More

    ಮಡಿವಾಳ ಸಮಾಜದ ಹಿರಿಮೆ ಹೆಚ್ಚಿಸಿದ ಮಾಚಿದೇವ

    ಹಿರೇಕೆರೂರ: ಯಾವುದೇ ಸಮುದಾಯ ಕೆಳಮಟ್ಟದಿಂದ ಮೇಲ್ಮಟ್ಟದವರೆಗೆ ಅಭಿವೃದ್ಧಿ ಹೊಂದಲು ಅವರ ಪರ ಧ್ವನಿ ಎತ್ತಿದ ಮಹನೀಯರಲ್ಲಿ ಮಡಿವಾಳ ಮಾಚಿದೇವರು ಒಬ್ಬರು. ಇದು ಮಡಿವಾಳ ಸಮಾಜದ ಹಿರಿಮೆಗೆ ಬಹುದೊಡ್ಡ ಶಕ್ತಿ ತುಂಬಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

    ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ತಾಲೂಕು ಆಡಳಿತದ ವತಿಯಿಂದ ಗುರುವಾರ ಏರ್ಪಡಿಸಿದ್ದ ಮಡಿವಾಳ ಮಾಚಿದೇವರ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಮಡಿವಾಳರ ಸಮುದಾಯಕ್ಕೆ ಶಕ್ತಿ ನೀಡುವ ಉದ್ದೇಶದಿಂದ ಬಸವಣ್ಣನವರ ಕಾಲದಲ್ಲಿ ಮಾಚಿದೇವರನ್ನು ಗುರುತಿಸಿ, ವಿಶೇಷ ಸ್ಥಾನಮಾನ ನೀಡಿ, ಅವರ ವಚನಗಳನ್ನು ಪರಿಚಯಿಸಿದ್ದರಿಂದ ಇಂದು ಈ ಸಮುದಾಯವನ್ನು ಪ್ರತಿಯೊಬ್ಬರೂ ಗುರುತಿಸುವಂತಾಗಿದೆ. ಮಡಿವಾಳ ಸಮುದಾಯದವರು ಕೇವಲ ಒಂದೇ ವೃತ್ತಿ ಅಳವಡಿಸಿಕೊಳ್ಳದೆ, ಪ್ರತಿಯೊಬ್ಬರೂ ಕಡ್ಡಾಯವಾಗಿ ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕರಿಸುವಂತಾಗಬೇಕು ಅಂದಾಗ ಮಾತ್ರ ತುಳಿತಕ್ಕೊಳಗಾದ ಈ ಸಮುದಾಯ ಸಮಾಜಮುಖಿಯಾಗಿ ಪ್ರತಿಯೊಂದು ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರಲು ಸಾಧ್ಯ ಎಂದರು.

    ಜಿಲ್ಲಾ ಮಡಿವಾಳ ಸಮಾಜದ ಅಧ್ಯಕ್ಷ ಸುರೇಶ ಮಡಿವಾಳರ, ತಾಲೂಕು ಮಡಿವಾಳರ ಸಮಾಜದ ಆಡಳಿತ ಮಂಡಳಿ ಅಧ್ಯಕ್ಷ ರಮೇಶ ಮಡಿವಾಳರ, ತಹಸೀಲ್ದಾರ್ ಪ್ರಭಾಕರಗೌಡ ಎಚ್., ಮಾತನಾಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ನಿಲೇಶ ಎಸ್.ಎಂ., ಉಪನ್ಯಾಸ ನೀಡಿದರು. ಪಪಂ ಸದಸ್ಯರಾದ ಮಹೇಂದ್ರ ಬಡಳ್ಳಿ, ಸನಾವುಲ್ಲಾ ಮಕಾಂದಾರ, ತಾಲೂಕು ಮಡಿವಾಳರ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಮಧುಶ್ರೀ ಮಡಿವಾಳರ, ಬಿಇಒ ಎನ್.ಶ್ರೀಧರ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು. ಸಹಾಯಕ ಅಧಿಕಾರಿ ನಾಗರಾಜ ಕಟ್ಟಿಮನಿ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts