More

    ಕಿರಿಯರ ವಿಶ್ವಕಪ್‌ನಲ್ಲೂ ಭಾರತ-ಆಸ್ಟ್ರೇಲಿಯಾ ಕಾದಾಟ

    ಬೆನೋನಿ: ವೇಗಿ ಟಾಮ್ ಸ್ಟ್ರಾಕರ್ (24ಕ್ಕೆ 6) ಮಾರಕ ಬೌಲಿಂಗ್ ದಾಳಿಯ ನಡುವೆಯೂ ಸಾಧಾರಣ ಗುರಿಯ ಚೇಸಿಂಗ್‌ನಲ್ಲಿ ಪರದಾಡಿದ ಮೂರು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಹ್ಯಾರಿ ಡಿಕ್ಸನ್ (50 ರನ್, 75 ಎಸೆತ, 5 ಬೌಂಡರಿ) ಅರ್ಧಶತಕದ ನೆರವಿನಿಂದ 19 ವಯೋಮಿತಿಯ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ 1 ವಿಕೆಟ್‌ನಿಂದ ರೋಚಕ ಗೆಲುವು ದಾಖಲಿಸಿದೆ.

    ಭಾನುವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಹಾಲಿ ಹಾಗೂ 5 ಬಾರಿಯ ಚಾಂಪಿಯನ್ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಣಸಾಟ ನಡೆಸಲಿವೆ. ಭಾರತ ಕಳೆದ ವರ್ಷ ತವರಿನ ಏಕದಿನ ವಿಶ್ವಕಪ್‌ನಲ್ಲಿ ಅಜೇಯವಾಗಿ ೈನಲ್‌ಗೇರಿದ್ದರೂ, ಆಸೀಸ್ ಎದುರು ಸೋತು ನಿರಾಸೆ ಅನುಭವಿಸಿತ್ತು. ಅದಕ್ಕೀಗ ಕಿರಿಯರ ವಿಶ್ವಕಪ್‌ನಲ್ಲಿ ಭಾರತ ಸೇಡು ತೀರಿಸಿಕೊಳ್ಳುವ ನಿರೀಕ್ಷೆ ಹರಡಿದೆ.

    ಗುರುವಾರ ನಡೆದ ಅಜೇಯ ತಂಡಗಳ ಸೆಣಸಾಟದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿದ ಪಾಕ್, 48.5 ಓವರ್‌ಗಳಲ್ಲಿ 179 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಆಸೀಸ್, 59 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಆಘಾತ ಎದುರಿಸಿತು. ಅಂತಿಮವಾಗಿ 49.1 ಓವರ್‌ಗಳಲ್ಲಿ 9 ವಿಕೆಟ್‌ಗೆ 181 ರನ್‌ಗಳಿಸಿ ಜಯದ ನಿಟ್ಟುಸಿರು ಬಿಟ್ಟಿತು. ಆಸೀಸ್ ಕೊನೇ ವಿಕೆಟ್‌ಗೆ 17 ರನ್ ಸೇರಿಸಿ ಜಯಿಸಿತು.

    ಪಾಕಿಸ್ತಾನ: 48.5 ಓವರ್‌ಗಳಲ್ಲಿ 179 (ಹುಸೇನ್ 17, ಅಜಾನ್ 52, ಅರತ್ 52, ಟಾಮ್ ಸ್ಟ್ರಾಕರ್ 24ಕ್ಕೆ 6, ಕ್ಯಾಂಪ್‌ಬೆಲ್ 23ಕ್ಕೆ 1). ಆಸ್ಟ್ರೇಲಿಯಾ: 49.5 ಓವರ್‌ಗಳಲ್ಲಿ 9 ವಿಕೆಟ್‌ಗೆ 181 (ಹ್ಯಾರಿ ಡಿಕ್ಸನ್ 52, ಸ್ಯಾಮ್ 14, ಒಲಿವಿರ್ 49, ಕ್ಯಾಂಪ್‌ಬೆಲ್ 25, ಮೆಕ್‌ಮಿಲನ್ 19*, ಅಲಿ ರಾಜಾ 34ಕ್ಕೆ 4, ಅರತ್ 20ಕ್ಕೆ 2). ಪಂದ್ಯಶ್ರೇಷ್ಠ: ಟಾಮ್ ಸ್ಟ್ರಾಕರ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts