More

    ಶರಣರ ನಡೆ-ನುಡಿ ಅಳವಡಿಸಿಕೊಳ್ಳಲಿ

    ಸವಣೂರ: ಪ್ರತಿಯೊಬ್ಬರು ನಿತ್ಯ ಬದುಕಿನಲ್ಲಿ ಶರಣರ ನಡೆ-ನುಡಿಗಳನ್ನು ಅಳವಡಿಸಿಕೊಳ್ಳಬೇಕು. ಪಾಲಕರು ಮಕ್ಕಳಿಗೆ ವಚನಕಾರರ, ದಾರ್ಶನಿಕರ ಹಾಗೂ ರಾಷ್ಟ್ರ ಭಕ್ತರ ಕುರಿತು ಬೋಧಿಸಬೇಕು ಎಂದು ತಾಲೂಕು ಮಡಿವಾಳ ಮಾಚಿದೇವರ ಸಂಘದ ಉಪಾಧ್ಯಕ್ಷ ರಾಮಣ್ಣ ಅಗಸರ ಹೇಳಿದರು.

    ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶರಣರ ಜಯಂತಿ ಆಚರಣೆಯೊಂದಿಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.

    ಶಿರಸ್ತೇದಾರ ತ್ರೀವೇಣಿ ನೀರಲಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಿಡಿಪಿಒ ಸುಮಾ ಕೆ.ಎಸ್., ಕೃಷಿ ಸಹಾಯಕ ನಿರ್ದೇಶಕಿ ಸವಿತಾ ಚಕ್ರಸಾಲಿ, ಶಿರಸ್ತೇದಾರ ಬಿ.ಎಚ್. ಬಾವಿಕಟ್ಟಿ, ಕಂದಾಯ ನಿರೀಕ್ಷಕ ಆರ್.ಬಿ. ಮಾಚಕನೂರ, ಬಿಆರ್​ಪಿ ಕೆ.ಜಿ. ಶಿಂಪಿ, ಸಿಬ್ಬಂದಿ ಪಿ.ಯು. ಪಾಟೀಲ, ಕೆ.ಎಸ್. ದಾಸರ, ಮಂಜುನಾಥ ಚವ್ಹಾಣ, ಲತಾ ಮ್ಯಾಗೇರಿ, ಆರ್.ಎಸ್. ಜೋಶಿ, ಕೃಷ್ಣಾ ಹುಲ್ಲಮನವರ, ಜಗದೀಶ ಅಗಸರ, ಪುಂಡಲೀಕ ಅಗಸರ, ಪರಶುರಾಮ ಈಳಗೇರ, ಜಿಶಾನಖಾನ್ ಪಠಾಣ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts