More

    ತೆಲಂಗಾಣದಲ್ಲೊಂದು ಸೆಕ್ಸ್ ಕರ್ಮಕಾಂಡ- ದೇಣಿಗೆ ನೀಡುವ ಸೋಗಿನಲ್ಲಿ ಬರುತ್ತಾರಲ್ಲಿಗೆ ಕಾಮುಕರು!

    ಹೈದರಾಬಾದ್: ಅದು ತೆಲಂಗಾಣದ ಮೆಡ್ಚಲ್ ಜಿಲ್ಲೆಯ ಆ ಮಾರುತಿ ಅನಾಥಾಶ್ರಮ. ಅಲ್ಲಿ ಏನೂ ಅರಿಯದ ಮುಗ್ಧ ಕಂದಮ್ಮಗಳು ತಮಗೆ ಬಲವಾದ ರಕ್ಷಣೆ ಇದೇ ನಂಬಿವೆ. ಆದರೆ ಅಲ್ಲಿ ಮೋಸದ ದೊಡ್ಡ ಜಾಲವೇ ಇದೆ. ಅನಾಥಾಶ್ರಮಕ್ಕೆ ಉದಾರ ರೂಪದ ದೇಣಿಗೆ ನೀಡುವ ಸೋಗಿನಲ್ಲಿ ಬರುವ ಕಾಮುಕರು ಸೆಕ್ಸ್ ದಾಹ ತೀರಿಸಿಕೊಳ್ಳಲು ಏನೂ ಅರಿಯದ ಮುಗ್ಧ ಕಂದಮ್ಮಗಳನ್ನು ಬಳಸಿಕೊಂಡಿದ್ದಾರೆ.
    ಇತ್ತೀಚೆಗೆ ಅಂಥದ್ದೇ ಒಂದು ಘಟನೆ ಅಲ್ಲಿ ನಡೆದಿದೆ. 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದ ಮೇಲೆ ಬಾಯ್ಬಿಟ್ಟ ಹುಡುಗಿ ಈ ಅನಾಥಾಶ್ರಮದಲ್ಲಿ ಅತ್ಯಾಚಾರಕ್ಕೊಳಗಾದವಳು ತಾನೊಬ್ಬಳೇ ಅಲ್ಲ. ಇನ್ನೂ ಹಲವರಿದ್ದಾರೆ ಎಂದಿದ್ದಾಳೆ.

    ಇದನ್ನೂ ಓದಿ: ಪೊಲೀಸ್​ ಪೇದೆ ಠಾಣೆಯಲ್ಲಿ ಥಳಿಸಿದನೆಂದು ಆತ್ಮಹತ್ಯೆ ಮಾಡಿಕೊಂಡ ಯುವತಿ

    ನಡೆದದ್ದೇನು? : ಆ ಅನಾಥಾಶ್ರಮದಲ್ಲಿ 14 ವರ್ಷದ ಬಾಲಕಿಯ ಮೇಲೆ ಮೂವರು ವ್ಯಕ್ತಿಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಾಲಕಿ ಕಳೆದ ಒಂದು ವರ್ಷದಿಂದ ಅಲ್ಲಿ ವಾಸಿಸುತ್ತಿದ್ದಳು.
    ಅನಾಥಾಶ್ರಮದ ಮಾಲೀಕಳೂ, ಹಾಸ್ಟೆಲ್ ವಾರ್ಡನ್ ಆಗಿರುವ ಚೀಲುಕುರಿ ವಿಜಯಾ ಹಾಗೂ ಆಕೆಯ ಸಹೋದರ ಸುರಪನೇಣಿ ಜಯದೀಪ್ ಈ ಮೋಸದ ದಂಧೆಯಲ್ಲಿರುವವರು. ನರೇಡ್ಲಾ ವೇಣುಗೋಪಾಲ್ ರೆಡ್ಡಿ ಅನಾಥಾಶ್ರಮಕ್ಕೆ ಲಂಚ ನೀಡುತ್ತಿದ್ದ.
    ಅಪ್ರಾಪ್ತ ಬಾಲಕಿಯನ್ನು 2015 ರಲ್ಲಿ ಆಕೆಯ ಚಿಕ್ಕಪ್ಪ ಅನಾಥಾಶ್ರಮಕ್ಕೆ ಕರೆತಂದು ಬಿಟ್ಟಿದ್ದ. 2019 ರಲ್ಲಿ ಒಂದು ದಿನ ವಿಜಯಾ ಬಾಲಕಿಗೆ 5 ನೇ ಮಹಡಿಯಲ್ಲಿರುವ ಕೋಣೆಗೆ ಹೋಗುವಂತೆ ತಿಳಿಸಿದ್ದಾಳೆ. ಅಲ್ಲಿಗೆ ಬಂದ ವೇಣುಗೋಪಾಲ್ ಬಾಲಕಿಗೆ ನಿದ್ರಾಜನಕ ಜ್ಯೂಸ್ ನೀಡಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

    ಇದನ್ನೂ ಓದಿ: ಆಕೆಯೊಂದಿಗಿನ ಪ್ರತಿ ಗಳಿಗೆಯನ್ನೂ ವಿಡಿಯೋ ಮಾಡಿದ್ದ ಕಾಮುಕ…..

    ಅಪ್ರಾಪ್ತ ಬಾಲಕಿ ಈ ಘಟನೆಯ ಬಗ್ಗೆ ಅನಾಥಾಶ್ರಮ ವಾರ್ಡನ್‌ಗೆ ಮಾಹಿತಿ ನೀಡಿದ್ದಾಳೆ. ಆದರೆ ಈ ಕುರಿತು ಆಕೆಗೆ ಬೆದರಿಕೆ ಹಾಕಲಾಗಿತ್ತು. ಇದರ ಬೆನ್ನಲ್ಲೇ ಬಾಲಕಿಯ ಮೇಲೆ ಕಾಮುಕ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ.
    ವಿಜಯಾ ಮತ್ತು ಆಕೆಯ ಸಹೋದರನಿಗೆ ಕಾಮುಕ ವೇಣುಗೋಪಾಲ್ ಹಲವು ಬಾರಿ ಹಣ ನೀಡಿದ್ದಲ್ಲದೇ ಹಣದ ಆಸೆಯನ್ನೂ ತೋರಿಸಿದ್ದಾನೆ. ಈ ಅನಾಥಾಶ್ರಮದಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆ ತಾನೊಬ್ಬಳೇ ಅಲ್ಲ ಇನ್ನು ಹಲವರಿದ್ದಾರೆ ಎಂದು ಆ ಬಾಲಕಿ ತಿಳಿಸಿದ್ದಾಳೆ.
    ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.

    ಇದನ್ನೂ ಓದಿ : ‘ಹಿಂದಿ ಮಾತನಾಡಲು ಬರದಿದ್ದ ನೀವೊಬ್ಬರು ಭಾರತೀಯರಾ?’

    ಪೆಟ್ಟಿನ ಮೇಲೆ ಪೆಟ್ಟು: ಲಾಕ್ ಡೌನ್ ಸಮಯದಲ್ಲಿ, ಬಾಲಕಿ ತನ್ನ ಚಿಕ್ಕಪ್ಪನ ಮನೆಯಲ್ಲಿರಲು ಹೋದಳು. ಸ್ವಲ್ಪ ದಿನಗಳ ನಂತರ ಮರಳಿ ಬಂದಾಗ COVID-19 ಪರೀಕ್ಷಾ ಫಲಿತಾಂಶವಿಲ್ಲದೆ ಬಾಲಕಿ ಅನಾಥಾಶ್ರಮಕ್ಕೆ ಮರಳಲು ವಾರ್ಡನ್ ನಿರಾಕರಿಸಿದ್ದರು. ಏತನ್ಮಧ್ಯೆ, ಬಾಲಕಿ ಮೇಲೆ ಆಕೆಯ ಚಿಕ್ಕಪ್ಪ ಹಲ್ಲೆ ನಡೆಸಿದ್ದ. ಗಾಯಗೊಂಡಿದ್ದ ಬಾಲಕಿ ಕುಂಟುತ್ತಿದ್ದಳು.
    ಆಕೆ ನಂತರ ಚಿಕ್ಕಮ್ಮನ ಮನೆಗೆ ಹೋದಳು. ಅಲ್ಲಿ ಗಾಯದ ಕುರಿತು ಕೇಳಿದಾಗ ಬಾಲಕಿ ತನ್ನ ಮೇಲೆ ನಡೆದ ಹಲ್ಲೆ, ದೈಹಿಕ ಕಿರುಕುಳ ಹಾಗೂ ಅತ್ಯಾಚಾರದ ಘಟನೆಯನ್ನೆಲ್ಲ ಚಿಕ್ಕಮ್ಮನಿಗೆ ತಿಳಿಸಿದಳು. ಇದೆಲ್ಲವನ್ನು ಆಕೆ ಬಹಿರಂಗಪಡಿಸಿದ ನಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇದನ್ನು ಓದಿ: ಮುಂಬೈ ಲೋಕಲ್​ ಟ್ರೈನ್​ನಲ್ಲಿ ಕಳೆದುಕೊಂಡಿದ್ದ ಪರ್ಸ್​ 14 ವರ್ಷಗಳ ಬಳಿಕ ಸಿಕ್ಕಾಗ…

    ಶಿಶು ಕಲ್ಯಾಣ ಸಮಿತಿಯ ಅಧಿಕಾರಿಗಳು ಆಗಸ್ಟ್ 1 ರಂದು ಅನಾಶ್ರಾಮಕ್ಕೆ ಭೇಟಿ ನೀಡಿದ್ದಾರೆ. ಆ ಸಂದರ್ಭದಲ್ಲಿ ಯಾವ ಮಕ್ಕಳೂ ದೌರ್ಜನ್ಯದ ವಿಷಯವನ್ನು ಬಹಿರಂಗ ಪಡಿಸಿಲ್ಲ. ಅವರು ಭಯಭೀತರಾಗಿದ್ದಾರೆ, ಅವರನ್ನು ಬೇರೊಂದು ಮಕ್ಕಳ ರಕ್ಷಣಾ ಕೇಂದ್ರಕ್ಕೆ ಕಳುಹಿಸಲಾಗಿದೆ. ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪ್ರಧಾನಿ ಮೋದಿಯವರ ಫೋಟೋ ಟ್ಯಾಂಪರಿಂಗ್​; ಕಾಂಗ್ರೆಸ್​ ನಾಯಕನ ವಿರುದ್ಧ ಎಫ್​ಐಆರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts