More

    ‘ಜೈಲರ್​’ ಚಿತ್ರದಲ್ಲಿ ಹೀಗೆ ಕಾಣ್ತಾರೆ ಮೋಹನ್​ ಲಾಲ್​; ಪಾತ್ರ ಮಾತ್ರ ನಿಗೂಢ …

    ಚೆನ್ನೈ: ರಜನಿಕಾಂತ್​ ಅಭಿನಯದ ‘ಜೈಲರ್​’ ಚಿತ್ರದಲ್ಲಿ ಮೋಹನ್​ ಲಾಲ್​ ನಟಿಸುತ್ತಾರೆ ಎಂಬ ಸುದ್ದಿ ಕೆಲವೇ ದಿನಗಳ ಹಿಂದೆ ಬಂದಿತ್ತು. ಆದರೆ, ಅದು ನಿಜವಾ? ಆ ಸಂದರ್ಭದಲ್ಲಿ ಸ್ಪಷ್ಟವಿರಲಿಲ್ಲ. ಚಿತ್ರದಲ್ಲೊಂದು ವಿಶೇಷ ಪಾತ್ರದ್ಲಿ ಲಾಲ್​ ಕಾಣಿಸಿಕೊಳ್ಳುತ್ತಾರೆ ಎಂಬ ಸುದ್ದಿ ಬಂದಿದ್ದು, ಅದೀಗ ನಿಜವಾಗಿದೆ. ಚಿತ್ರದಲ್ಲಿನ ಮೋಹನ್​ ಲಾಲ್​ ಅವರ ಫಸ್ಟ್​ಲುಕ್​ ಇದೀಗ ಬಿಡುಗಡೆಯಾಗಿದೆ.

    ಇದನ್ನೂ ಓದಿ: ದೇವಸ್ಥಾನಕ್ಕೆ ಹೋಗಿ ಸಖತ್​ ಟ್ರೋಲ್​ಗೊಳಗಾದ ಅಜಯ್​ ದೇವಗನ್​ ಮಗಳು

    ಮೋಹನ್​ ಲಾಲ್​ ಅವರಿಗೆ ತಮಿಳು ಚಿತ್ರರಂಗ ಹೊಸದೇನಲ್ಲ. ಈ ಹಿಂದೆ ಕೆಲವು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಆದರೆ, ರಜನಿಕಾಂತ್ ಜತೆಗೆ ಅವರು ತೆರೆ ಹಂಚಿಕೊಳ್ಳುತ್ತಿರುವುದು ಇದೇ ಮೊದಲು. ಈಗಾಗಲೇ ಒಂದು ದಿನದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಇಂದು ಅವರ ಭಾಗದ ಚಿತ್ರೀಕರಣ ಪೂರ್ಣವಾಗಲಿದೆ ಎಂದು ಹೇಳಲಾಗುತ್ತಿದೆ. ಮೋಹನ್​ ಲಾಲ್​ ಅವರ ಪಾತ್ರದ ಫಸ್ಟ್​ಲುಕ್​ ಏನೋ ಬಿಡುಗಡೆಯಾಗಿದೆ. ಆದರೆ, ಅವರ ಪಾತ್ರವೇನು? ಈ ವಿಷಯವನ್ನು ಚಿತ್ರತಂಡ ಗೌಪ್ಯವಾಗಿಟ್ಟಿದೆ.

    ಮೋಹನ್​ ಲಾಲ್​ ಅಲ್ಲದೆ, ಈ ಚಿತ್ರದಲ್ಲಿ ಕನ್ನಡದ ಶಿವರಾಜಕುಮಾರ್ ಸಹ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಲಾಲ್​ರಂತೆಯೇ ಶಿವಣ್ಣ ಸಹ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಕಳೆದ ತಿಂಗಳು ಅವರ ಭಾಗದ ಚಿತ್ರೀಕರಣವನ್ನು ಚೆನ್ನೈನಲ್ಲಿ ಮುಗಿಸಲಾಗಿದೆ.

    ಇದನ್ನೂ ಓದಿ: ಆರಾಮ್ ಆದರು ಮಿಲನಾ; ಅನೀಶ್ ತೇಜೇಶ್ವರ್​ಗೆ ಜೋಡಿಯಾದ ‘ಲವ್ ಮಾಕ್ಟೇಲ್’ ನಟಿ

    ‘ಜೈಲರ್​’ ಚಿತ್ರವು ರಜನಿಕಾಂತ್​ ಅಭಿನಯದ 169ನೇ ಚಿತ್ರವಾಗಿದ್ದು, ಅವರ ಜತೆಗೆ ರಮ್ಯಾ ಕೃಷ್ಣ, ಪ್ರಿಯಾಂಕಾ ಅರುಳ್​ ಮೋಹನ್​, ವಾಸಂತಿ ರವಿ, ಯೋಗಿ ಬಾಬು ಮುಂತಾದವರು ನಟಿಸುತ್ತಿದ್ದಾರೆ. ಈ ಚಿತ್ರವನ್ನು ಸನ್​ ಪಿಕ್ಚರ್ಸ್​ ಸಂಸ್ಥೆಯು ನಿರ್ಮಿಸುತ್ತಿದ್ದು, ನೆಲ್ಸನ್​ ದಿಲೀಪ್​ ಕುಮಾರ್​ ನಿರ್ದೇಶನ ಮಾಡುತ್ತಿದ್ದಾರೆ. ‘ಜೈಲರ್​’ ಚಿತ್ರವು ಏ. 14ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.

    ಸ್ಪರ್ಧೆಯಿಂದ ಹಿಂದೆ ಸರಿದ ‘ವಾರಸುಡು’; 14ಕ್ಕೆ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts