More

    ಸಮಾಜದ ಅಂಕು-ಡೊಂಕು ತಿದ್ದಿದ ವಚನಕಾರ

    ಹಿರೇಕೆರೂರ: ಈ ಸಮಾಜದಲ್ಲಿ ಅತ್ಯಂತ ಕಠಿಣ ಕಾರ್ಯ ಮಾಡುತ್ತಾ ಕಷ್ಟಕರ ಜೀವನ ನಡೆಸುತ್ತಿರುವ ಮಡಿವಾಳ ಸಮುದಾಯದ ಅಭಿವೃದ್ಧಿಗೆ ವಿಶೇಷ ಸ್ಥಾನಮಾನ, ಮೀಸಲಾತಿ ಸೌಲಭ್ಯ ಕಲ್ಪಿಸುವ ಮೂಲಕ ಆ ಸಮಾಜವನ್ನು ಗೌರವದಿಂದ ಕಾಣುವುದು ಅತಿ ಅವಶ್ಯವಾಗಿದೆ ಎಂದು ಸಿಇಎಸ್ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಎಸ್.ಎಸ್. ಪಾಟೀಲ ಹೇಳಿದರು.

    ಪಟ್ಟಣದ ಸಿಇಎಸ್ ವಿದ್ಯಾಸಂಸ್ಥೆಯ ವಿವಿಧ ಶಾಲೆ- ಕಾಲೇಜುಗಳ ವತಿಯಿಂದ ಗುರುವಾರ ಏರ್ಪಡಿಸಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಮ್ಮ ವಚನ ಸಾಹಿತ್ಯ ಮೂಲಕ ಸಮಾಜದ ಅಂಕು-ಡೊಂಕು ತಿದ್ದಿದ ಕೀರ್ತಿ ಮಾಚಿದೇವರಿಗೆ ಸಲ್ಲುತ್ತದೆ. ಯಾವುದೇ ಸ್ವಾರ್ಥ ಬಯಸದೇ ನಿಸ್ವಾರ್ಥದಿಂದ ಎಲ್ಲರಿಗೂ ಮಾದರಿಯಾಗಿದ್ದರಿಂದ ಇಂದು ಅವರ ಜಯಂತಿ ಆಚರಿಸುವ ಮೂಲಕ ಗೌರವಿಸಲಾಗುತ್ತಿದೆ. ಅವರ ತತ್ವಾದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಂಡು ಸೌಹಾರ್ದ ಮತ್ತು ನೆಮ್ಮದಿ, ಶಾಂತಿಯಿಂದ ಜೀವನ ನಡೆಸಿದರೆ ಜಯಂತಿ ಆಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದರು.

    ಎಕೇಶಣ್ಣ ಬಣಕಾರ, ಕೆ.ಎಂ. ಸುಕುಕುಮಾರ, ಪರಮೇಶ ಡಮ್ಮಳ್ಳಿ, ಜಗದೀಶ ಕೆ., ಹಾಗೂ ಶಿಕ್ಷಕರು, ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts