More

    ನೇಮಕಾತಿ ಪರೀಕ್ಷೆ ಬರೆದಿದ್ದು ಒಬ್ಬರು, ನೌಕರಿ ಪಡೆದದ್ದು ಇನ್ನೊಬ್ಬರು: ತಿಹಾರ್​ ಜೈಲಿನ ಅಕ್ರಮ ಹೊರಬಿದ್ದದ್ದು ಹೇಗೆ?

    ನವದೆಹಲಿ: ಪ್ರಮುಖ ಶೈಕ್ಷಣಿಕ ಪರೀಕ್ಷೆಗಳು, ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ನೈಜ ಅಭ್ಯರ್ಥಿಯ ಬದಲು ಬೇರೆಯವರು ಪರೀಕ್ಷೆ ಬರೆಯುವ ಪ್ರಕರಣಗಳು ಆಗಾಗ್ಗೆ ಬೆಳಕಿಗೆ ಬರುತ್ತಲೆ ಇವೆ. ಇಂತಹುದೇ ಒಂದು ಪ್ರಕರಣ ತಿಹಾರ್​ ಜೈಲಿನಲ್ಲಿ ಬಹಿರಂಗವಾಗಿದೆ. ಈ ಅಕ್ರಮ ಹೊರಬೀಳಲು ಕಾರಣವಾಗಿರುವುದು ಬಯೋಮೆಟ್ರಿಕ್​ ವ್ಯವಸ್ಥೆ.

    ಬಯೋಮೆಟ್ರಿಕ್ ಹೊಂದಾಣಿಕೆಯಾಗದ ಹಿನ್ನೆಲೆಯಲ್ಲಿನ ಈಗ ತಿಹಾರ್ ಜೈಲಿನ 50 ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ನೇಮಕಾತಿ ಪರೀಕ್ಷೆಯಲ್ಲಿ ನೈಜ ಅಭ್ಯರ್ಥಿ ಬದಲು ಬೇರೆ ಯಾರೋ ಪರೀಕ್ಷೆ ಬರೆದಿರುವ ಶಂಕೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನೇಮಕಾತಿ ಪರೀಕ್ಷೆ ಬರೆದಿದ್ದು ಒಬ್ಬರು; ನೌಕರಿ ಮಾಡಲು ಬಂದಿರುವುದು ಇನ್ನೊಬ್ಬರು. ಹೀಗಾಗಿ ಬಯೋಮೆಟ್ರಿಕ್​ ಹೊಂದಾಣಿಕೆಯಾಗುತ್ತಿಲ್ಲ ಎಂಬುದು ಗೊತ್ತಾಗಿದೆ.

    ಬಯೋಮೆಟ್ರಿಕ್‌ ಗುರುತಿನ ದಾಖಲೆಯಲ್ಲಿ ತಾಳೆಯಾಗದ ಕಾರಣ ತಿಹಾರ್‌ ಜೈಲಿನ ಆಡಳಿತ ಮಂಡಳಿಯು ತನ್ನ 50 ನೌಕರರಿಗೆ ವಜಾಗೊಳಿಸುವ ನೋಟಿಸ್‌ ನೀಡಿದೆ. ಈ 50 ವಜಾಗೊಂಡ ನೌಕರರಲ್ಲಿ 39 ವಾರ್ಡರ್‌ಗಳು, 9 ಸಹಾಯಕ ಸೂಪರಿಂಟೆಂಡೆಂಟ್ ಮತ್ತು 2 ಮ್ಯಾಟ್ರನ್ ಸೇರಿದ್ದಾರೆ.

    ದೆಹಲಿ ಅಧೀನ ಸೇವೆಗಳ ಆಯ್ಕೆ ಮಂಡಳಿಯ (ಡಿಎಸ್‌ಎಸ್‌ಬಿ) ನಿರ್ದೇಶನದಂತೆ ಈ ನೋಟಿಸ್​ ನೀಡಲಾಗಿದೆ. ಈ ಮೂರು ಹುದ್ದೆಗಳಿಗೆ ಡಿಎಸ್​ಎಸ್​ಬಿ ಪರೀಕ್ಷೆ ನಡೆಸಿ, ಅಂದಾಜು 450 ಅರ್ಜಿದಾರರನ್ನು ನೇಮಕ ಮಾಡಿತ್ತು. ಈ 450 ಉದ್ಯೋಗಿಗಳಲ್ಲಿ 50 ಮಂದಿಗೆ ಬಯೋಮೆಟ್ರಿಕ್ ಗುರುತು ಹೊಂದಿಕೆಯಾಗಿಲ್ಲ. ಈ ಕಾರಣದಿಂದಾಗಿ ಅವರನ್ನು ವಜಾಗೊಳಿಸುವ ನೋಟಿಸ್​ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ಎಲ್ಲಾ ಉದ್ಯೋಗಿಗಳು ಎರಡು ವರ್ಷಗಳ ಕಾಲ ಪ್ರೋಬೆಷನ್ ಪಿರಿಯಡ್​ನಲ್ಲಿ ಇದ್ದರು. ಇವರು ಒಂದು ತಿಂಗಳೊಳಗೆ ನೋಟಿಸ್‌ಗೆ ಉತ್ತರಿಸಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.

    ಕುಡಿಯುವ ನೀರಿಗಾಗಿ ಆಂಧ್ರ- ತೆಲಂಗಾಣ ನಡುವೆ ಘರ್ಷಣೆ: ಮಧ್ಯಪ್ರವೇಶಿಸಿದ ಕೇಂದ್ರ ಸರ್ಕಾರ

    ಸೌರ ಮಾರುತ ಅಧ್ಯಯನ ಉಪಕರಣ ಸಕ್ರಿಯ: ಇಸ್ರೋ ಆದಿತ್ಯ-1ನಲ್ಲಿ ಮಹತ್ವದ ಸಾಧನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts