More

    ಮುಂಬೈ ಲೋಕಲ್​ ಟ್ರೈನ್​ನಲ್ಲಿ ಕಳೆದುಕೊಂಡಿದ್ದ ಪರ್ಸ್​ 14 ವರ್ಷಗಳ ಬಳಿಕ ಸಿಕ್ಕಾಗ…

    ಮುಂಬೈ: ಒಬ್ಬ ವ್ಯಕ್ತಿ ಮುಂಬೈ ಲೋಕಲ್​ ಟ್ರೈನ್​ನಲ್ಲಿ ಪ್ರಯಾಣಿಸುವಾಗ ಕಳೆದುಕೊಂಡಿದ್ದ ಪರ್ಸ್​ 14 ವರ್ಷಗಳ ಬಳಿಕ ಸಿಕ್ಕಿದೆ. ಮುಂಬೈ ಪೊಲೀಸರು ಪ್ರಾಮಾಣಿಕವಾಗಿ ಆ ವ್ಯಕ್ತಿಗೆ ಕರೆ ಮಾಡಿ, ಈ ವಿಷಯ ತಿಳಿಸಿದಾಗ ಅವರಿಗೇ ಅಚ್ಚರಿಯಾಗಿದೆ. ಅದರಲ್ಲೂ ವಿಶೇಷವಾಗಿ ಇದೀಗ ರದ್ದಾಗಿರುವ 500 ರೂ. ನೋಟು ಇದೆ ಎಂದಾಗ ಅವರ ಅಚ್ಚರಿ ನೂರ್ಮಡಿಗೊಂಡಿದೆ.

    ಹೇಮಂತ್​ ಪದಾಲ್ಕರ್​ ಆ ಪರ್ಸ್​ ಕಳೆದುಕೊಂಡಿದ್ದವರು. 2006ರಲ್ಲಿ ಅವರು ಛತ್ರಪತಿ ಶಿವಾಜಿ ಮಹಾರಾಜ್​ ಟರ್ಮಿನಸ್​ನಿಂದ ಪನ್ವೇಲ್​ಗೆ ಲೋಕಲ್​ ಟ್ರೈನ್​ನಲ್ಲಿ ಹೋಗುತ್ತಿದ್ದಾಗ ಈ ಪರ್ಸ್​ ಅನ್ನು ಕಳೆದುಕೊಂಡಿದ್ದರು ಎಂದು ಸರ್ಕಾರಿ ರೈಲ್ವೆ ಪೊಲೀಸ್​ (ಜಿಆರ್​ಪಿ) ಅಧಿಕಾರಿಗಳು ತಿಳಿಸಿದ್ದಾರೆ.
    ಈ ವರ್ಷದ ಏಪ್ರಿಲ್​ನಲ್ಲಿ ವಾಷಿಯ ಜಿಆರ್​ಪಿ ಸಿಬ್ಬಂದಿ ಅವರಿಗೆ ಕರೆ ಮಾಡಿ ಪರ್ಸ್​ ಸಿಕ್ಕಿರುವ ಬಗ್ಗೆ ಮಾಹಿತಿ ಕೊಟ್ಟಿದ್ದರು. ಆಗ ಕೋವಿಡ್​-19 ಲಾಕ್​ಡೌನ್​ ಇದ್ದುದರಿಂದ ಅವರಿಗೆ ಹೋಗಿ ಆ ಪರ್ಸ್​ ಅನ್ನು ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ.

    ಇದನ್ನೂ ಓದಿ: ತುಂಗಭದ್ರಾ ಜಲಾಶಯ ಭರ್ತಿಗೆ ಹನ್ನೊಂದೇ ಅಡಿ ಬಾಕಿ: ಒಂದೇ ದಿನ 8.5 ಟಿಎಂಸಿ ಅಡಿ ಒಳಹರಿವು

    ಲಾಕ್​ಡೌನ್​ ನಿಯಮ ಸಡಿಲಗೊಂಡು, ಸಾರ್ವಜನಿಕರ ಸಂಚಾರಕ್ಕೆ ಅವಕಾಶವಾದ ನಂತರದಲ್ಲಿ ಪನ್ವೇಲ್​ ನಿವಾಸಿಯಾದ ಪದಾಲ್ಕರ್​ ಅವರು ಇತ್ತೀಚೆಗೆ ಜಿಆರ್​ಪಿ ಕಚೇರಿಗೆ ಹೋಗಿ ಪರ್ಸ್​ ಅನ್ನು ಪಡೆದುಕೊಂಡಿದ್ದಾರೆ.

    ಪರ್ಸ್​ ಕಳೆದುಕೊಂಡ ಸಂದಭದಲ್ಲಿ 2016ರಲ್ಲಿ ಚಲಾವಣೆ ರದ್ದುಗೊಂಡ 500 ರೂ. ಸೇರಿ ಒಟ್ಟು 900 ರೂ. ಇತ್ತು. ಇದೀಗ ವಾಷಿ ಜಿಆರ್​ಪಿ ಅವರು ನನಗೆ 300 ರೂ. ಮರಳಿಸಿದ್ದಾರೆ. 100 ರೂ.ಗಳನ್ನು ಸ್ಟ್ಯಾಂಪ್​ ಪೇಪರ್​ಗಾಗಿ ತೆಗೆದುಕೊಂಡರು. ಚಲಾವಣೆ ರದ್ದುಗೊಂಡಿರುವ 500 ರೂ.ಗಳನ್ನು ಬದಲಿಸಿದ ಬಳಿಕ 500 ರೂ. ಮರಳಿಸುವುದಾಗಿ ಹೇಳಿದ್ದಾರೆ ಎಂದು ಹೇಳಿದ್ದಾರೆ.

    ತಮ್ಮ ಪರ್ಸ್​ ಕದ್ದಿದ್ದ ವ್ಯಕ್ತಿಯನ್ನು ಕೆಲದಿನಗಳ ಹಿಂದೆ ಬಂಧಿಸುದುದಾಗಿ ಜಿಆರ್​ಪಿ ಅಧಿಕಾರಿಗಳು ತಿಳಿಸಿದ್ದಾರೆ. ಆತನ ಬಳಿಯಿಂದ ನನ್ನ ಪರ್ಸ್​ ಅನ್ನು ವಶಕ್ಕೆ ಪಡೆದು ನೋಡಿದಾಗ ಅದರಲ್ಲಿ 900 ರೂ.ಗಳು ಹಾಗೆಯೇ ಇತ್ತು ಎಂದು ಹೇಳಿದ್ದಾಗಿ ತಿಳಿಸಿದ್ದಾರೆ.

    ಹಾರ್ದಿಕ್​ ಪಾಂಡ್ಯ ಪುತ್ರನ ಹೆಸರು ಬಹಿರಂಗ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts