More

    ಆರಾಮ್ ಆದರು ಮಿಲನಾ; ಅನೀಶ್ ತೇಜೇಶ್ವರ್​ಗೆ ಜೋಡಿಯಾದ ‘ಲವ್ ಮಾಕ್ಟೇಲ್’ ನಟಿ

    ಬೆಂಗಳೂರು: ‘ನಮ್ ಗಣಿ ಬಿಕಾಂ ಪಾಸ್’ ಮತ್ತು ‘ಗಜಾನನ ಆಂಡ್ ಗ್ಯಾಂಗ್’ ನಿರ್ದೇಶಕ ಅಭಿಷೇಕ್ ಶೆಟ್ಟಿ ಆಕ್ಷನ್ ಕಟ್ ಹೇಳುತ್ತಿರುವ ಮೂರನೇ ಚಿತ್ರ ‘ಆರಾಮ್ ಅರವಿಂದ್ ಸ್ವಾಮಿ’. ಚಿತ್ರಕ್ಕೆ ಅನೀಶ್ ತೇಜೇಶ್ವರ್ ನಾಯಕನಾಗಿದ್ದು, ಇದೀಗ ಅವರಿಗೆ ಮಿಲನಾ ನಾಗರಾಜ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

    ‘ಲವ್ ಮಾಕ್ಟೇಲ್’ ಬಳಿಕ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬಿಜಿಯಾಗಿರುವ ಮಿಲನಾ, ಇದೀಗ ಮತ್ತೊಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅನೀಶ್​ಗೆ ಜೋಡಿಯಾಗಿ ಇದೇ ಮೊದಲ ಬಾರಿಗೆ ಅವರು ನಟಿಸುತ್ತಿದ್ದು, ಈಗಾಗಲೇ ಚಿತ್ರದ ಚಿತ್ರೀಕರಣದಲ್ಲೂ ಪಾಲ್ಗೊಂಡಿದ್ದಾರೆ. ಚಿತ್ರದಲ್ಲಿ ಅವರು ಮಲಯಾಳಿ ಟೀಚರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಅಭಿಷೇಕ್ ಶೆಟ್ಟಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದು, ‘ಅಕಿರ’ ನಿರ್ವಪಕ ಶ್ರೀಕಾಂತ್ ಪ್ರಸನ್ನ ಮತ್ತು ‘ಗುಳ್ಟು’ ನಿರ್ವಪಕ ಪ್ರಶಾಂತ್ ರೆಡ್ಡಿ, ಜಂಟಿಯಾಗಿ ನಿರ್ವಣದ ಜವಾಬ್ದಾರಿ ಹೊತ್ತಿದ್ದಾರೆ. ಅನೀಶ್ ತೇಜೇಶ್ವರ್ ಇದುವರೆಗಿನ ಸಿನಿಮಾಗಳಿಗಿಂತ ತುಂಬ ಭಿನ್ನವಾದ ಪಾತ್ರದಲ್ಲಿ ‘ಆರಾಮ್ ಅರವಿಂದ್ ಸ್ವಾಮಿ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಆಲೋಚನೆಯಲ್ಲಿದೆ.

    ಡಾ.ಬ್ರೋ ಯಾವಾಗ ವಿದೇಶಕ್ಕೆ ಹೋಗಲ್ಲ?; ಒಂದು ದೇಶಕ್ಕೆ ಹೊರಟಾಗ ಅವರ ಅಧ್ಯಯನ ಹೇಗಿರುತ್ತೆ?; ಇಲ್ಲಿದೆ ಮಾಹಿತಿ..

    ಡಾ.ಬ್ರೋ@ವಿಜಯವಾಣಿ: ಇಲ್ಲಿವೆ ಎಕ್ಸ್​ಕ್ಲೂಸಿವ್ ಫೋಟೋಗಳು..

    ಎಷ್ಟು ದೇಶ ಸುತ್ತಿದರೂ ನಮ್ಮೂರೇ ಮೇಲು!; ಡಾ.ಬ್ರೋ ಜತೆ ವಿಜಯವಾಣಿ ಸಂವಾದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts