕೆ ಮಾನಸಿಕ ವಿಕಲಚೇತನ ಮಹಿಳೆಯಾಗಿದ್ದು, ಆಕೆಗೆ ತುರ್ತು ವೈದ್ಯಕೀಯ ನೆರವು ಬೇಕು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

    ಆದರೆ, ಟೋಪಿ ಅಮ್ಮ ನಿಜವಾಗಿಯೂ ಯಾರು ಅಥವಾ ಆಕೆ ಎಲ್ಲಿಂದ ಬಂದಿದ್ದಾರೆ ಎಂಬುದು ಯಾರಿಗೂ ನಿಖರವಾಗಿ ತಿಳಿದಿಲ್ಲ. (ಏಜೆನ್ಸೀಸ್​)

    ರೋಹಿತ್​ಗೆ ವರವಾಯ್ತು ಮುಂಬೈ ಇಂಡಿಯನ್ಸ್​ ನಾಯಕತ್ವ ಬದಲಾವಣೆ! ಇದಕ್ಕಿಂತ ಸಾಕ್ಷಿ ಬೇಕಾ?

    ಕ್ರಿಕೆಟ್​ ಬಿಟ್ಟು 2 ತಿಂಗಳು ಕೊಹ್ಲಿ ಹೇಗಿದ್ರು ಗೊತ್ತಾ? ನಿಜಕ್ಕೂ ಅದ್ಭುತ ಅನುಭವ ಎಂದ ವಿರಾಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts