More

    ಇಂದು ವಿಶ್ವ ಆನೆ ದಿನ. ಆನೆಯ ಬದುಕು, ಬವಣೆಯ ಬಗ್ಗೆ ನಿಮಗೆಷ್ಟು ಗೊತ್ತು?

    ನವದೆಹಲಿ: ವನ್ಯಜೀವಿಗಳ ಬದುಕೇ ಒಂಥರ ಕುತೂಹಲ ಹುಟ್ಟಿಸುವಂಥದ್ದು. ಅದು ತಿಳಿದುಕೊಂಡಷ್ಟೂ ರೋಚಕವೆನಿಸುವಂಥದ್ದು. ಸಾಮಾಜಿಕ ಮಾಧ್ಯಮಗಳಲ್ಲಿ ವನ್ಯಜೀವಿಗಳ ಬಗೆಗಿನ ಯಾವುದೇ ಪೋಸ್ಟ್​​ಗೂ ಬೃಹತ್ ಪ್ರಮಾಣದಲ್ಲಿ ಪ್ರತಿಕ್ರಿಯೆಗಳು ಹರಿದುಬರುತ್ತವೆ ಎನ್ನುವುದು ವನ್ಯಜೀವಿಗಳ ಬಗ್ಗೆ ಜನಸಾಮಾನ್ಯರು ಎಷ್ಟು ಕುತೂಹಲವುಳ್ಳವರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ.

    ಇದನ್ನೂ ಓದಿ:  ಶಾಕಿಂಗ್ ನ್ಯೂಸ್…! ಮೂರೇ ವರ್ಷದಲ್ಲಿ 250 ಆನೆಗಳ ಸಾವು…. ಕಾರಣಗಳು ಹಲವು

    ಇಂದು ವಿಶ್ವ ಆನೆ ದಿನ. ವರ್ಷದ ಇನ್ನುಳಿದ ದಿನಗಳಲ್ಲಿ, ರೈಲುಗಳು, ವಿದ್ಯುತ್ ಬೇಲಿಗಳು ಮತ್ತು ಮನುಷ್ಯ-ಪ್ರಾಣಿಗಳ ಸಂಘರ್ಷಣೆ ವೇಳೆ ಆನೆಗಳ ಸಾವಿನ ಬಗ್ಗೆ ನಾವು ಕೇಳುತ್ತೇವೆ. ಅದರಾಚೆಗೆ, ಅವುಗಳ ಅವಸ್ಥೆಯ ಮೇಲೆ ಬೆಳಕು ಚೆಲ್ಲಲು ಪ್ರತಿ ವರ್ಷ ಆಗಸ್ಟ್ 12 ರಂದು ವಿಶ್ವ ಆನೆ ದಿನವನ್ನು ಆಚರಿಸಲಾಗುತ್ತದೆ.
    ಆನೆಗಳ ವಾಸಸ್ಥಾನದ ಕೊರತೆ, ಬೇಟೆಯಾಡುವ ಬೆದರಿಕೆಗಳು, ಪೋಷಕಾಂಶ ಹಾಗೂ ಆರೈಕೆ ಕೊರತೆ ಆನೆಗಳ ಅಸ್ತಿತ್ವಕ್ಕೆ ಅಪಾಯವನ್ನುಂಟುಮಾಡುತ್ತದೆ. ಬೇಟೆಯಾಡುವುದು, ದಂತ ವ್ಯಾಪಾರ ತಡೆಯುವುದು ಮತ್ತು ಆನೆಗಳ ಆವಾಸಸ್ಥಾನಗಳನ್ನು ರಕ್ಷಿಸಲು ಸರ್ಕಾರ ಕಾರ್ಯಗಳನ್ನು ಚುರುಕುಗೊಳಿಸಬೇಕಾದುದು ಇಂದಿನ ಅಗತ್ಯವಾಗಿದೆ.

    ಇದನ್ನೂ ಓದಿ : ಫ್ರಿಜ್‌ ಟ್ರೇ ಬಳಸಿ ಆನ್‌ಲೈನ್‌ ಕ್ಲಾಸ್‌: ಶಿಕ್ಷಕಿಯ ಪ್ಲ್ಯಾನ್‌ಗೆ ಅಪಾರ ಮೆಚ್ಚುಗೆ

    ಇಂಟರ್ನ್ಯಾಷನಲ್ ಯೂನಿಯನ್ ಫಾರ್ ದಿ ಕನ್ಸರ್ವೇಶನ್ ಆಫ್ ನೇಚರ್ (ಐಯುಸಿಎನ್) ನ ಅಪಾಯದಂಚಿನಲ್ಲಿರುವ ಪ್ರಾಣಿ ಜಾತಿಗಳ ಪಟ್ಟಿಯಲ್ಲಿ ಏಷ್ಯನ್ ಆನೆಯೂ ಗುರುತಿಸಲ್ಪಟ್ಟಿದೆ.
    ಇತಿಹಾಸ ಹೀಗಿದೆ: ಮೊದಲ ವಿಶ್ವ ಆನೆ ದಿನವನ್ನು 2012ರ ಆಗಸ್ಟ್ 12 ರಂದು ಆಚರಿಸಲಾಯಿತು.

    ಅಂದಿನಿಂದ, ಆನೆಗಳ ಬಗ್ಗೆ ಕಾಳಜಿ ವಹಿಸಲು ಮತ್ತು ರಕ್ಷಿಸಲು ಇದನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಥಾಯ್ಲೆಂಡ್​​ನ ಎಲಿಫೆಂಟ್ ರಿಇಂಟ್ರಡಕ್ಷನ್ ಫೌಂಡೇಶನ್ ಮತ್ತು ಕೆನಡಾದ ಚಲನಚಿತ್ರ ನಿರ್ಮಾಪಕರಾದ ಪೆಟ್ರೀಷಿಯಾ ಸಿಮ್ಸ್ ಮತ್ತು ಮೈಕೆಲ್ ಕ್ಲಾರ್ಕ್ ಅವರ (2011 ರ) ಪರಿಕಲ್ಪನೆಯಾಗಿತ್ತು.. ಈ ದಿನವನ್ನು 2012ರ ಆಗಸ್ಟ್ 12 ರಂದು ಅಧಿಕೃತವಾಗಿ ಪ್ರಾರಂಭಿಸಲಾಯಿತು.

    ಇದನ್ನೂ ಓದಿ :  ಪಾಕ್‌ಗೆ ಬಿಗ್‌ ಷಾಕ್‌: ಸಾಲವೂ ಬಂದ್‌, ತೈಲವೂ ಬಂದ್‌ ಎಂದ ಸೌದಿ ಅರೇಬಿಯಾ!

    ಒಂದು ಶತಮಾನದವರೆಗೆ, ಜಗತ್ತಿನಾದ್ಯಂತ ಅಂದಾಜು 12 ಮಿಲಿಯನ್ ಆನೆಗಳು ಕಾಡಿನಲ್ಲಿ ಇದ್ದವು. ಆದರೆ ಇಂದು, ಕೇವಲ 4 ಲಕ್ಷ ಆನೆಗಳು ಅಸ್ತಿತ್ವದಲ್ಲಿರಬಹುದು.
    ಆನೆಗಳನ್ನು ರಕ್ಷಿಸಲು ನಾವು ಹೀಗೆ ಮಾಡಬಹುದು:
    1) ಆನೆಯ ದಂತ ಸೇರಿದಂತೆ ಆನೆಯ ದೇಹದ ಯಾವುದೇ ಭಾಗಗಳಿಂದ ತಯಾರಿಸಲಾದ ಉತ್ಪನ್ನಗಳನ್ನು ಖರೀದಿಸದಿರುವುದು.
    2) ಕಳ್ಳ ಬೇಟೆಗಾರರಿಂದ ಆನೆಗಳ ಜೀವಕ್ಕೆ ಬೆದರಿಕೆಯಂತಹ ಯಾವುದೇ ಅಪಾಯಕಾರಿ ನಡೆ, ಕ್ರೌರ್ಯದ ವಿರುದ್ಧದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡುವುದು.

    ಇದನ್ನೂ ಓದಿ  : ಏರ್​ ಇಂಡಿಯಾ ವಿಮಾನ ದುರಂತದ ಸಂತ್ರಸ್ತರಿಗೆ ಸಿಗಲಿದೆ 1.19 ಕೋಟಿ ರೂ. ಪರಿಹಾರ…! ಲೆಕ್ಕಾಚಾರ ಹೇಗೆ?

    3) ಪುಸ್ತಕಗಳು, ಸಾಕ್ಷ್ಯಚಿತ್ರಗಳಿಂದ ಆನೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವುದು ಮತ್ತು ಮಾಹಿತಿಯನ್ನು ಹಂಚಿಕೊಳ್ಳುವುದು.
    4) ಆನೆಗಳು ಮತ್ತು ಅವುಗಳ ಆವಾಸಸ್ಥಾನಗಳನ್ನು ರಕ್ಷಿಸಲು ಕೆಲಸ ಮಾಡುವ ಸಂಸ್ಥೆಗಳನ್ನು ಬೆಂಬಲಿಸುವುದು.
    5) ಆನೆಗಳ ರಕ್ಷಣೆಗಾಗಿ ಧ್ವನಿ ಎತ್ತುವ ಗುಂಪುಗಳನ್ನು ಬೆಂಬಲಿಸುವುದು.
    ಈ ಬೃಹತ್ ಪ್ರಾಣಿಯನ್ನು ರಕ್ಷಿಸಲು ನಾವು ವಿಫಲವಾದರೆ, ಇತರ ವನ್ಯಜೀವಿ ಜಾತಿಗಳಂತೆ ಅವು ಅಳಿದುಹೋಗುವ ದಿನ ದೂರವಿಲ್ಲ.

    ದೌರ್ಜನ್ಯದಿಂದ ಬೇಸತ್ತ ಹೆಂಡತಿಯಿಂದಲೇ ಕುಡುಕ ಗಂಡನ ಕೊಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts