More

    ಬೆಂಕಿ ಹಚ್ಚಬೇಡಿ…, 1,304 ಕೋಟಿ ರೂ. ಕೊಡ್ತೇವೆ….!

    ಚಂಡೀಗಢ್​: ದೆಹಲಿ ಮಾತ್ರವಲ್ಲ, ಇಡೀ ಉತ್ತರ ಭಾರತವನ್ನು ಕಾಡುತ್ತಿರುವ ಸಮಸ್ಯೆ ಇದು… ! ಕೃಷಿಯ ಪ್ರತಿ ಹಂಗಾಮು ಮುಗಿದ ಬಳಿಕ ಈ ಸಮಸ್ಯೆ ಭೂತಾಕಾರವಾಗುತ್ತದೆ. ದೆಹಲಿಯಲ್ಲಂತೂ ಅಕ್ಷರಶ: ಉಸಿರುಗಟ್ಟಿ ಹೋಗುತ್ತದೆ. ಆದರೆ, ಇದೊಂದು ಸುಲಭ ಉಪಾಯ. ಇಲ್ಲದಿದ್ದರೆ, ಪ್ರತಿಬಾರಿಯೂ ಸಾವಿರಾರು ರೂಪಾಯಿಗಳನ್ನು ಇದಕ್ಕೆಂದೇ ಖರ್ಚು ಮಾಡಬೇಕಾಗುತ್ತದೆ ಎಂಬುದು ರೈತರ ಅಳಲು.

    ಇದನ್ನು ನಿವಾರಿಸಲೆಂದೇ ಹರಿಯಾಣ ಸರ್ಕಾರ 3,104 ಕೋಟಿ ರೂ.ಗಳ ಸಮಗ್ರ ಯೊಜನೆಯೊಂದನ್ನು ರೂಪಿಸಿದೆ. ದಯವಿಟ್ಟು ಕಳೆಗೆ ಹಾಗೂ ಬೆಳೆಯ ತ್ಯಾಜ್ಯಕ್ಕೆ ಬೆಂಕಿ ಹಚ್ಚಬೇಡಿ. ಬದಲಿಗೆ ಅದನ್ನು ನಿವಾರಿಸಲು ಪ್ರೋತ್ಸಾಹ ಧನ ಪಡೆಯಿರಿ ಎಂದು ಮನವಿ ಮಾಡುತ್ತಿದೆ.

    ಇದಲ್ಲದೇ, ಕೇಂದ್ರ ಸರ್ಕಾರ ಕೂಡ ಈ ಯೋಜನೆಗೆಂದೇ 170 ಕೋಟಿ ರೂ.ಗಳನ್ನು ಒದಗಿಸಿದೆ. ಬೆಳೆ ತ್ಯಾಜ್ಯ ನಿವರ್ಹಣೆಗಾಗಿ ಯಾಂತ್ರೀಕರಣ ಯೋಜನೆಯಡಿಯಲ್ಲಿ ನೆರವು ನೀಡಲಾಗುತ್ತದೆ.

    ಇದನ್ನೂ ಓದಿ: ಈ ಮ್ಯಾಗ್​ಜೀನ್​ ಬೆಲೆ 12 ಲಕ್ಷ ರೂ…! ಏನಿದೆ ಅಂಥದ್ದು ಇದರಲ್ಲಿ ಅಂತೀರಾ…?

    ಬೆಳೆ ಕಟಾವಿನ ಬಳಿಕ ಹಾಗೂ ಕಟಾವಿನಿಂದ ಉಂಟಾದ ತ್ಯಾಜ್ಯವನ್ನು ನಿರ್ವಹಣ ಮಾಡಲು ಅಗತ್ಯ ಯಂತ್ರೋಪಕರಣಗಳನ್ನು ಒದಗಿಸಲಾಗುತ್ತದೆ. ಬಾಸ್ಮತಿಯಲ್ಲದ ಭತ್ತ ಬೆಳೆಯುವವರಿಗೆ ಪ್ರತಿ ಕ್ವಿಂಟಾಲ್​ಗೆ ನೂರು ರೂ.ಗಳಂತೆ ಕಟಾವಿನ ಏಳು ದಿನಗಳ ಒಳಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದು ಘೋಷಿಸಲಾಗಿದೆ.
    ಬೆಳೆ ತ್ಯಾಜ್ಯದ ಕುರಿತಾದ ಯಾವುದೇ ಸಮಸ್ಯೆ ಇದ್ದರೂ ಸ್ಪಂದಿಸಲು ಕೇಂದ್ರೀಯ ನಿಯಂತ್ರಣ ಘಟಕ ತೆರೆಯಲಾಗಿದೆ ಎಂದು ಸಿಎಂ ಮನೋಹರ್​ ಲಾಲ್​ ಖಟ್ಟರ್​ ತಿಳಿಸಿದ್ದಾರೆ.

    ಪಂಜಾಬ್​, ಹರಿಯಾಣ, ದೆಹಲಿಗೆ ಹೊಂದಿಕೊಂಡಿರುವ ಉತ್ತರಪ್ರದೇಶದ ಗಡಿಯಲ್ಲಿ ಭತ್ತ, ಗೋಧಿ ಕೃಷಿ ಚಟುವಟಿಕೆ ಬಳಿಕ ಬೆಳೆ ತ್ಯಾಜ್ಯಕ್ಕೆ ಬೆಂಕಿ ಹಚ್ಚಲಾಗುತ್ತದೆ. ಇದು ಭಾರಿ ಪ್ರಮಾಣದ ವಾಯು ಮಾಲಿನ್ಯಕ್ಕೆ ಕಾರಣವಾಗಿದೆ.

    26 ವರ್ಷಗಳ ಬಳಿಕ ಪಾತಾಳಕ್ಕಿಳಿದಿದೆ ಚಿನ್ನ; ಹಳದಿ ಲೋಹ ಆಕರ್ಷಣೆ ಕಳೆದುಕೊಂಡರೆ ಲಾಭ ಯಾರಿಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts