More

    ಎರಡೇ ದಿನಗಳಲ್ಲಿ ಇನ್ನೊಂದು ಭೀಕರ ಅಪಘಾತ, ಮತ್ತೊಬ್ಬರು ಸ್ಥಳದಲ್ಲೇ ಸಾವು!

    ದಾವಣಗೆರೆ: ಎರಡು ದಿನಗಳ ಹಿಂದೆ ಸಂಭವಿಸಿದ ಭೀಕರ ಅಪಘಾತದಲ್ಲಿ ವಿದ್ಯಾರ್ಥಿನಿಯೊಬ್ಬಳು ಸಾವಿಗೀಡಾದ ಸ್ಥಳಕ್ಕೆ ಸಮೀಪದಲ್ಲೇ ಇಂದು ಮತ್ತೊಂದು ಅಪಘಾತ ಸಂಭವಿಸಿದ್ದು, ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

    ದಾವಣಗೆರೆ ಜಿಲ್ಲೆಯ ಹಳೇ ಪಿ.ಬಿ. ರಸ್ತೆಯ ಆ್ಯಕ್ಸಿಸ್ ಬ್ಯಾಂಕ್ ಬಳಿ ಈ ಅಪಘಾತ ಸಂಭವಿಸಿದ್ದು, ಕರೂರು ನಿವಾಸಿ ಸೈಯಿದಾ ಮೆಹರುನ್ನಿಸಾ (48) ಸಾವಿಗೀಡಾಗಿದ್ದಾರೆ. ಇವರು ಆ್ಯಕ್ಟಿವಾ ಹೋಂಡದಲ್ಲಿ ಮಗಳೊಂದಿಗೆ ಮನೆಗೆ ಮರಳುತ್ತಿದ್ದಾಗ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

    ಇದನ್ನೂ ಓದಿ: ನಾಲ್ಕು ದಿನಗಳ ಹಿಂದೆ ಪ್ರೇಮವಿವಾಹ ಮಾಡಿಕೊಂಡಿದ್ದ ಯುವತಿ ಆತ್ಮಹತ್ಯೆ!

    ಅಪಘಾತದ ತೀವ್ರತೆಗೆ ಸೈಯಿದಾ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಎರಡು ದಿನಗಳ ಹಿಂದೆ ಇಲ್ಲಿಗೆ ಸಮೀಪದ ಎಂಸಿಸಿ ಬಿ-ಬ್ಲಾಕ್​ನಲ್ಲಿ ಇದೇ ರೀತಿ ಅಪಘಾತ ಸಂಭವಿಸಿದ್ದು, ದಂತ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿದ್ದಳು. ಸುತ್ತಮುತ್ತ ಹೆಚ್ಚಾಗಿರುವ ಅಪಘಾತಗಳು ಸ್ಥಳೀಯರಲ್ಲಿ ಆತಂಕ ಹುಟ್ಟಿಸಿವೆ.

    ಅಜ್ಜಿಯೊಂದಿಗೆ ಫ್ಲ್ಯಾಟ್​ ನೋಡಲು ಹೋಗಿದ್ದ 2 ವರ್ಷದ ಬಾಲಕ ಐದನೇ ಮಹಡಿಯಿಂದ ಬಿದ್ದು ಸಾವು!

    ಪೊಲೀಸ್ ಆಯುಕ್ತರ ಘಟಕದಲ್ಲಿ ಖಾಲಿ ಇವೆ ಉದ್ಯೋಗ; 16 ತಾಂತ್ರಿಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts