More

    ಮೂರು ವರ್ಷಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ಕಾಣೆಯಾಗಿದ್ದ, ಈಗ ಅಸ್ಸಾಂನಲ್ಲಿ ಪತ್ತೆಯಾದ! ಗುರುತು ಪತ್ತೆ ಮಾಡಿದ್ದೇ ಒಂದು ಸಾಹಸ!

    ಗುವಾಹಟಿ: ಮೂರು ವರ್ಷಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ಕಾಣೆಯಾಗಿದ್ದ ಬಾಲಕನೊಬ್ಬ ಇದೀಗ ಅಸ್ಸಾಂನಲ್ಲಿ ಪತ್ತೆಯಾಗಿದ್ದಾನೆ. ಮಾನಸಿಕವಾಗಿ ತೊಂದರೆಗಳನ್ನು ಎದುರಿಸುತ್ತಿರುವ ಬಾಲಕನ ಗುರುತು ಪತ್ತೆಗೆ ಎನ್​ಜಿಒ ಒಂದು ಮಾಡಿದ ಸಾಹಸ ಕೇಳಿದರೆ ನಿಜಕ್ಕೂ ಆಶ್ಚರ್ಯವಾಗುವಂತಿದೆ.

    ಇದನ್ನೂ ಓದಿ: ಮನೆಗೆ ಕರೆಸಿಕೊಂಡು ಬಟ್ಟೆ ಬಿಚ್ಚಿಸುತ್ತಿದ್ದ! ಬಾಲಕನ ಮೇಲೆ ಬಾಲಕನಿಂದಲೇ ನಡೆಯುತ್ತಿತ್ತು ಲೈಂಗಿಕ ದೌರ್ಜನ್ಯ

    ಪಶ್ಚಿಮ ಬಂಗಾಳದ ಕೂಚ್​ ಬೆಹಾರ್​ ಜಿಲ್ಲೆಯ ಬಾಲಕ ಮಿಥುನ್​ (ಈಗ ಆತನಿಗೆ 15 ವರ್ಷ) ಮೂರು ವರ್ಷಗಳ ಹಿಂದೆ ಕಾಣೆಯಾಗಿದ್ದ. ಅದಾದ ಕೆಲವೇ ದಿನಗಳಲ್ಲಿ ಆತ ಅಸ್ಸಾಂನ ಗುವಾಹಟಿಯಲ್ಲಿ ಕಾಣಿಸಿಕೊಂಡಿದ್ದಾನೆ. ಮಾನಸಿಕ ಸ್ಥಿಮಿತವಿರದ ಮತ್ತು ಹೇಳಿದ್ದನ್ನು ಅಷ್ಟು ಬೇಗ ಅರಿತುಕೊಳ್ಳುವ ಶಕ್ತಿ ಆತನಲ್ಲಿಲ್ಲದಿದ್ದರಿಂದ ಆತನ ಗುರುತು ಪತ್ತೆ ಹಚ್ಚುವುದು ಜಿಲ್ಲಾಡಳಿತಕ್ಕೆ ಸವಾಲಾಗಿತ್ತು. ಆತನನ್ನು ವಿಶೇಷ ಮಕ್ಕಳ ಕೇಂದ್ರಕ್ಕೆ ಕಳುಹಿಸಿಕೊಟ್ಟು ಅಲ್ಲಿಯೇ ಸಲಹಲಾಗುತ್ತಿತ್ತು.

    ಆತ ಕೇಂದ್ರಕ್ಕೆ ಸೇರಿದ ಆರು ತಿಂಗಳ ನಂತರ ಬಂಗಾಳಿ ಭಾಷೆಯಲ್ಲಿ ನಾನು ಮನೆಗೆ ಹೋಗಬೇಕು ಎಂದು ಹೇಳಿದ್ದಾನೆ. ಆಗ ಆತ ಪಶ್ಚಿಮ ಬಂಗಾಳದ ಬಾಲಕ ಎನ್ನುವುದು ಎನ್​ಜಿಒನ ಅಧಿಕಾರಿಗೆ ತಿಳಿದುಬಂದಿದೆ. ಈ ಕುರಿತಾಗಿ ಪಶ್ಚಿಮ ಬಂಗಾಳದ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಅದರೆ ಯಾವುದೇ ಪ್ರಯೋಜನವಾಗಿಲ್ಲ. ಮನಗೆ ಹೋಗಬೇಕು ಎನ್ನುವುದನ್ನು ಬಿಟ್ಟು ಬಾಲಕ ಬೇರೇನನ್ನೂ ಮಾತನಾಡಿಲ್ಲ.

    ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಹೈ ಡ್ರಾಮ! ಟಿಎಂಸಿ ಶಾಸಕರು ಬಿಜೆಪಿ ಸೇರಿದ ಬೆನ್ನಲ್ಲೇ ಬಿಜೆಪಿ ಸಂಸದನ ಪತ್ನಿ ಟಿಎಂಸಿ ಸೇರ್ಪಡೆ!

    ಇತ್ತೀಚೆಗೆ ಪಶ್ಚಿಮ ಬಂಗಾಳದ ಕೂಚ್ ಬೆಹರ್ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರು ಆ ಎನ್​ಜಿಒಗೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಈ ಬಾಲಕನ ಬಗ್ಗೆ ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಅಧ್ಯಕ್ಷರು ಬಾಲಕನೊಂದಿಗೆ ಮಾತನಾಡಿದ್ದು, ಆತನ ವಿಳಾಸವನ್ನು ಸ್ವಲ್ಪ ಮಟ್ಟಿಗೆ ತಿಳಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಸ್ಥಳೀಯ ಸಂಪರ್ಕಗಳ ಸಹಾಯದಿಂದ ಬಾಲಕನ ಕುಟುಂಬವನ್ನು ಹುಡುಕಲಾಗಿದೆ. ಶನಿವಾರದಂದು ಬಾಲಕನ ತಂದೆ ತಾಯಿ ಗುವಾಹಟಿಗೆ ತೆರಳಿದ್ದು, ಕಳೆದು ಹೋಗಿದ್ದ ತಮ್ಮ ಮಗನನ್ನು ವಾಪಾಸು ಮನೆಗೆ ಕರೆದುಕೊಂಡು ಬಂದಿದ್ದಾರೆ. (ಏಜೆನ್ಸೀಸ್​)

    ಮಾರ್ಕ್ಸ್​ ಬೇಕೆಂದರೆ ನನ್ನ ಜತೆ ಸೆಕ್ಸ್​ ಮಾಡಿ! ಸರ್ಕಾರಿ ಶಾಲಾ ಶಿಕ್ಷಕನ ಬೇಡಿಕೆಗೆ ಬೆಚ್ಚಿದ ವಿದ್ಯಾರ್ಥಿನಿಯರು

    ಸೆಕ್ಸ್​ ವರ್ಕರ್​ ಇರಲಿಲ್ಲ, ಹೋಟೆಲ್​ ಸಿಬ್ಬಂದಿಯನ್ನೇ ರೇಪ್​ ಮಾಡಿಬಿಟ್ಟರು! ವಿಚಾರಣೆ ವೇಳೆ ಹೊರಬಿತ್ತು ಭಯಾನಕ ರಹಸ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts