More

    ಐಎಂಡಿಬಿ 2023ರ ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಕನ್ನಡದಿಂದ ಒಂದೇ ಚಿತ್ರ … ಯಾವುದದು?

    ಬೆಂಗಳೂರು: ಹೊಸ ವರ್ಷ ಶುರುವಾಗುತ್ತಿದ್ದಂತೆಯೇ, ಈ ವರ್ಷದ ಕೆಲವು ಪ್ರಮುಖ ವಿಷಯಗಳ ಕುರಿತು ಸಮೀಕ್ಷೆಗಳು ಶುರುವಾಗಿವೆ. ಈ ಪೈಕಿ ಇಂಟರ್​ನೆಟ್​ ಮೂವಿ ಡೇಟಬೇಸ್​ (ಐಎಂಡಿಬಿ) ಈ ವರ್ಷದ ಅತೀ ನಿರೀಕ್ಷಿತ ಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

    ಇದನ್ನೂ ಓದಿ: ತನ್ನನ್ನು ದ್ವೇಷಿಸುವವರಿಗೆ ರಶ್ಮಿಕಾ ಹೇಳೋದೇನು ಗೊತ್ತಾ?

    ಈ ವರ್ಷ ಹಲವು ಸ್ಟಾರ್​ಗಳ ಒಂದಿಷ್ಟು ನಿರೀಕ್ಷೆಯ ಚಿತ್ರಗಳು ಬಿಡುಗಡೆಯಾಗುತ್ತಿವೆ. ಸಂಕ್ರಾಂತಿಗೆ ಅಜಿತ್​ ಅಭಿನಯದ ತಮಿಳು ಚಿತ್ರ ‘ತುನಿವು’, ಚಿರಂಜೀವಿ ಅಭಿನಯದ ‘ವಾಲ್ಟರ್​ ವೀರಯ್ಯ’, ನಂದಮೂರಿ ಬಾಲಕೃಷ್ಣ ಅಭಿನಯದ ‘ವೀರ ಸಿಂಹ ರೆಡ್ಡಿ’, ವಿಜಯ್​ ಅಭಿನಯದ ‘ವಾರಿಸು’, ಶಾರುಖ್​ ಖಾನ್​ ಅಭಿನಯದ ‘ಪಠಾಣ್​’ ಚಿತ್ರಗಳು ಬಿಡುಗಡೆಯಾಗುತ್ತಿವೆ.

    ವರ್ಷ ಮುಂದುವರೆಯುತ್ತಿದ್ದಂತೆಯೇ ‘ಆದಿಪುರುಷ್​’, ‘ಸಲಾರ್​’, ‘ಪುಷ್ಪ 2’, ‘ಟೈಗರ್​ 3’, ‘ಇಂಡಿಯನ್​ 2’, ‘ಜೈಲರ್​’, ‘ಅನಿಮಲ್​’ ಚಿತ್ರಗಳಿವೆ. ಈ 20 ಚಿತ್ರಗಳ ಪಟ್ಟಿಯಲ್ಲಿ, ಕನ್ನಡದ ಒಂದೇ ಒಂದು ಚಿತ್ರವಿದೆ. ಅದೇ ಉಪೇಂದ್ರ ಮತ್ತು ಸುದೀಪ್ ನಟಿಸಿರುವ ‘ಕಬ್ಜ’. ಇದಲ್ಲದೆ ಬೇರೆ ಯಾವುದೇ ಚಿತ್ರವಿಲ್ಲದಿರುವುದು ಕನ್ನಡಿಗರಲ್ಲಿ ಬೇಸರ ಮೂಡಿಸಿದೆ.

    ಇದನ್ನೂ ಓದಿ: ಬ್ಯಾಂಡೇಜ್​ ಹಾಕಿಕೊಂಡೇ ಚಿತ್ರೀಕರಣಕ್ಕೆ ವಾಪಸ್ಸಾದ ರೋಹಿತ್​ ಶೆಟ್ಟಿ …

    ಇನ್ನು, ಈ ಚಿತ್ರದಲ್ಲಿ ಶಾರುಖ್​ ಖಾನ್​ ಅಭಿನಯದ ‘ಪಠಾಣ್​’, ‘ಜವಾನ್​’ ಮತ್ತು ‘ಡಂಕಿ’ ಚಿತ್ರಗಳಿವೆ. ಪ್ರಭಾಸ್​ ಅಭಿನಯದ ‘ಸಲಾರ್​’ ಮತ್ತು ‘ಆದಿಪುರುಷ್​’, ವಿಜಯ್ ಅಭಿನಯದ ‘ವಾರಿಸು’ ಮತ್ತು ದಳಪತಿ 67′ ಮತ್ತು ಸಲ್ಮಾನ್​ ಖಾನ್​ ಅಭಿನಯದ ‘ಟೈಗರ್ 3’ ಮತ್ತು ‘ಕಿಸಿ ಕ ಭಾಯ್‌ ಕಿಸಿ ಕಿ ಜಾನ್’ ಚಿತ್ರಗಳಿವೆ. ಮಿಕ್ಕಂತೆ ಅಜಯ್​ ದೇವಗನ್​, ಅಕ್ಷಯ್​ ಕುಮಾರ್​, ಅಲ್ಲು ಅರ್ಜುನ್​, ರಣಬೀರ್​ ಕಪೂರ್​ ಮುಂತಾದವರ ಚಿತ್ರಗಳಿವೆ.

    ಐಎಂಡಿಬಿಯ 2023ರ ಬಹುನಿರೀಕ್ಷಿತ ಭಾರತೀಯ ಸಿನಿಮಾಗಳ ಪಟ್ಟಿ ಹೀಗಿದೆ:
    1) ಪಠಾಣ್‌
    2) ಪುಷ್ಪ: ದಿ ರೂಲ್ – ಭಾಗ 2
    3) ಜವಾನ್
    4) ಆದಿಪುರುಷ್
    5) ಸಲಾರ್
    6) ವಾರಿಸು
    7) ಕಬ್ಜಾ
    8) ದಳಪತಿ 67
    9) ದಿ ಆರ್ಚಿಸ್
    10) ಡಂಕಿ
    11) ಟೈಗರ್ 3
    12) ಕಿಸಿ ಕ ಭಾಯ್‌ ಕಿಸಿ ಕಿ ಜಾನ್
    13) ತುನಿವು
    14) ಅನಿಮಲ್
    15) ಏಜೆಂಟ್
    16) ಇಂಡಿಯನ್ 2
    17) ವಾಡಿವಾಸಲ್
    18) ಶೆಹಜಾದ
    19) ಬಡೇ ಮಿಯಾ ಛೋಟೆ ಮಿಯಾ
    20) ಭೋಲಾ

    ‘ಜೈಲರ್​’ ಚಿತ್ರದಲ್ಲಿ ಹೀಗೆ ಕಾಣ್ತಾರೆ ಮೋಹನ್​ ಲಾಲ್​; ಪಾತ್ರ ಮಾತ್ರ ನಿಗೂಢ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts