More

    ಖಾಸಗಿ ವಾಹನಗಳಿಗೆ ತಾತ್ಕಾಲಿಕ ರಹದಾರಿ ನೀಡಲಿದೆ ಸಾರಿಗೆ ಇಲಾಖೆ; ನೌಕರರ ಮುಷ್ಕರದಿಂದಾಗುವ ಸಮಸ್ಯೆ ತಪ್ಪಿಸಲು ಪರ್ಯಾಯ ಮಾರ್ಗ

    ಬೆಂಗಳೂರು: ಬೇಡಿಕೆ ಈಡೇರಿಕೆಗಾಗಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರು ಏ. 7ರಂದು ನಡೆಸಲಿರುವ ಮುಷ್ಕರದಿಂದ ಜನರಿಗೆ ಸಮಸ್ಯೆಯಾಗದಂತೆ ಪರ್ಯಾಯ ಮಾರ್ಗ ಕಂಡುಕೊಂಡಿರುವ ಸಾರಿಗೆ ಇಲಾಖೆ, ಒಪ್ಪಂದದ ವಾಹನಗಳು ಸೇರಿ ಇನ್ನಿತರ ವಾಹನಗಳಿಗೆ ತಾತ್ಕಾಲಿಕ ರಹದಾರಿ ನೀಡಲು ನಿರ್ಧರಿಸಿದೆ.

    ಸಾರಿಗೆ ನೌಕರರಿಗೆ 6ನೇ ವೇತನ ಆಯೋಗದ ಶಿಫಾರಸಿನಂತೆ ವೇತನ ಪರಿಷ್ಕರಣೆ ಮಾಡಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಏ. 7ರಂದು ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವಂತೆ ಕರೆ ನೀಡಿದೆ. 2020ರ ಡಿಸೆಂಬರ್‌ನಲ್ಲಿ ನಡೆದ ಮುಷ್ಕರದಂತೆಯೂ ಈ ಬಾರಿಯೂ ಮುಷ್ಕರ ನಡೆಸಲು ನೌಕರ ಸಂಘಟನೆಗಳು ನಿರ್ಧರಿಸಿ, ನೌಕರರಿಗೆ ಮುಷ್ಕರದ ಕುರಿತು ಮನವರಿಕೆ ಮಾಡುತ್ತಿವೆ. ಆದರೆ, ಈ ಮುಷ್ಕರವನ್ನು ವಿಲಗೊಳಿಸಲು ಹಾಗೂ ಮುಷ್ಕರ ನಡೆದರೆ ಜನರಿಗೆ ಸಮಸ್ಯೆಯಾಗದಂತೆ ಮಾಡಲು ಖಾಸಗಿ ವಾಹನಗಳ ನೆರವು ಪಡೆಯಲಾಗುತ್ತಿದೆ.

    ತಾತ್ಕಾಲಿಕ ರಹದಾರಿ: ಸಾರಿಗೆ ಇಲಾಖೆ ನಿರ್ಧರಿಸಿರುವಂತೆ ಒಪ್ಪಂದದ ವಾಹನಗಳು, ಮ್ಯಾಕ್ಸಿ ಕ್ಯಾಬ್, ಮಿನಿ ಬಸ್‌ಗಳಿಗೆ ತಾತ್ಕಾಲಿಕ ರಹದಾರಿ ನೀಡಲಾಗುತ್ತಿದೆ. ಅದರ ಪ್ರಕಾರ ತಾತ್ಕಾಲಿಕ ರಹದಾರಿ ಪಡೆಯಲಿಚ್ಛಿಸುವ ವಾಹನ ಮಾಲೀಕರು ಮಾರ್ಗ ವ್ಯಾಪ್ತಿಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಗಳಲ್ಲಿ ಅರ್ಜಿ ಸಲ್ಲಿಸಬೇಕಿದೆ. ಆ ಅರ್ಜಿಗಳನ್ನು ಆಧರಿಸಿ ವಾಹನಗಳಿಗೆ ನಿಗದಿತ ಮಾರ್ಗದ ತಾತ್ಕಾಲಿಕ ರಹದಾರಿ ನೀಡಲಾಗುತ್ತದೆ.

    ಇದನ್ನೂ ಓದಿ: ನಗ್ನವಾಗಿ ನೋಡಿದ್ರು, ಲೈಂಗಿಕವಾಗಿ ಬಳಸಿಕೊಂಡ್ರು.. ಎಲ್ಲ ಮುಗಿದ ಮೇಲೆ ಮಾಡಬಾರದ್ದನ್ನ ಮಾಡಿದ್ರು… ಎಳೆಎಳೆಯಾಗಿ ಬಿಚ್ಚಿಟ್ಟ ಯುವತಿ 

    ಎಚ್ಚೆತ್ತ ಇಲಾಖೆ: ಕಳೆದ ಬಾರಿಯ ಮುಷ್ಕರದಿಂದಾಗಿ ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆ ಹದಗೆಟ್ಟಿತ್ತು. ಅದರಿಂದ ಲಕ್ಷಾಂತರ ಜನರು ಸಮಸ್ಯೆ ಅನುಭವಿಸಿದ್ದರು. ಈ ಬಾರಿ ಅದು ಪುನರಾವರ್ತನೆ ಆಗದಂತೆ ಇಲಾಖೆ ಮುನ್ನೆಚ್ಚರಿಕೆ ವಹಿಸಿದೆ. ಅದರ ಜತೆಗೆ ಸಾರಿಗೆ ನೌಕರರ ಬೇಡಿಕೆಗೆ ಸರ್ಕಾರ ಬಗ್ಗುವುದಿಲ್ಲ ಎಂಬ ಸಂದೇಶವನ್ನು ಈಗಲೇ ರವಾನಿಸಿದಂತಾಗಿದೆ.

    8 ಬೇಡಿಕೆ ಈಡೇರಿದರೂ ಮುಷ್ಕರವೇಕೆ?

    ಸಾರಿಗೆ ನೌಕರರು ಡಿಸೆಂಬರ್‌ನಲ್ಲಿ ನಡೆಸಿದ ಮುಷ್ಕರದ ವೇಳೆ 9 ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದರು. ಅದರಲ್ಲಿ ಕರೊನಾದಿಂದ ಮೃತಪಟ್ಟ ನೌಕರರ ಕುಟುಂಬಕ್ಕೆ ಪರಿಹಾರ, ನೌಕರರಿಗೆ ಆರೋಗ್ಯ ವಿಮೆ, ಎನ್‌ಸಿಎನ್‌ಐ ಪದ್ಧತಿ ಬದಲಾವಣೆ, ತರಬೇತಿ ನೌಕರರ ಅವಧಿ ಇಳಿಕೆ ಸೇರಿ 8 ಬೇಡಿಕೆಗಳ ಅನುಷ್ಠಾನಕ್ಕೆ ಸಾರಿಗೆ ಇಲಾಖೆ ಈಗಾಗಲೆ ಸ್ಪಷ್ಟ ಆದೇಶ ಹೊರಡಿಸಿದೆ. 6ನೇ ವೇತನ ಆಯೋಗದ ಶಿಫಾರಸು ಜಾರಿಗೆ ಸಮಿತಿ ರಚಿಸಿ, ಅದರಿಂದ ವರದಿ ನಿರೀಕ್ಷಿಸಲಾಗಿದೆ. ಹೀಗಿರುವಾಗ ಸಾರಿಗೆ ನೌಕರರು ಮತ್ತೆ ಮುಷ್ಕರ ನಡೆಸಲು ಮುಂದಾಗಿದ್ದು, ಅದಕ್ಕೆ ಸರ್ಕಾರ ಬೇಡಿಕೆ ಈಡೇರಿಸಲು ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟತೆ ಇಲ್ಲ ಎಂದು ಸಂಘಟನೆಗಳು ಕಾರಣ ನೀಡುತ್ತಿವೆ. ಆದರೆ, ಸಂಘಟನೆಗಳು ಪ್ರತಿಷ್ಠೆಗೆ ಮುಷ್ಕರ ಕೈಗೊಳ್ಳುತ್ತಿವೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಆರೋಪಿಸುತ್ತಿದ್ದಾರೆ.

    ಕಿರಿದಾಗುತ್ತಿರುವ ಜನನಾಂಗ: ಪುರುಷರ ಕಾಲೆಳೆದ ನಟಿ ದಿಯಾ ಮಿರ್ಜಾ!

    ಬೆಸ್ಕಾಂ ಅಧಿಕಾರಿ-ಸಿಬ್ಬಂದಿ ಮನೆಗಳಲ್ಲೇ ವಿದ್ಯುತ್ ದೀಪ ಬೆಳಗಲ್ಲ!; ಕಚೇರಿಗಳಲ್ಲೂ ನಾಳೆ ರಾತ್ರಿ ಒಂದು ಗಂಟೆ ಎಲೆಕ್ಟ್ರಿಕ್​ ಲೈಟ್​ ಆಫ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts