More

    ಜಮ್ಮು ಮತ್ತು ಕಾಶ್ಮೀರದ ಮೂವರು ಛಾಯಾಗ್ರಾಹಕರಿಗೆ ಪುಲಿಟ್ಜರ್​ ಪ್ರಶಸ್ತಿ

    ನವದೆಹಲಿ: ಪತ್ರಿಕೋದ್ಯಮ ಪ್ರತಿಷ್ಠಿತ ಪಶಸ್ತಿ ಎಂದೇ ಪರಿಗಣಿಸಲಾಗಿರುವ ಪುಲಿಟ್ಜರ್​ ಪ್ರಶಸ್ತಿ ಈ ಬಾರಿ ಮೂವರು ಭಾರತೀಯರಿಗೆ ಸಂದಿದೆ. ಸುದ್ದಿ ಸಂಸ್ಥೆ ಅಸೋಸಿಯೇಟೆಡ್​ ಪ್ರೆಸ್​ (ಎಪಿ) ಜಮ್ಮು ಮತ್ತು ಕಾಶ್ಮೀರದ ಛಾಯಾಗ್ರಾಹಕರಾದ ಮುಖ್ತಾರ್​ ಖಾನ್​, ದರ್​ ಯಾಸಿನ್​ ಹಾಗೂ ಚನ್ನಿ ಆನಂದ್​ಗೆ ಫೀಚರ್​​ ವಿಭಾಗದಲ್ಲಿ ಪ್ರಶಸ್ತಿ ದೊರೆತಿದೆ.

    ಕರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟಿಸುವುದನ್ನು ಎರಡು ವಾರಗಳ ಕಾಲ ಮುಂದೂಡಲಾಗಿತ್ತು. ಪ್ರತಿವರ್ಷ ನ್ಯೂಯಾರ್ಕ್​ನಲ್ಲಿರುವ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪ್ರಶಸ್ತಿ ಪ್ರಕಟಿಸುವ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಬಾರಿ ಆಯ್ಕೆ ನಿರ್ವಹಣೆಯ ಹೊಣೆ ಹೊತ್ತಿರುವ ಡಾನಾ ಕೆನಡಿ ಮನೆಯಿಂದಲೇ ವಿಡಿಯೋ ಸಂವಾದದ ಮೂಲಕ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಪ್ರಕಟಿಸಿದರು.

    ಇದನ್ನೂ ಓದಿ; ಆರೋಗ್ಯ ಸೇತು ಆ್ಯಪ್​ ಇಲ್ಲದಿದ್ದರೆ ಜೈಲು ಸೇರಬೇಕಾಗುತ್ತೆ ಎಚ್ಚರ….!

    ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ನಡೆದ ವಿದ್ಯಮಾನಗಳ ಕುರಿತಾದ ಛಾಯಾಚಿತ್ರಗಳು ಇವಾಗಿದ್ದು, ತಲ್ಲಣಗೊಳಿಸುವ ಬದುಕಿನ ಚಿತ್ರಗಳೆಂದು ಇವನ್ನು ಕರೆಯಲಾಗಿದೆ.
    ಸುದ್ದಿ ಸಂಸ್ಥೆಯ ಮೂವರು ಛಾಯಾಗ್ರಾಹಕರು ಪ್ರಶಸ್ತಿಗೆ ಭಾಜನರಾಗಿರುವುದು ಸಂಸ್ಥೆಗೆ ಹೆಮ್ಮೆ ತಂದಿದೆ ಎಂದು ಅಧ್ಯಕ್ಷ ಗ್ಯಾರಿ ಪ್ರುಯಿಟ್​ ಹೇಳಿದ್ದಾರೆ. ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಸೇರಿ ಹಲವರು ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದ್ದಾರೆ.

    ಪ್ರಶಸ್ತಿ  ಪಡೆದ ಚಿತ್ರಗಳು ಇಲ್ಲಿವೆ….

    ಕರೊನಾ ನಿರ್ಮೂಲನಕ್ಕೆ ಔಷಧ ಸಿಗದೆಯೂ ಇರಬಹುದು…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts